ವಿಡಿಯೊ : ಮಹಾರಾಷ್ಟ್ರದಲ್ಲಿ ಹೊರಬಂದವರಿಗೆ ಪೊಲೀಸರಿಂದ ಪೂಜೆ-ಮಂಗಳಾರತಿ : ನಮ್ ಕಡೆ ಹೀಗೆ ಮಾಡೋದೇ ಇಲ್ಲ, ಡೈರೆಕ್ಟ್ ಪ್ರಸಾದ ಕೊಡ್ತಾರೆ ಎಂದ ನೆಟ್ಟಿಗರು!
ಇದು ಮಹಾರಾಷ್ಟ್ರದ ವಿಡಿಯೊ. ಅಲ್ಲಿ ಕಠಿಣ ಲಾಕ್ ಡೌನ್ ನಡುವೆಯೂ ಜನ ಕುಂಟುನೆಪ ಹೇಳಿ ಆಚೆ ಬರುತ್ತಿದ್ದಾರೆ. ಹೊಡೆಯೋದು ಬಡೆಯೋದು ಮಾಡದ ಅಲ್ಲಿನ ಪೊಲೀಸರು ಎಲ್ಲರನ್ನು ಸಾಲಾಗು ನಿಲ್ಲಿಸಿ ಪೂಜೆ ಮಾಡಿದ್ದಾರೆ. ಇದರಿಂದಲಾದರೂ ಅವರಿಗೆ ನಾಚಿಕೆಯಾಗಿ ಹೊರಬರದೇ ಇರಲಿ ಎಂಬುದು ಪೊಲೀಸರ ಆಶಯ.
ಸರ್ಕಲ್ ಒಂದರಲ್ಲಿ ಬೈಕ್ ಸವಾರರನ್ನು ಸಾಲಾಗಿ ನಿಲ್ಲಿಸಿದ ಪೊಲೀಸರು, ಅಲ್ಲೆ ಜೀಪ್ ಮೇಲೆ ಆರತಿ ತಟ್ಟೆ ಇಟ್ಟು ಬೆಳಗಿಸಿ ಅದರಿಂದ ಆರತಿ ಮಾಡಿದರು, ನಂತರ ಎಲ್ಲರಿಗೂ ಹೂಮಾಲೆ ಹಾಕಿದರು, ಊದುಬತ್ತಿಯನ್ನು ಕೂಡ ಹಚ್ಚಿ ಬೆಳಗಿ ನಮಸ್ಕರಿಸಿದರು. ಕೊನೆಗೆ ಚಪ್ಪಾಳೆಯ ಮೂಲಕ ಎಲ್ಲರನ್ನೂ ಬೀಳ್ಕೊಟ್ಟರು!
ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅವರಾದರೂ ಎಷ್ಟೂ ಅಂತ ಹೊಡಿತಾರೆ, ಹೊಡ್ದು ಹೊಡ್ದು ಸಾಕಾಗಿ ಹೀಗೆ ಮಾಡ್ತಿದಾರೆ ಎಂದು ಕೆಲವರು ಕಾಮೆಂಟಿಸಿದರೆ. ಇನ್ನಾದರೂ ಜನ ಬುದ್ದಿ ಕಲಿಯಲಿ ಎಂದು ತುಂಬಾ ಜನ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೊ ಕರ್ನಾಟಕದಲ್ಲಿಯೂ ವೈರಲ್ ಆಗಿದ್ದು, ಇಲ್ಲಿನ ಕೆಲವರು ತಮಾಷೆಗೆ, ನಮ್ಮ ಪೊಲೀಸರು ಹೀಗೆ ಪೂಜೆ ಮಾಡುವುದಿಲ್ಲ, ಡೈರೆಕ್ಟ್ ಪ್ರಸಾದ ಕೊಡ್ತಾರೆ ಎಂದಿದ್ದಾರೆ! ಮಹಾರಾಷ್ಟ್ರದಂತೆ ಕರ್ನಾಟಕ ಕೂಡ ಕೊರೋನ ಎರಡನೇ ಅಲೆಗೆ ತತ್ತರಿಸಿದೆ. ಹೀಗಿದ್ದಾಗೂ ಸಾಕಷ್ಟು ಜನ ಲಾಕ್ ಡೌನ್ ಉಲ್ಲಂಘಿಸಿ ತಿರುಗಾಡುತ್ತಿದ್ದಾರೆ, ಸಭೆ ಸಮಾರಂಭ ಮಾಡುತ್ತಿದ್ದಾರೆ.
ಕರ್ನಾಟಕದ ಹಲವು ಭಾಗಗಳಲ್ಲಿ ಪೊಲೀಸರು ಹಿಂದೆ ಮುಂದೆ ನೋಡದೇ ಭಾರಿಸಿದ ಹಲವು ವಿಡಿಯೊಗಳನ್ನು ನಾವು ನೋಡಿದ್ದೇವೆ.ಅದೆಷ್ಟೇ ಹೇಳಿದರೂ – ವಿನಂತಿಸಿದರೂ ಕೇಳದಾದಾಗ ಪೊಲೀಸರಿಗೆ ಲಾಟಿ ಎತ್ತುವುದು ಅನಿವಾರ್ಯವಾಗುವುದು. ಪೊಲೀಸರ ಆ ಕೆಲಸಕ್ಕೆ ನಮ್ಮ ಬೆಂಬಲಿವಿದೆ ಎಂದು ಮೂರ್ನಾಲ್ಕು ದಿನದಿಂದ ಸಾಮಾಜಿಕ ಜಾಲತಾಣದಲ್ಲೂ ಅಭಿಯಾನಗಳು ನಡೆದಿದ್ದವು.
ಇನ್ನು ಮಹಾರಾಷ್ಟ್ರದಲ್ಲಂತೂ ಪರಸ್ಥಿತಿ ಕೈ ಮೀರಿ ಹೋಗಿ, ಅತಿ ಹೆಚ್ಚ ನಷ್ಟ ಅನುಭವಿಸಿದ ರಾಜ್ಯವಾಯಿತು. ಅಲ್ಲಿ ಸಾವುನೋವುಗಳಿವೆ ಲೆಕ್ಕವೇ ಇಲ್ಲದಂತಾಗಿದೆ. ಆದರೂ ಕೂಡ ಜನರು ಹೀಗೆ ಹೊರಬಂದಾಗ ಪೊಲೀಸರು ತಾನೆ ಏನು ಮಾಡಬೇಕು.
ಗೊತ್ತಿಲ್ಲದವರಿಗೆ ತಿಳಿಸಿ ಹೇಳಬಹುದು, ಬಡಿದಾದರೂ ಹೇಳಬಹುದು. ಎಲ್ಲ ಅರಿವಿದ್ದೂ ಹೀಗೆ ಬಂದವರಿಗೆ ಪೂಜೆ ಮಾಡಿ ದೊಡ್ಡ ನಮಸ್ಕಾರ ಮಾಡುವುದೊಂದೇ ಅವರಿಗುಳಿದಿರುವ ಮಾರ್ಗ! ಅಲ್ವಾ? ಮೇಲೆ ವಿಡಿಯೊ ಇದೆ ನೋಡಿ.
-Team Infotrend