VIDEO : ಫೈನಲಿ ಬಿಗ್ ಬಾಸ್ ಸ್ಪರ್ದಿಗಳಿಗೆ ಸಿಕ್ಕ ಸಂಭಾವನೆಯಾದರೂ ಎಷ್ಟು ಗೊತ್ತಾ? ಇದರಲ್ಲಿ ‘ಇವರಿಬ್ಬರ’ ಸಂಭಾವನೆ ಅಚ್ಚರಿಪಡಿಸುತ್ತೆ!

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕಿರುತೆರೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಪ್ರತಿ ವರ್ಷ ಈ ಶೋ ಕ್ಕಾಗಿ ಕಾಯುವ ಅಭಿಮಾನಿಗಳಿದ್ದಾರೆ. ಕೊರೋನ ಕಾರಣಕ್ಕಾಗಿ ಈ ವರ್ಷ ತಡವಾಗಿ ಪ್ರಾರಂಭವಾಯಿತಾದರೂ, ದುರದೃಷ್ಟಕರವೆಂಬಂತೆ ಪೂರ್ತಿ ಮುಗಿಸಲಾಗಲಿಲ್ಲ. ಲಾಕ್ ಡೌನ್ ಕಾರಣಕ್ಕೇ ಶೋ ಅರ್ದಕ್ಕೇ ನಿಂತಿತು.

ಅಷ್ಟರಲ್ಲಾಗಲೇ ಮನೆಯಿಂದ ಸುಮಾರು ಎಲಿಮಿನೇಟ್ ಆಗಿ, 71 ದಿನ ಕೂಡ ಕಳೆದಿದ್ದವು. ಕೆಲವೇ ದಿನಗಳಲ್ಲಿ ಟಾಪ್ 5 ಸ್ಪರ್ದಿಗಳು ಮನೆಯಲ್ಲಿ ಉಳಿದು ಫೈನಲ್ ಗಾಗಿ ಕಾಯುತ್ತಿದ್ದರು. ಆದರೆ ನಡುವೆ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಆಗಿ ಶೋ ನಿಲ್ಲಿಸಲೇ ಬೇಕಾಯಿತು. ಅವರೇನೋ ಒಳಗೆ ಸೇಫಾಗಿ ಇದ್ದರು, ಆದರೆ ಅವರಿಗೋಸ್ಕರ ತೆರೆಯ ಹಿಂದೆ ನೂರಾರು ಜನ ದುಡಿಯುತ್ತಿದ್ದರು.

ಅವರು ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಸುರಕ್ಷತೆಗಾಗಿ ಶೋ ನಿಲ್ಲಿಸುವುದು ಅನಿವಾರ್ಯವಾಗಿತ್ತು. ಮೂಲಗಳ ಪ್ರಕಾರ ಅವರಲ್ಲಿ ಕೆಲವು ಕಾರ್ಮಿಕರಿಗೆ ಕೊರೋನ ಪಾಸಿಟಿವ್ ಕೂಡ ಆಗಿತ್ತಂತೆ. ಹೀಗಿರುವಾಗ ಶೋ ಮುಂದುವರೆಸುವುದು ಸಾಧ್ಯವಿಲ್ಲದ ಕೆಲಸವಾಗಿತ್ತು, ಅದಕ್ಕೇ ನಿಲ್ಲಿಸಿದರು.

ಇನ್ನು ಬಹುತೇಕರಿಗೆ ಬಿಗ್ ಬಾಸ್ ಒಳಗೆ ಸ್ಪರ್ದಿಗಳಿಗೆ ಯಾವ ಥರ ಸಂಭಾವನೆ ಸಿಗುತ್ತದೆ, ಎಷ್ಟು ದುಡ್ಡು ಸಿಗುತ್ತದೆ ಇತ್ಯಾದಿ ಕುತೂಹಲ ಇದ್ದೇ ಇರುತ್ತದೆ. ಈ ಬಗ್ಗೆ ಸಾಕಷ್ಟು ಯೂಟ್ಯೂಬ್ ಚಾನೆಲ್ ಗಳು ಮಾಹಿತ ನೀಡಿದ್ದಾವಾದರೂ ಕರಾರುವಾಕ್ಕಾಗಿ ಇಲ್ಲ. ಇದ್ದುದರಲ್ಲೇ ಸ್ವಲ್ಪ ಅಧಿಕೃತ ಅನಿಸಬಹುದಾದ ಮಾಹಿತಿ ಉಳ್ಳ ವಿಡಿಯೊ ಇಲ್ಲಿ ಕೆಳಗಿದೆ ನೋಡಿ…

ಇಷ್ಟಕ್ಕೂ ಬಿಗ್ ಬಾಸ್ ಒಳಗೆ ಹೋಗುವವರು ದುಡ್ಡಿನ ಆಸೆಗೆ ಹೋಗುವುದು ಕಮ್ಮಿ. ಹಾಗೆಯೇ ಅಲ್ಲಿ ಹೋಗುವವರು ಕೈ ತುಂಬ ಕೆಲಸ ಇರುವವರು ಕೂಡ ಅಲ್ಲ. ಈಗಾಗಲೇ ಕೆಲಸ ಕಳೆದುಕೊಂಡಿರುವ, ಅವಕಾಶ ಕಡಿಮೆಯಾಗಿರುವ ಅಥವಾ ಅವಕಾಶಕ್ಕಾಗಿ ಕಾದಿರುವವರು ಹೋಗುತ್ತಾರೆ. ಅಂಥವರಿಗೆ ಬಿಗ್ ಬಾಸ್ ಒಂದೊಳ್ಳೆ ವೇದಿಕೆಯಾಗಿ ಕೆಲಸ ಮಾಡುತ್ತದೆ.

ತುಂಬಾ ಜನ ಇಲ್ಲಿಂದ ಹೊರಬಂದ ಮೇಲೆ ಭವಿಷ್ಯ ಕಲ್ಪಿಸಿಕೊಂಡಿದ್ದಾರೆ. ಹಾಗೆಯೇ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲಾರದೆ ಸೋತವರೂ ಇದ್ದಾರೆ. ಬಿಗ್ ಬಾಸ್ ನಿಂದ ಸಿಗುವ ದುಡ್ಡಿನ ಬಗ್ಗೆ ಯೋಚಿಸದೇ ತಮ್ಮಲ್ಲಿರುವ ಟ್ಯಾಲೆಂಟ್ ಮೂಲಕ ಹೆಚ್ಚು ದಿನ ಒಳಗಿದ್ದು ಪ್ರೇಕ್ಷಕರ ಮನಗೆದ್ದರೆ, ಅಭಿಮಾನಿಗಳನ್ನು ಗಳಿಸಿಕೊಂಡರೆ, ಇಂಡಸ್ಟ್ರಿಯವರ ಗಮನ ಸೆಳೆದರೆ ನಿಜಕ್ಕೂ ಅವರು ಬಿಗ್ ಬಾಸ್ ನಿಂದ ಭರ್ತಿ ಲಾಭ ಪಡೆಯಲಿದ್ದಾರೆ.

ಗಮನ ಸೆಳೆಯುದಕ್ಕಾಗಿ ಒಳಗೆ ಅನೇಕರು ಹತ್ತಾರು ಗಿಮಿಕ್ ಮಾಡುವುದನ್ನು ಕೂಡ ನಾವು ನೋಡಿದ್ದೇವೆ. ಏನೂ ಗಿಮಿಕ್ ಮಾಡದೇ ಸಹಜವಾಗಿ ಇದ್ದವರು ಬೇಗ ಹೊರಬಂದು ಮನೆ ಸೇರಿಕೊಂಡಿದ್ದಾರೆ. ಅದು ಬಿಡಿ ಬೇರೆ ವಿಷಯ. ಈಗ ಬಿಗ್ ಬಾಸ್ ನಿಂದ ಹೊರಬಂದಿರುವ ಸ್ಪರ್ದಿಗಳ ಸಂಭಾವನೆ ಬಗೆಗಿನ ವಿಡಿಯೊ ಮೇಲಿದೆ ನೋಡಿ.
-Team Infotrend