ಕಣ್ಣಿಗೆ ಮೋಸ ಮಾಡುವ ಚಿತ್ರ : ಹುಡುಗಿಯ ಅರ್ದ ದೇಹ ಭೂಮಿಯಲ್ಲಿ ಮುಳುಗಿದೆಯಾ? ಕ್ಲಿಕ್ ಮಾಡಿ ಝೂಮ್ ಮಾಡಿ ನೋಡಿ

ಇದು ಟ್ವಿಟರ್ ನಲ್ಲಿ ಹಾವಳಿಯೆಬ್ಬಿಸಿದ ಚಿತ್ರ. ಅಲ್ಲಿ ತುಂಬಾ ಜನರ ಕಣ್ಣಿಗೆ ಮಣ್ಣೆರಚಿ ಬಂದಿದೆ. ಒಂದೇ ಸಲಕ್ಕೆ ನೋಡಿದರೆ ಇದೇನು ಫೋಟೊ ಅಂತ ಅರ್ಥಾನೇ ಆಗುವುದಿಲ್ಲ. ತೀರ ಪರಿಶೀಲಿಸಿ ನೋಡಿದಾಗ ಸತ್ಯ ಅರಿವಾಗುತ್ತದೆ. ಮೇಲ್ನೋಟಕ್ಕೆ ಈ ಚಿತ್ರದಲ್ಲಿ ಒಂದು ಹುಡುಗಿಯ ದೇಹ ಅರ್ದ ಭಾಗ ಮಾತ್ರ ಕಾಣುತ್ತದೆ. ಇನ್ನರ್ದ ಎಲ್ಲಿ ಎಂಬ ಪ್ರಶ್ನೆ ಬರುತ್ತದೆ.

ಹುಡುಗಿಯ ಇನ್ನರ್ದ ದೇಹ ನೆಲದಲ್ಲೇ ಮುಳುಗಿದೆಯಾ? ಅದು ನೆಲವಾ? ಹೇಗೆ ಅರ್ದ ದೇಹ ಒಳಗಿದೆ? ಇತ್ಯಾದಿ ಪ್ರಶ್ನೆ ಏಳುತ್ತವೆ. ಆದರೆ ಅಲ್ಲಿರುವುದೇ ಬೇರೆ. ಅಸಲಿಗೆ ಆ ಚಿತ್ರದಲ್ಲಾಗಲಿ, ಅಥವಾ ಫೋಟೊ ತಗೆದ ಕ್ಯಾಮೆರಾದಲ್ಲಾಗಲಿ ಏನೂ ತಪ್ಪಿಲ್ಲ. ಅದು ಸಹಜವಾಗೇ ಇದೆ, ನಮ್ಮ ಕಣ್ಣಿಗೆ ಅದು ಬೇರೆ ಕಾಣಿಸುತ್ತಿದೆ ಅಷ್ಟೆ.

ವಾಸ್ತವದಲ್ಲಿ ಆ ಫೋಟೊದಲ್ಲಿ ಹುಡುಗಿಯ ಅರ್ದ ದೇಹ ಮಾತ್ರ ಕಾಣುತ್ತಿದೆ, ಅದಕ್ಕೆ ಕಾರಣ ಆಕೆಯ ಪಕ್ಕದಲ್ಲಿ ಗೋಡೆ ಇದೆ. ಹುಡುಗಿಯ ದೇಹದ ಅರ್ದ ಭಾಗವನ್ನು ಗೋಡೆ ಕವರ್ ಮಾಡಿರುವುದರಿಂದ ಆ ಭಾಗ ಕಾಣುತ್ತಿಲ್ಲ. ಇನ್ನರ್ದ ದೇಹ ನೆಲದ ಒಳಗಿರುವ ಹಾಗೆ ಕಾಣುತ್ತಿದೆ.

ಆದರೆ ಗೋಡೆ ಮತ್ತು ಅಕ್ಕಪಕ್ಕದ ನೆಲ ಒಂದೇ ಬಣ್ಣ ಇರುವುದರಿಂದ ಎಲ್ಲ ಮಿಕ್ಸಾಗಿ ಹುಡುಗಿಯ ಅರ್ದ ದೇಹ ನೆಲದಲ್ಲಿ ಹೂತಿರುವ ಹಾಗೆ ಕಾಣಿಸುತ್ತಿದೆ ಅಷ್ಟೇ‌. ಈಗ ಇನ್ನೊಮ್ಮೆ ಪರಿಶೀಲಿಸಿ, ಆ ಹುಡುಗಿ ತನ್ನ ಮೊಣಕೈಯನ್ನು ಗೋಡೆಯ ಮೇಲಿರಿಸಿದ್ದಾಳೆ ನೋಡಿ.

-Team Infotrend