Articles

VIDEO : ಕೊರೋನ ಕಾರಣಕ್ಕೆ ಉಸಿರು ಹೋಗುವ ಮೊದಲು ಗರ್ಭಿಣಿ ವೈದ್ಯೆ ಮಾಡಿದ ವಿಡಿಯೊ ನೋಡಿ

ದೇಶದಲ್ಲಿ ಕೊರೋನ ರಣಕೇಕೆ ಮಿತಿಮೀರುತ್ತಿದೆ, ವಿಚಿತ್ರವೆಂದರೆ ಇದು ಎಂಥವರ ಮೇಲೆ ಎಂಥ ಪರಿಣಾಮ ಬೀರುತ್ತದೆ ಎಂದು ಕೂಡ ಹೇಳಲು ಆಗುತ್ತಿಲ್ಲ. ನೂರೆಂಟು ಚಟ ಮಾಡಿದವರು ಹುಷಾರಾಗಿ ಎದ್ದು ಬರುತ್ತಿದ್ದರೆ, ಫಿಟ್ ಇರುವ ಬಾಡಿ ಬಿಲ್ಡರ್ ಗಳು ಸಹ ಮ’ರ’ಣವನ್ನಪ್ಪುತ್ತಿದ್ದಾರೆ. ಯಾವ ರೀತಿ ನಡೆದುಕೊಂಡರೆ ಕೊರೋನ ಬರಲಿಕ್ಕಿಲ್ಲ ಅಥವಾ ಕೊರೊನ ಹೆಚ್ಚು ತೊಂದರೆ ಕೊಡಲಿಕ್ಕಿಲ್ಲ ಎಂಬುದೇ ಗೊತ್ತಾಗುತ್ತಿಲ್ಲ.

ಕೆಳಗಿನ ವಿಡಿಯೊದಲ್ಲಿರುವ ಮಹಿಳೆ ಸ್ವತಃ ದಂತವೈದ್ಯೆಯಾಗಿದ್ದು ಸಾಕಷ್ಟು ಪ್ರಿಕಾಷನ್ ತಗೆದುಕೊಂಡಿದ್ದರು. ಯಾವಾಗಲೂ ಪಿಪಿಇ ಕಿಟ್ ಧರಿಸುತ್ತಿದ್ದರು. ಡಬಲ್ ಮಾಸ್ಕ್ ಹಾಕುತ್ತಿದ್ದರು, ಆದರೂ ಅವರಿಗೆ ಏಪ್ರಿಲ್ 11 ರಂದು ಕೊರೋನ ವಕ್ಕರಿಸಿಕೊಂಡಿತ್ತು. ಅವತ್ತಿನಿಂದ ಆಸ್ಪತ್ರೆಯಲ್ಲಿ ಹೋರಾಡಿದ ದಂತವೈದ್ಯೆ ದೀಪಿಕಾ ಏಪ್ರೀಲ್ 27 ರಂದು ನಿ’ದ’ನ ಹೊಂದಿದರು.

ಮೊನ್ನೆ ವಿಶ್ವ ಅಮ್ಮಂದಿರ ದಿನದ ಅಂಗವಾಗಿ ದೀಪಿಕಾರವರ ಪತಿ ಅವರು ಸಾ’ಯು’ವ ಮುನ್ನ ಮಾಡಿದ ವಿಡಿಯೊವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ವಿಷಾಧಕರ ಸಂಗತಿಯೆಂದರೆ ದೀಪಿಕಾರವರು ಸಾಯುವ ಮುನ್ನ ಗರ್ಬಿಣಿಯಾಗಿದ್ದರು. ಕೊರೊನ ಹೊಡೆತಕ್ಕೆ ತಾಯಿ ಮಗು ಇಬ್ಬರೂ ಸಾ’ವ’ನ್ನಪ್ಪಿದರು.

ಅವರಿಗೆ ಇನ್ನೊಂದು ಮೂರು ವರ್ಷ ಮಗು ಇದ್ದು ಅದನ್ನು ಅನಾಥ ಮಾಡಿ ಪತಿಯ ಬಳಿ ಬಿಟ್ಟು ಇನ್ನೊಂದು ಕಂದನನ್ನು ಜೊತೆಗೆ ಕರೆದುಕೊಂಡು ಹೋದರು. ಅವರ ಪತಿ ರವೀಶ್ ಚಾವ್ಲಾ ವಿಡಿಯೊವನ್ನು ಹಂಚಿಕೊಂಡಿದ್ದು, ತಾಯಿಯ ದಿನದ ಶುಭಾಶಯಗಳು ದೀಪಿಕಾ ಎಂದು ಭಾವುಕರಾಗಿ ಮಡದಿಗೆ ವಿಶ್ ಮಾಡಿದ್ದಾರೆ.

ಪ್ರಾ'”ಣ ಬಿಡುವ ಮುನ್ನ ಡಾಕ್ಟರ್ ದೀಪಿಕಾ ವಿಡಿಯೊ ಒಂದನ್ನು ಮಾಡಿದ್ದು, ಅದರಲ್ಲಿ ಕೊರೋನವನ್ನು ಸುಲಭವಾಗಿ ತಿಳಿಯಬೇಡಿ ಎಂದು ಅವರು ಮನವಿ ಮಾಡಿದ್ದಾರೆ. ಅವರು ಮಾತಾಡುವಾಗ ಕಷ್ಟಪಡುತ್ತಿರುವುದನ್ನು ನೀವು ಅಲ್ಲಿ ನೋಡಬಹುದು. ತುಂಬಾ ಜನ ಕೊರೊನವನ್ನು ತುಂಬಾ ಕ್ಷುಲ್ಲಕವಾಗಿ ತಗೆದುಕೊಂಡಿದ್ದಾರೆ, ಅವರೆಲ್ಲ ಇನ್ನಾದರೂ ಗಂಭೀರವಾಗಿ ತಗೆದಕೊಳ್ಳಿ, ಜಾಗೃತೆಯಿಂದಿರಿ ಎಂಬುದು ಅವರ ಸಂದೇಶವಾಗಿದೆ.

ಮಾಸ್ಕ್ ಹಾಕದೇ ಇರುವುದು, ಬೇಕಾಬಿಟ್ಟಿ ತಿರುಗುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು, ಸ್ವಚ್ಚತೆ ಬಗ್ಗೆ ಗಮನ ಹರಿಸದೇ ಇರುವುದು ಮುಂತಾದ ಬೇಜವಾಬ್ಧಾರಿ ಕೆಲಸಗಳನ್ನು ಮಾಡದೇ ಇನ್ನಾದರೂ ಹುಷಾರಾಗಿರಿ, ಕೊರೋನ ಸೋಲಿಸೋಣ – ಭಾರತ ಗೆಲ್ಲಿಸೋಣ.
-Team Infotrend

Leave a Comment

Your email address will not be published. Required fields are marked *