ಆಕ್ಸಿಜನ್ ಕನ್ಸಂಟ್ರೇಟರ್ ಹೇಗೆ ಕೆಲಸ ಮಾಡುತ್ತದೆ? ಎಷ್ಟು ವಿಧಗಳಲ್ಲಿವೆ? ವಿವರ ಇಲ್ಲಿದೆ
ಸದ್ಯ ಭಾರತದಲ್ಲಿ ಕೋವಿಡ್-19 ಸೋಂಕಿನ ಎರಡನೇ ಅಲೆ ಜೋರಾಗಿಯೇ ಇದೆ, ಪ್ರತಿ ದಿನ ನಾಲ್ಕು ಲಕ್ಷ ದಾಟುತ್ತಿರುವ ಹೊಸ ಕೇಸ್ ಗಳು, ಇದರೊಂದಿಗೆ ಏರುತ್ತಿರುವ ಸಾ’ವಿನ ಸಂಖ್ಯೆ, ಇದೆಲ್ಲದಕ್ಕಿಂತ ಮುಖ್ಯವಾಗಿ ದೊಡ್ಡ ದೊಡ್ಡ ಶಹರಗಳಲ್ಲಿನ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಹಿತ ಬೆಡ್ ಗಳ ಕೊರತೆ, ಅದಷ್ಟೇ ಅಲ್ಲದೇ ಇರುವ ಬೆಡ್ ಗಳಿಗೂ ಆಕ್ಸಿಜನ್ ಸಿಲಿಂಡರ್ ಗಳ ಕೊರತೆ ಬಹುಮುಖ್ಯವಾಗಿ ಕಾಡುತ್ತಿರುವುದನ್ನು ಸರ್ಕಾರ ಕಷ್ಟ ಪಟ್ಟು ನಿಭಾಯಿಸುತ್ತಿದೆ.
ಸರ್ಕಾರ ಅದೇನೇ ಪೇಚಾಡಿದರೂ ದೊಡ್ಡ ಜನಸಂಖ್ಯೆ ಉಳ್ಳ ನಮ್ಮಲ್ಲಿ ಪ್ರತಿದಿನ ಲಕ್ಷ ಸಂಖ್ಯೆಯಲ್ಲಿ ಬರುತ್ತಿರುವ ರೋಗಿಗಳಿಗೆ ಆಕ್ಸಿಜನ್ ಕೊಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ರೋಗಿಗಳ ಸಂಬಂಧಿಕರು ಕೂಡ ಆಕ್ಸಿಜನ್ ಗಾಗಿ ಪರದಾಡುತ್ತಿರುವುದನ್ನು ದಿನನಿತ್ಯ ನೋಡಬಹುದು. ಇಂತಹ ಸಮಯದಲ್ಲಿ ಆಕ್ಸಿಜನ್ ಕನ್ಸಂಟ್ರೇಟರ್ (Concentrator) ಗಳಿಗೆ ಬೇಡಿಕೆ ಹೆಚ್ಚಾಗುತ್ತಾ ಸಾಗಿದೆ.
ಇಷ್ಟಕ್ಕೂ ಈ ಆಕ್ಸಿಜನ್ ಕನ್ಸಂಟ್ರೇಟರ್ ಅಂದರೇನು? ಅದು ಹೇಗೆ ಕೆಲಸ ಮಾಡುತ್ತದೆ, ಅದು ಎಷ್ಟು ವಿಧವಾಗಿ ಸಿಗುತ್ತದೆ ಹಾಗೂ ಇದನ್ನು ಎಲ್ಲಿಂದ ಖರೀದಿ ಮಾಡಲಾಗುತ್ತದೆ ಎಂಬ ಹಲವು ವಿಷಯ ನಿಮಗೆ ಗೊತ್ತಿರಲಿಕ್ಕಿಲ್ಲ, ಬನ್ನಿ ಹಾಗಾದ್ರೆ ನೋಡೋಣ ಈ ಎಲ್ಲಾ ವಿಷಯಗಳ ಬಗ್ಗೆ ಒಂದು ಸಣ್ಣ ವರದಿಯನ್ನು…
ಆಕ್ಸಿಜನ್ ಕನ್ಸಂಟ್ರೇಟರ್ ಎಂದರೇನು?
ಇದೊಂದು ಮಾನವ ನಿರ್ಮಿತ ಅದ್ಭುತ ಸಾಧನವಾಗಿದ್ದು, ವಾತಾವರಣದಲ್ಲಿನ ಕೇವಲ 21 ಪ್ರತಿಶತ ಆಕ್ಸಿಜನನ್ನು Concentrate ಮಾಡಿ ಸಿಲಿಂಡರ್ ಗೆ ತುಂಬಿಸುವ ಕೆಲಸ ಮಾಡುತ್ತದೆ. ನಿಮಗೆಲ್ಲ ತಿಳಿದಿರುವ ಹಾಗೆ ವಾತಾವರಣದಲ್ಲಿ 78% ನೈಟ್ರೋಜನ್ 21% ಆಕ್ಸಿಜನ್ ಹಾಗೂ ಇನ್ನುಳಿದ 1% ನಲ್ಲಿ ಬೇರೆ ಬೇರೆ ಗ್ಯಾಸ್ ಗಳಿರುತ್ತವೆ. ಅವುಗಳನ್ನೆಲ್ಲ ಹೊರ ತಳ್ಳಿ ಕೇವಲ ಆಕ್ಸಿಜನನ್ನು ಕನ್ಸಂಟ್ರೇಟ್ ಮಾಡಿ ರೋಗಿಗಳಿಗೆ 90 ರಿಂದ 95 ಪ್ರತಿಶತ ಆಕ್ಸಿಜನ್ ನೀಡುತ್ತದೆ.
90% ಕೆಳಗಿದ್ದರೆ ಕೆಲಸ ಮಾಡುವುದಿಲ್ಲ :
ವೈದ್ಯಕೀಯ ತಜ್ಞರ ವರದಿ ಪ್ರಕಾರ ಆಕ್ಸಿಜನ್ ಕನ್ಸಂಟ್ರೇಟರ್ ರೋಗಿಯ ಆಕ್ಸಿಜನ್ ಲೆವೆಲ್ 90% ಗಿಂತ ಕಡಿಮೆ ಇದ್ದಾಗ ಕೆಲಸ ಮಾಡುವುದಿಲ್ಲ ಬದಲಾಗಿ ಆಕ್ಸಿಜನ್ ಲೆವೆಲ್ 90% ಗಿಂತ ಮೇಲೆ ಇದ್ದಾಗ ಮಾತ್ರ ಇದು ಕೆಲಸ ಮಾಡುತ್ತದೆ.
ಆಕ್ಸಿಜನ್ ಸಿಲಿಂಡರ್ ಹಾಗೂ ಆಕ್ಸಿಜನ್ ಕನ್ಸಂಟ್ರೇಟರ್ ನಡುವೆ ಇರುವ ವ್ಯತ್ಯಾಸವೇನು? :
ಆಕ್ಸಿಜನ್ ಸಿಲಿಂಡರ್ ಹಾಗೂ ಆಕ್ಸಿಜನ್ ಕನ್ಸಂಟ್ರೇಟರ್ ಎರಡು ಕೂಡ ರೋಗಿಗಳಿಗೆ ಪ್ರಾ'”ಣವಾಯುವಾದ ಆಕ್ಸಿಜನ್ ಸಪ್ಲೈ ಮಾಡುವ ಕೆಲಸವನ್ನೇ ಮಾಡುತ್ತವೆ. ಆದರೆ ಆಕ್ಸಿಜನ್ ಕನ್ಸಂಟ್ರೇಟರ್ ನೇರವಾಗಿ ವಾತಾವರಣದಿಂದ ಆಕ್ಸಿಜನನ್ನು ಕೇಂದ್ರೀಕರಿಸಿ ರೋಗಿಗಳಿಗೆ ನೀಡಿದರೆ ಆಕ್ಸಿಜನ್ ಸಿಲಿಂಡರನಲ್ಲಿ ಮೊದಲೇಆಕ್ಸಿಜನನ್ನು ಕನ್ಸಂಟ್ರೇಟರ್ ಮಾಡಿ ಇಡಲಾಗಿರುತ್ತದೆ.
ಹಾಗೆಯೇ ಸಿಲಿಂಡರ್ ನಲ್ಲಿರುವ ಆಕ್ಸಿಜನ್ ಮೆಡಿಕಲ್ ಫೀಲ್ಡ್ ನ ಉತ್ಕೃಷ್ಟ ಮಟ್ಟದ್ದಾಗಿರುತ್ತದೆ ಮತ್ತು ಇದು ನೀಡುವ ಆಕ್ಸಿಜನ್ ಪ್ರಮಾಣ 99% ಇರುತ್ತದೆ. ಎಲ್ಲ ರೋಗಿಗಳಿಗೂ ಇದನ್ನು ಸಪ್ಲೈ ಮಾಡಬಹುದು. ಹೀಗಾಗಿ ಆಕ್ಸಿಜನ್ ಸಿಲಿಂಡರ್ ಗೇನೇ ಹೆಚ್ಚು ಕಿಮ್ಮತ್ತು. ಆಕ್ಸಿಜನ್ ಸಿಲಿಂಡರ್ ಒಂದು ನಿಮಿಷಕ್ಕೆ 15 ಲೀಟರ್ ಆಕ್ಸಿಜನ್ ನೀಡುತ್ತದೆ.
ಆಕ್ಸಿಜನ್ ಕನ್ಸಂಟ್ರೇಟರ್ 24/7 ಆಕ್ಸಿಜನ್ ಸಪ್ಲೈ ಮಾಡುತ್ತದೆ, ಆದರೆ ಆಕ್ಸಿಜನ್ ಸಿಲಿಂಡರನ್ನು ರಿಫಿಲ್ ಮಾಡಬೇಕಾಗುತ್ತದೆ, ಅದೇ ರೀತಿಯಲ್ಲಿ ಆಕ್ಸಿಜನ್ ಕನ್ಸಂಟ್ರೇಟರ್ ಜೋರಾಗಿ ಆಕ್ಸಿಜನ್ ನೀಡುವುದಿಲ್ಲ ಹಾಗಾಗಿ ಇದು ಸ್ವಲ್ಪ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಉಪಯೋಗವಾಗುವುದಿಲ್ಲ.
ಆಕ್ಸಿಜನ್ ಕನ್ಸಂಟ್ರೇಟರ್ ಅನ್ನು ಎಲ್ಲಿಂದ ಖರೀದಿ ಮಾಡಬಹುದು :
ಇವುಗಳನ್ನು ಖರೀದಿ ಮಾಡಲು ಕೆಲವು ವೆಬ್ಸೈಟ್ ಗಳಿವೆ ಅಲ್ಲಿಂದಲೇ ಅವುಗಳನ್ನು ಖರೀದಿಸಬೇಕು, ಏಕೆಂದರೆ ಈ ಸಾಧನಕ್ಕೆ ಸಧ್ಯಕ್ಕೆ ಬೇಡಿಕೆ ಜಾಸ್ತಿ ಇರುವದರಿಂದ Humidifier ನ್ನು ಕೂಡ ಆಕ್ಸಿಜನ್ ಕನ್ಸಂಟ್ರೇಟರ್ ಎಂದು ಮಾರಾಟ ಮಾಡುವ ಮೋಸಗಾರರು ಕೂಡ ಹುಟ್ಟಿಕೊಂಡಿರುವುದು ನಮ್ಮ ದುರದೃಷ್ಟ. ಈ ಕೆಳಗೆ ಕೆಲವು ನಂಬಿಗಸ್ಥ ಸೈಟ್ ಗಳನ್ನು ನೀಡಿದ್ದೇವೆ ಅಲ್ಲಿಂದ ಖರೀದಿಸುವುದು ಉತ್ತಮ
1 mg,Nightingales India, Healthklin ಹಾಗೂ Healthgenie. ಅಥವಾ ನಿಮಗೆ ಮೊದಲಿಂದಲೂ ಗೊತ್ತಿರುವ ಅಂಗಡಿಗಳಲ್ಲಿಯೇ ಖರೀದಿಸಿ.
ಆಕ್ಸಿಜನ್ ಕನ್ಸಂಟ್ರೇಟರ್ ಗಳ ಪ್ರಕಾರಗಳು :
1 – ಹೋಮ್ ಆಕ್ಸಿಜನ್ ಕನ್ಸಂಟ್ರೇಟರ್ :
ಇದರ ಹೆಸರೇ ಸೂಚಿಸುವಂತೆ ಇದು ಮನೆಯಲ್ಲಿಯೇ ಐಸೋಲೇಷನ್ ಗೆ ಒಳಗಾಗಿರುವ ಸೊಂಕೀತರಿಗೆ ಉಪಯೋಗವಾಗುವ ಸಾಧನವಾಗಿದೆ. ಈ ಸಾಧನ ವಿದ್ಯುಚ್ಚಕ್ತಿಯ ಸಹಾಯದಿಂದ ಕೆಲಸ ಮಾಡುತ್ತದೆ ಹಾಗೂ ಪೋರ್ಟಬಲ್ ಸಾಧನಕ್ಕಿಂತ ಹೆಚ್ಚು ಆಕ್ಸಿಜನ್ ನೀಡಬಲ್ಲದು.
2 – ಪೋರ್ಟಬಲ್ ಆಕ್ಸಿಜನ್ ಕನ್ಸಂಟ್ರೇಟರ್ :
ಇದು ಎಲ್ಲೆಂದರಲ್ಲಿ ಅವಶ್ಯಕತೆ ಇದ್ದಲ್ಲಿ ತೆಗೆದುಕೊಂಡು ಹೋಗಬಹುದಾದ ಸಾಧನವಾಗಿದ್ದು, ಬ್ಯಾಟರಿ ಚಾಲಿತವಾಗಿರುವ ಕಾರಣ ಚಾರ್ಜ್ ಮಾಡಲು ಮಾತ್ರ ವಿದ್ಯುತ್ ಅವಶ್ಯಕತೆ ಇರುತ್ತದೆ. ಯಾವಾಗಲೂ ವಿದ್ಯುತ್ ಅವಶ್ಯಕತೆ ಇರುವುದಿಲ್ಲ ಹಾಗೂ ಇದರ ಕ್ಷಮತೆ ಕೂಡ ಕಡಿಮೆ ಇರುತ್ತದೆ ಏಕೆಂದರೆ ಇದು ಅಷ್ಟೊಂದು ವೇಗವಾಗಿ ಆಕ್ಸಿಜನ್ ನೀಡಲಾರದು.
ಆಕ್ಸಿಜನ್ ಕನ್ಸಂಟ್ರೇಟರ್ ಖರೀದಿಸುವಾಗ ಈ ಕೆಳಗೆ ನೀಡಿರುವ ಅಂಶಗಳನ್ನು ನೆನೆಪಿಡಿ :
ಕೆಪ್ಯಾಸಿಟಿ : ನೀವು ಈ ಸಾಧನವನ್ನು ಖರೀದಿಸುವಾಗ ಮುಖ್ಯವಾಗಿ ನೀವು ಕೆಪ್ಯಾಸಿಟಿ ನೋಡಬೇಕು. ಹೆಚ್ಚು ಆಕ್ಸಿಜನ್ ಉತ್ಪಾದಿಸುವ ಹೋಮ್ ಆಕ್ಸಿಜನ್ ಕನ್ಸಂಟ್ರೇಟರ್ ಗಳನ್ನು ನೋಡಿ ಖರೀದಿ ಮಾಡಿ.
ಆಕ್ಸಿಜನ್ ಕನ್ಸಂಟ್ರೇಟರ್ ಲೆವೆಲ್ :
ಈ ಸಾಧನದ ಸಹಾಯದಿಂದ 87% ರಿಂದ 93% ವರೆಗೆ ಆಕ್ಸಿಜನ್ ನೀಡುವ ಕ್ಷಮತೆಯುಳ್ಳ ಸಾಧನಗಳು ಸಿಗುತ್ತವೆ. ನಿಮಗೆ ಆಯ್ಕೆಯ ಅವಕಾಶ ಇದ್ದರೆ ಹೆಚ್ಚು ಆಕ್ಸಿಜನ್ ಕನ್ಸಂಟ್ರೇಟ್ ಮಾಡುವ ಸಾಧನವನ್ನೇ ಖರೀದಿಸಿ. ಇನ್ನು ಇವುಗಳ ಬೆಲೆಯ ಬಗ್ಗೆ ಹೇಳುವುದಾದರೆ 40 ಸಾವಿರದಿಂದ ಒಂದು ಲಕ್ಷದವರೆಗೂ ಇವುಗಳ ಬೆಲೆ ಇದೆ.
ಮಾಹಿತಿ ಇಷ್ಟವಾಗಿದ್ದರೆ ಲೈಕ್ ಮಾಡಿ – ಶೇರ್ ಮಾಡಿ
-ಮಂಜುನಾಥ್