ವಿಡಿಯೊ : ಇದರಲ್ಲಿ ಏನೂ ಬರ್ತಿಲ್ಲ, ಹಾಕ್ಕೊಂಡು ಏನಾಡ್ಲಿ?!
ದಿನದಿಂದ ದಿನಕ್ಕೆ ದೇಶದಲ್ಲಿ ಕೊರೋನ ರಣಕೇಕೆ ಮಿತಿಮೀರುತ್ತಿದೆ. ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡುತ್ತಿದ್ದಾವಾದರೂ ಬೃಹತ್ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಸಾಂಕ್ರಾಮಿಕವನ್ನು ತಡೆಯುವುದು ಸುಲಭದ ಕೆಲಸವಲ್ಲ. ಹೀಗಾಗಿಯೇ ಸಾ’ವಿನ ಸಂಖ್ಯೆ ಹೆಚ್ಚುತ್ತಿರುವುದು. ಮೇಲಾಗಿ ಜನರಲ್ಲಿ ಜಾಗೃತೆ ಕೊರತೆಯಿದೆ, ಅದಕ್ಕಿಂತ ಹೆಚ್ಚಾಗಿ ಬೇಜವಾಬ್ದಾರಿತನವಿದೆ. ಅದೆಲ್ಲದರ ಪರಿಣಾಮ ಇಂದು ದೇಶ ಹಾಗೂ ರಾಜ್ಯದಲ್ಲಿ ಸಾ’ವು ಹೆಚ್ಚುತ್ತಿವೆ.
ಮೊದಲಿನ ಅಲೆಯಲ್ಲಿ ವಯಸ್ಸಾದವರನ್ನು ಅಥವಾ ರೋಗನಿರೋಧಕ ಶಕ್ತಿ ಕಡಿಮೆ ರನ್ನು ಕೊರೋನ ತನ್ನ ತೆಕ್ಕೆಗೆ ತಗೆದುಕೊಳ್ಳುತ್ತಿತ್ತು. ಆದರೆ ಈ ಸಲ ಹಾಗಲ್ಲ, ಯುವಕರೇ ಹೆಚ್ಚು ಇದರ ಟಾ’ರ್ಗೆ’ಟ್ ಆಗುತ್ತಿದ್ದಾರೆ. ದಿನಬೆಳಗಾದರೆ ಪರಿಚಿತರ ಸಾ’ವಿನ ಸುದ್ದಿ ಕೇಳಿ ಕೇಳಿ ಜನ ಬೇಸತ್ತು ಹೋಗಿದ್ದಾರೆ. ಅದೆಂಥ ಉತ್ಕೃಷ್ಟ ಚಿಕಿತ್ಸೆ ಸಿಕ್ಕವರು ಕೂಡ ಹುಷಾರಾಗಿ ಎದ್ದು ಬರುವುದು ಸಂಶಯವಾಗಿದೆ. ರಾಜಕಾರಣಿಗಳು, ನಟರು ಕೂಡ ಇದಕ್ಕೆ ಹೊರತಲ್ಲ.
ಕೆಳಗಿರುವ ವಿಡಿಯೊದಲ್ಲಿ ಇರುವ ವ್ಯಕ್ತಿ ನಿಮಗೆಲ್ಲ ಗೊತ್ತೇ ಇದಾರೆ. ರಾಹುಲ್ ವೋರಾ ಅಂತ. 35 ವರ್ಷದ ರಾಹುಲ್ ವೋರಾ ಉತ್ತರಾಖಂಡ ಮೂಲದವರು. ಒಳಗೊಬ್ಬ ಪುಟ್ಟ ನಟನನ್ನು ಇಟ್ಟುಕೊಂಡು ಸಿಕ್ಕ ಅವಕಾಶಗಳನ್ನೆಲ್ಲ ಬಳಸಿಕೊಂಡು, ಸ್ಟೇಜ್ ಆ್ಯಂಕರಿಂಗ್ ನಿಂದ ಹಿಡಿದು, ದಾರಾವಾಹಿ, ಕಿರುಚಿತ್ರ, ಜಾಹಿರಾತು, ಸಿನೆಮಾ, ಯೂಟ್ಯೂಬ್… ಹೀಗೆ ಎಲ್ಲ ರಂಗದಲ್ಲಿ ಕೈಯಾಡಿಸಿಕೊಂಡು ಬದುಕು ಕಟ್ಟಿಕೊಂಡವರು ರಾಹುಲ್.
ದೆಹಲಿಯಲ್ಲಿ ವಾಸವಿದ್ದ ಇವರನ್ನೂ ಕೊರೋನ ಬ’ಲಿ’ತ’ಗೆದುಕೊಂಡಿತು. ಇದಕ್ಕೆ ಕೊರೋನ ಕಾರಣ ಅನ್ನುವುದಕ್ಕಿಂತ ವೈದ್ಯರ ನಿರ್ಲಕ್ಷ್ಯ ಅನ್ನಬಹುದು. ಏಕೆಂದರೆ ಸಾ’ಯುವ ಮುನ್ನ ರಾಹುಲ್ ಅವರು ಮಾಡಿದ ವಿಡಿಯೊದಲ್ಲಿ ಇದು ಸ್ಪಷ್ಟವಾಗಿದೆ.
ತನಗೆ ಹಾಕಿರುವ ಆಕ್ಸಿಜನ್ ಯಾವಾಗೊ ಖಾಲಿಯಾಗಿ ಹೋಗಿದೆ, “ಇದರಲ್ಲಿ ಏನೂ ಬರ್ತಿಲ್ಲ, ಇದನ್ನು ಹಾಕ್ಕೊಂಡು ಏನ್ ಮಾಡ್ಲಿ” ಎಂದು ರಾಹುಲ್ ಸಾ’ಯುವ ಮುನ್ನ ಮಾಡಿದ ವಿಡಿಯೊದಲ್ಲಿ ಅಳಲು ತೋಡಿಕೊಂಡಿದ್ದಾರೆ. ಅದರಲ್ಲಿ ಅವರಿಗೆ ಮಾತಾಡಲೂ ಕಷ್ಟವಾಗುತ್ತಿರುವುದು ಸ್ಪಷವಾಗುತ್ತದೆ. ಹಾಗೆಯೇ ಅದರಲ್ಲಿ ಅವರ ಕಣ್ಣುಗಳನ್ನು ನೋಡಿ, ಸಾ’ವಿನ ಭ’ಯ ನಿಚ್ಚಳವಾಗಿ ಕಾಣಿಸುತ್ತಿದೆ.
ಗಂಡನ ಸಾ’ವಿನ ನಂತರ ಅವರ ಪತ್ನಿ ಜ್ಯೋತಿ ಆ ವಿಡಿಯೊವನ್ನು ಇನ್ಸ್ಟಾ ದಲ್ಲಿ ಅಪ್ ಲೋಡ್ ಮಾಡಿದ್ದು, ಗಂಡನ ಸಾ’ವಿಗೆ ನ್ಯಾಯ ಕೇಳುವ ಅಭಿಯಾನ ಸುರು ಮಾಡಿದ್ದಾರೆ. ಆತನ ಸಾ’ವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂಬುದು ಆಕೆಯ ಆಗ್ರಹ. ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಯಾನಕ್ಕೆ ಭಾರಿ ಬೆಂಬಲ ಕೂಡ ಸಿಗುತ್ತಿದೆ. ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಕ್ಕಿದ್ದರೆ ರಾಹುಲ್ ಬದುಕುತ್ತಿದ್ದರು ಎಂಬುದು ಬಹುತೇಕರ ಅಭಿಪ್ರಾಯ. ವಿಡಿಯೊ ನೋಡಿ.
-Team Infotrend