ಲಾಕ್ ಡೌನ್ ನಿಂದ ಆರ್ಥಿಕ ಸಂಕಟದಲ್ಲಿ ಟಾಪ್ ನಟಿ – ಅಪ್ಪ-ಅಮ್ಮನೂ ಸಹಾಯ ಮಾಡುತ್ತಿಲ್ಲ : ಪಾಪ ಹೀಗಾಗಬಾರದಿತ್ತು ಎಂದ ಫ್ಯಾನ್ಸ್!

ಮಾಮೂಲಾಗಿ ದೊಡ್ಡ ನಟರಾಗಲಿ ಅಥವಾ ಅವರ ಮಕ್ಕಳಾಗಲಿ ಆರ್ಥಿಕ ಸಂಕಷ್ಟಕ್ಕೆ ಸಿಕ್ಕು ನಲುಗಿದ ಉದಾಹರಣೆಗಳು ತುಂಬಾ ಕಮ್ಮಿ. ಮೂರು ತಲೆಮಾರಿಗಾಗುವಷ್ಟು ಗಳಿಸಿ ಇಟ್ಟಿರುತ್ತಾರಾದ್ದರಿಂದ ಮಕ್ಕಳು-ಮೊಮ್ಮಕ್ಕಳಿಗೆ ಯಾವ ಹಣಕಾಸಿನ ಬಿಕ್ಕಟ್ಟು ಎದುರಾಗದು. ಆದರೆ ಈ ದೊಡ್ಡ ನಟನ ಮಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.

ನಮ್ಮ ಅಪ್ಪ ಅಮ್ಮ ನನಗೆ ಸಹಾಯ ಮಾಡುತ್ತಿಲ್ಲ, ಹೀಗಾಗಿ ನನಗೆ ಹಣಕಾಸಿನ ಸಮಸ್ಯೆ ತುಂಬಾ ಇದೆ ಎಂದು ಸ್ವತಃ ಆಕೆಯೇ ಹೇಳಿಕೊಂಡಿದ್ದಾರೆ. ಆ ನಟಿಯ ಹೆಸರು ಶ್ರುತಿ ಹಾಸನ್ ಅಂತ, ಅವರ ತಂದೆ ಕಮಲ್ ಹಾಸನ್! ಕೊರೋನ ಲಾಕ್ ಡೌನ್ ನಿಂದ ಬರೀ ಬಡವರಿಗಷ್ಟೇ ಅಲ್ಲ, ಇಂಥ ಟಾಪ್ ನಟಿಯರಿಗೂ ಸಂಕಷ್ಟ ಎದುರಾಗಿದೆ.

ನಾನೇನೂ ಮುಚ್ಚಿಡುವುದಿಲ್ಲ ಎಂದಿರುವ ಶ್ರುತಿ ಹಾಸನ್ ಎಲ್ಲವನ್ನೂ ಬಿಚ್ಚಿಟ್ಟಿದ್ದಾರೆ. ಕೊರೋನ ಆರಂಭಕ್ಕೂ ಮುನ್ನ ಮನೆ ತಗೆದುಕೊಂಡು ಬಿಟ್ಟೆ, ಹೀಗಾಗಿ ಅವತ್ತು ಸಂಕಷ್ಟ ಎದುರಾಗಿದ್ದು ಇನ್ನೂ ಇದೆ. ಕರೋನ ಕಾರಣಕ್ಕೆ ಲಾಕ್ ಡೌನ್ ಆಗಿ ಚಿತ್ರೀಕರಣ ಇಲ್ಲದಾಗಿದೆ, ಅಂದರೆ ಕೆಲಸ ಇಲ್ಲದಾಗಿದೆ, ಹೀಗಾಗಿ ಹಣಕಾಸಿನ ಸಮಸ್ಯೆ ಎದುರಾಗಿದೆ. ನಮ್ಮ ಅಪ್ಪ ಅಮ್ಮ ಸಹಾಯ ಮಾಡುವುದಿಲ್ಲ ಎಂದು ಕೂಡ ಶ್ರುತಿ ಹೇಳಿಕೊಂಡಿದ್ದಾರೆ.

ಜೊತೆಗೆ ನಾನು ಸ್ವತಂತ್ರ ಮಹಿಳೆ, ಎಲ್ಲವನ್ನೂ ಏಕಾಂಗಿಯಾಗಿ ನಿಭಾಯಿಸುತ್ತೇನೆ ಎಂದು ಕೀಡ ಶ್ರುತಿ ಹೇಳಿದ್ದಾರೆ. ಹತ್ತಾರು ಬಿಲ್ ಭರಿಸಬೇಕಾಗುತ್ತದೆ, ಸಾಕಷಗಟು ಖರ್ಚಿದೆ ಎಲ್ಲದಕ್ಕೂ ದುಡ್ಡು ಬೇಕು, ಹೀಗಾಗಿ ನಾನು ಕೆಲಸ ಮಾಡಲೇಬೇಕಿದೆ ಎಂದು ಅವರು ಅಲವತ್ತುಕೊಂಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅವರ ಫ್ಯಾನ್ಸ್ ಹೀಗಾಗಬಾರದಿತ್ತು ಎಂದು ಕಾಳಜಿ ವ್ಯಕ್ತಪಡಿಸಿದ್ದಾರೆ.

ಲಾಕ್ ಡೌನ್ ಮುಗಿಯುವುದನ್ನು ಕಾಯುತ್ತಿದ್ದೇನೆ, ಮುಗಿದ ತಕ್ಷಣ ಕೆಲಸದಲ್ಲಿ ಪಾಲ್ಗೊಳ್ಳುತ್ತೇನೆ, ನಾನು ಏನೂ ಮುಚ್ಚಿಡಲ್ಲ, ಹಾಗೆ ನೋಡಿದರೆ ಕೊರೋನ ವೈರಸ್ ಪೂರ್ತಿ ಕೊನೆಯಾಗುವವರೆಗೆ ಕಾಯುವಷ್ಟು ಕೂಡ ನನ್ನಿಂದ ಸಾಧ್ಯವಿಲ್ಲ, ಬೇಗ ಕೆಲಸ ಆರಂಭಿಸಿ ಆರ್ಥಿಕ ಸಂಕಷ್ಟಕ್ಕೆ ಮುಕ್ತಿ ಹಾಡಬೇಕಾಗಿದೆ ಎಂದಿದ್ದಾರೆ.

ಕೊರೋನ ಬರೀ ಮಧ್ಯಮ ವರ್ಗದವರಿಗೆ ಹಾಗೂ ಬಡವರಿಗೆ ಮಾತ್ರವಲ್ಲ, ೆಲ್ಲರಿಗೂ ಸಂಕಷ್ಟ ತಂದೊಡ್ಡಿದೆ. ಅದರಲ್ಲೂ ಇಂಥ ನಟಿಯರು ತಮ್ಮ ಆದಾಯಕ್ಕೆ ತಕ್ಕನಾಗಿ ಕಮಿಟ್ ಮೆಂಟ್ ಮಾಡಿಕೊಂಡಿರುತ್ತಾರೆ, ಈಗ ಕಮ್ಮಿಯಾದರೆ ನಡೆಯುವುದಿಲ್ಲ, ಈ ಕಾರಣಕ್ಕೇ ಶ್ರುತಿಗೆ ತೊಂದರೆಯಾಗಿರುವುದು
-Team Infotrend