ಅರವಿಂದ್ – ದಿವ್ಯಾ ಮದುವೆಯಾಗ್ತಾರಾ? ಈ ಪ್ರಶ್ನೆಗೆ ಬಿಗ್ ಬಾಸ್ ಸ್ಪರ್ದಿ ಅರವಿಂದ್ ಉತ್ತರ ಏನಿತ್ತು ವಿಡಿಯೊ ನೋಡಿ…
ಕನ್ನಡದ ಅತಿ ದೊಡ್ಡ ಹಾಗೂ ಯಶಸ್ವಿ ರಿಯಾಲಿಟಿ ಶೋ ಗಳಲ್ಲಿ ಬಿಗ್ ಬಾಸ್ ಗೆ ಮೊದಲನೇ ಸ್ಥಾನ. ಎಂಟು ಸೀಸನ್ ನಿಂದ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿರುವ ಬಿಗ್ ಬಾಸ್ ಮೊದಲ ಬಾರಿಗೆ ಈ ಸಲ ಅರ್ದಕ್ಕೇ ನಿಂತಿತು. ಕೊರೋನ ಎರಡನೇ ಅಲೆಯ ಕಾರಣಕ್ಕಾಗಿ ಸಿನೆಮಾ – ದಾರಾವಾಹಿಗಳಲ್ಲದೇ ರಿಯಾಲಿಟಿ ಶೋ ಕೂಡ ನಿಲ್ಲಿಸಬೇಕಾಯಿತು.
ರಾಜ್ಯ ಸರ್ಕಾರದ ಲಾಕ್ ಡೌನ್ ಕಾರಣಕ್ಕಾಗಿ ಬಿಗ್ ಬಾಸ್ ಅರ್ದಕ್ಕೆ ನಿಂತು ಸ್ಪರ್ದಿಗಳೆಲ್ಲರನ್ನು ಮನೆಗೆ ಕಳಿಸಲಾಯಿತು. ಈಗ ಹೊರಬಂದಿರುವ ಸ್ಪರ್ದಿಗಳು ನ್ಯೂಸ್ ಚಾನೆಲ್ ಗಳಿಗೆ ತಮ್ಮ ಅನುಭವ ಅನಿಸಿಕೆ ಹೇಳಿಕೊಳ್ಳುತ್ತಿದ್ದಾರೆ. ಅದೇ ರೀತಿ ಅರವಿಂದ್ ಅವರನ್ನು ನ್ಯೂಸ್ ಫರ್ಸ್ಟ್ ಕನ್ನಡ ಚಾನೆಲ್ ನ ಸೋಮಣ್ಣ ಮಾಚಿಮಾಡರವರು ಮಾತಾಡಿಸಿದ್ದು ಇದರಲ್ಲಿ ಅವರು ಹಲವು ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿದ್ದಾರೆ.
ಬಿಗ್ ಬಾಸ್ ಎಂಟನೇ ಸೀಸನ್ ನ ಒಳ್ಳೆ ಜೋಡಿ ಅಂದರೆ ಅದು ಅರವಿಂದ್ – ದಿವ್ಯಾ ಜೋಡಿ. ಈ ಮೊದಲಿನ ಸೀಸನ್ ಗಳಲ್ಲೂ ಕೂಡ ಹೀಗೆ ಒಂದೊಂದು ಜೋಡಿ ಜನರನ್ನು ಆಕರ್ಷಿಸಿತ್ತು. ಜೊತೆಗೆ ತಾವೂ ಆಕರ್ಷಣಿಗೆ ಬಿದ್ದಿದ್ದು ಇದೆ.
ಉದಾಹರಣೆಗೆ : ನೀತು – ಬಿಡ್ಡ, ಅಯ್ಯಪ್ಪ – ಪೂಜಾ ಗಾಂಧಿ, ಚಂದನ್ – ನಿವೇದಿತಾ ಇತ್ಯಾದಿ. ಇವರಲ್ಲಿ ಚಂದನ್ – ನಿವೇದಿತಾ ಮದುವೆ ಕೂಡ ಆಗಿದ್ದು ವಿಶೇಷ. ಅದೇ ರೀತಿ ಈಗ ಅರವಿಂದ್ ಕೆ.ಪಿ ಹಾಗೂ ದಿವ್ಯಾ ಉರುಡುಗ ಮಧ್ಯೆ ವಿಶಿಷ್ಟ ಬಂಧ ಬೆಳೆದಿದ್ದು ಅದು ಯಾವ ಮಟ್ಟಿಗೆ ಹೋಗುತ್ತದೆ ಎಂದು ಕಾದು ನೋಡಬೇಕು.
ಈ ಬಗ್ಗೆ ಸೋಮಣ್ಣ ಮಾಚಿಮಾಡ, ನೀವಿಬ್ಬರು ಒಳಳೆ ಸ್ನೇಹಿತರು ಮಾತ್ರಾನಾ ಅಥವಾ ಅದಕ್ಕೂ ಹೆಚ್ಚಿಗೆ ಏನಾದರೂ ಇದೆಯಾ? ನೀವಿಬ್ರು ಮದುವೆಯಾಗ್ತಿರಿ ಅಂತ ಜನ ಮಾತಾಡ್ತಾರೆ, ನೀವೇನ್ ಹೇಳ್ತಿರಿ ಎಂದು ನೇರವಾಗಿ ಪ್ರಶ್ನೆ ಕೇಳಿದಾಗ ಅರವಿಂದ್ ಏನು ಹೇಳಿದರು ವಿಡಿಯೊ ನೋಡಿ.
-Team Infotrend