VIDEO : ಕಂದಾಯ ಇಲಾಖೆ ಸಿಬ್ಬಂದಿಗೆ ದಂಡ ಹಾಕಬೇಡಿ, ಪರಿಶೀಲನೆ ಮಾಡಬೇಡಿ ಎಂದು ಸಬ್ ಇನ್ಸಪೆಕ್ಟರ್ ಗೆ ಆವಾಜ್ ಹಾಕಿದ ತಹಸೀಲ್ದಾರ ಮತ್ತು ಎ.ಸಿ!

ಕಾನೂನು ಅಂದ ಮೇಲೆ ಎಲ್ಲರಿಗೂ ಒಂದೇ, ಸ್ವತಃ ಪೊಲೀಸ್ ಇಲಾಖೆಯವರು ಹೆಲ್ಮೆಟ್ ಹಾಕದಿದ್ದಾಗ, ಮಾಸ್ಕ್ ಹಾಕದಿದ್ದಾಗ ಹಿರಿಯ ಅಧಿಕಾರಿಗಳು ಬಂದು ದಂಡ ಹಾಕಿದ ಉದಾಹರಣೆಗಳಿವೆ. ಆದರೆ ಇಲ್ಲೊಬ್ಬರು ಎಸಿ ಹಾಗೂ ತಹಸೀಲ್ದಾರರು ಕಂದಾಯ ಇಲಾಖೆಯ ನೌಕರರಿಗೆ ದಂಡ ಹಾಕದಂತೆ ಆವಾಜ್ ಹಾಕಿದ್ದಾರೆ.

ಇದು ನಡೆದಿರುವುದು ಮಂಡ್ಯ ಜಿಲ್ಲೆಯ ನಾಗಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ. ಇಲ್ಲಿ ಹೆಲ್ಮೆಟ್ ಇಲ್ಲದೇ ಬಂದ ಕಂದಾಯ ಇಲಾಖೆಯ ಸಿಬ್ಬಂದಿಗೆ ನಾಗಮಂಗಲ ಠಾಣಾ ಸಬ್ ಇನ್ಸಪೆಕ್ಟರ್ ರವಿಶಂಕರ್ ಮತ್ತವರ ಸಿಬ್ಬಂದಿ ಹಿಡಿದು ದಂಡ ಹಾಕಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಎಸಿ ಶಿವಾನಂದಮೂರ್ತಿ ಹಾಗೂ ತಹಸೀಲ್ದಾರ್ ಕುಂಞ ಅಹಮದ್ ಸ್ಥಳಕ್ಕೆ ಆಗಮಿಸಿ ರೆವಿನ್ಯೂ ಇಲಾಖೆಯ ನೌಕರರನ್ನು ಪರಿಶೀಲನೆ ಮಾಡಬಾರದು, ದಂಡ ಹಾಕಬಾರದು ಎಂದು ವಾರ್ನಿಂಗ್ ಮಾಡಿದ್ದಾರೆ. ಹೀಗೆ ಪೊಲೀಸ್ ಸಬ್ ಇನ್ಸಪೆಕ್ಟರ್ ಗೆ ವಾರ್ನಿಂಗ್ ಮಾಡುವ ಬದಲು ತಮ್ಮ ನೌಕರರಿಗೆ ಹೆಲ್ಮೆಟ್ ಹಾಕಲು ವಾರ್ನ್ ಮಾಡಿದ್ದರೆ ಆಗುತ್ತಿತ್ತಲ್ವಾ?

ಈ ವಿಡಿಯೊ ವೈರಲ್ ಆಗಿದ್ದು, ಸರ್ವಜನಿಕರು ಕಾನೂನು ಪಾಲಿಸುಕೊಳ್ಳುವಂತೆ ನೋಡಿಕೊಳ್ಳಬೇಕಾದವರೇ ಹೆಲ್ಮೆಟ್ ಹಾಕದ ತಮ್ಮ ನೌಕರನ ಪರವಾಗಿ ಮಾತಾಡಿ ಎಸೈಗೆ ವಾರ್ನಿಂಗ್ ಮಾಡಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಮೊದಲು ತಹಸಿಲ್ದಾರರವರಿಗೆ ಮೊದಲು ನಿಮ್ಮವರಿಗೆ ಕಾನೂನು ಪಾಲಿಸಲು ಹೇಳಿ ಎಂದು ಜನ ಕಾಮೆಂಟ್ ಮಾಡಿದ್ದಾರೆ.


ಅವರ ಮಾತು ಕೇಳುವುದಾದರೆ ಕಂದಾಯ ಇಲಾಖೆಯವರಿಗೆ ಒಂದು ಕಾನೂನು, ಇತರೆ ಬಡಪಾಯಿ ಸಾರ್ವಜನಿಕರಿಗೆ ಮತ್ತೊಂದು ಕಾನೂನನ್ನು ಮಾರ್ಪಾಡು ಮಾಡಬೇಕಾಗಿದೆ‌. ನಿಮ್ಮ ಅಭಿಪ್ರಾಯ ದಾಖಲಿಸಿ. ವಿಜಯವಾಣಿಯವರು ಟ್ವಿಟರ್ ನಲ್ಲಿ ಹಂಚಿಕೊಂಡ ವಿಡಿಯೊ ಮೇಲಿದೆ ನೋಡಿ…
-Team Infotrend