ಕುಡಿದ ಮತ್ತಿನಲ್ಲಿ ಹಾವನ್ನು ಕಚ್ಚಿ ಸಾಯಿಸಿದ ಭೂಪ!! ವಿಡಿಯೋ ನೋಡಿ..

ಕೋಲಾರದಲ್ಲಿ ಕುಡಿದ ಮತ್ತಿನಲ್ಲಿ ಹಾವನ್ನ ಕಚ್ಚಿ ಸಾಯಿಸಿದ ಭೂಪ. ಕೋಲಾರದ ಮುಳಬಾಗಿಲು ತಾಲೂಕಿನ ಮುಷ್ಟೂರಿನಲ್ಲಿ ನಡೆದ ಘಟನೆಯಾಗಿದೆ. ಎರಡು ದಿವಸಗಳ ಹಿಂದೆ ಸಾರಾಯಿ ಅಂಗಡಿಗೆ ಸಾರಾಯಿ ಮಾರಾಟ ಮಾಡಲು ಸರಕಾರವು ಅನಿಮತಿ ನೀಡಿದ್ದರಿಂದ ಮದ್ಯ ಪ್ರಿಯರಿಗೆ ತುಂಬಾ ಖುಷಿಯಾಗಿದೆ.

ಕೋಲಾರದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ ಆ ಘಟನೆಯಲ್ಲಿ ಒಬ್ಬ ವ್ಯಕ್ತಿ ಕುಡಿದ ಮತ್ತಿನಲ್ಲಿ ಒಂದು ಹಾವನ್ನು ಕಚ್ಚಿ ಸಾಯಿಸಿದ್ದಾನೆ. ನಡೆದದ್ದು ಏನೆಂದರೆ ಸಾರಾಯಿ ಕುಡಿದ ಮತ್ತಿನಲ್ಲಿ ಈತ ಮೋಟಾರ್ ಸೈಕಲ್ ಮೇಲೆ ಬರುತ್ತಿದನು ಆಗ ಬರುವ ಹಾದಿಯಲ್ಲಿ ಒಂದು ಹೋಗುತ್ತಿತ್ತು ಅದನ್ನು ನೋಡಿದ ಕೂಡಲೇ ಕುಡಿದ ಮತ್ತಿನಲ್ಲಿ ಈತ ಅದನ್ನು ಹಿಡಿದುಕೊಂಡು ತನ್ನ ಕೊರಳಲ್ಲಿ ಹಾಕಿಕೊಂಡು ಬೈಕ್ ಮೇಲೆ ಡ್ಯಾನ್ಸ್ ಮಾಡಲು ಪ್ರಾರಂಭ ಮಾಡಿದನು. ತದನಂತರ ಆತನು ಊರಲ್ಲಿ ಹೋಗಿ ಆ ಹಾವನ್ನು ಬಾಯಿಯಿಂದ ಕಚ್ಚಿ ಕಚ್ಚಿ ಸಾಯಿಸಿ ಅದನ್ನು ತುಂಡು ಮಾಡಿ ಬಿಸಾಡ ತೊಡಗಿದನು. ಅಲ್ಲಿದ್ದ ಜನರ ಅದನ್ನು ನೋಡುತ್ತಾ ನಿಂತಾಗ ಅವರ ಮೇಲೆ ಹಾವಿನ ತುಂಡುಗಳನ್ನು ಬಿಸಾಡಲು ಪ್ರಾರಂಭ ಮಾಡಿದನು. ಆಗ ಅಲ್ಲಿದ್ದ ಜನರು ಓಡಿ ಹೋದರು. ನೀವು ಸಹ ಈ ವಿಡಿಯೋ ನೋಡಿ ನಿಮಗೆ ಗೊತ್ತಾಗುತ್ತೆ ಮದ್ದು ಎಷ್ರು ಧೈರ್ಯ ಕೊಡುತ್ತೆ ಅಂತ……!