VIDEO : ಮೊಟ್ಟೆ ಕದಿಯುತ್ತಿರುವ ಈ ಪೊಲೀಸ್ ಕಾನಸ್ಟೇಬಲ್ ನನ್ನು ನೋಡಿದರೆ ನಗು ತಡೆಯಲಾಗುವುದಿಲ್ಲ! ವಿಡಿಯೊ ನೋಡಿ…

ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಒಂದಿಲ್ಲೊಂದು ವಿಡಿಯೊಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಬಹುತೇಕ ವಿಡಿಯೊಗಳು ತಮಾಷೆಯ ವಿಡಿಯೊಗಳೇ ಆಗಿರುತ್ತವೆ. ಇಲ್ಲಿರುವ ವಿಡಿಯೊ ಕಳ್ಳತನದ್ದಾದರೂ ಅದನ್ನು ತಮಾಷೆಯ ವಿಡಿಯೊ ಲಿಸ್ಟಿಗೇ ಸೇರಿಸಬೇಕೆನ್ನುವ ಹಾಗಿದೆ. ಇದಕ್ಕೆ ಸಾಮಾಜಿಕ ಜಾಲತಾನದಲ್ಲಿ ಕೋಪಕ್ಕಿಂತ ಹ ಹ ರಿಯಾಕ್ಟ್ ಮಾಡಿದವರೇ ಹೆಚ್ಚು.

ಇಲ್ಲಿ ಕಳ್ಳತನ ಮಾಡಿರುವವರು ಬೇರೆ ಯಾರೋ ಅಲ್ಲ, ಬದಲಿಗೆ ಸ್ವತಃ ಪೊಲೀಸನೇ ಕೆಲಸಕ್ಕೆ ಕೈ ಹಾಕಿದ್ದಾನೆ. ಅದು ಕೂಡ ಕೇವಲ‌ ಕೋಳಿ ಮೊಟ್ಟೆಗಾಗಿ ಇಂಥ ಕೃತ್ಯ ಎಸಗಿ ಈಗ ಅವಮಾನಕ್ಕೀಡಾಗಿದ್ದಾನೆ. ವಾಸ್ತವದಲ್ಲಿ ವಿಡಿಯೊ ಪಂಜಾಬ್ ಮೂಲದ್ದು. ಪತ್ರಕರ್ತ ಸಂಜಯ್ ತ್ರಿಪಾಠಿ ಎಂಬುವವರು ಇದನ್ನು ಜಾಲತಾಣಕ್ಕೆ ಹಾಕಿದ್ದಾರೆ.

ಅವರೂ ಕೂಡ ‘ಈ ಕಳ್ಳತನದಲ್ಲಿ ದೊಡ್ಡ ಮುಗ್ಧತೆ ಇದೆ’ ಎಂದು ಬರೆದೇ ಹಾಕಿದ್ದಾರೆ. ಮಾಮೂಲಾಗಿ ಪೊಲೀಸರು ಜೋರ್ ಜಬರ್ದಸ್ತ್ ಮಾಡಿ ಎತ್ತಿಕೊಂಡು ಹೋಗುತ್ತಾರೆ, ಆದರೆ ಈ ವ್ಯಕ್ತಿ ಥೇಟ್ ಚಿಕ್ಕ ಕಳ್ಳನ ಹಾಗೆ ಅತ್ತಿತ್ತ ನೋಡಿ ಕೋಳಿ ಮೊಟ್ಟೆಯನ್ನು ಕಿಸೆಗೆ ಇಳಿಸುತ್ತಾನೆ!

ವೈರಲ್ ವಿಡಿಯೊದಲ್ಲಿ ಸೈಕಲ್ ಮೋಟರ್ ಮೇಲೆ ಮೊಟ್ಟೆ ಮಾರುವವ ತನ್ನ ಸೈಕಲ್ ರಿಕ್ಷಾವನ್ನು ರಸ್ತೆ ಬದಿ ನಿಲ್ಲಿಸಿ ಎಲ್ಲಿಗೋ ಹೋಗಿರುತ್ತಾನೆ. ಆಗ ಅಲ್ಲಿದ್ದ ಕಾನಸ್ಟೆಬಲ್ ಅತ್ತಿತ್ತ ನೋಡುತ್ತಾ ಒಂದೊಂದೆ ಮೊಟ್ಟೆಯನ್ನು ಕಿಸೆಗೆ ಇಳಿಸುತ್ತಾರೆ. ಹೆಚ್ಚೇನಲ್ಲ, ಅವರು ಒಟ್ಟು ಮೂರ್ನಾಲ್ಕು ಮೊಟ್ಟೆ ಕದ್ದಿರಬಹುದು ಅಷ್ಟೇ.

ಅದರೆ ಅಲ್ಲೇ ಕಾರಿನಲ್ಲಿದ್ದ ಪತ್ರಕರ್ತನನ್ನು ಅವರು ನೋಡಿರಲಿಲ್ಲ‌. ತಮ್ಮ ಮೊಬೈಲಿನಲ್ಲಿ ಈ ದೃಶ್ಯ ಚಿತ್ರಕರೀಸಿದ ಅವರು ಅದನ್ನು ಟ್ವಿಟರ್ ಗೆ ಅಪ್ ಲೋಡ್ ಮಾಡಿದ್ದಾರೆ. ಅಷ್ಟರಲ್ಲಿ ಆ ಮೊಟ್ಟೆ ಮಾರುವವನು ಬರುವುದರಿಂದ ಕೆಲಸ ಅಲ್ಲಿಗೇ ಬಿಟ್ಟು ಅಲ್ಲಿ ಹಾದು ಹೋಗುತ್ತಿದ್ದ ಅಟೊಗೆ ಕೈ ಹೊಡೆದು ನಿಲ್ಲಿಸಿ ಹತ್ತಿಕೊಂಡು ಹೋಗುತ್ತಾರೆ.

ಈ ಮೂರು ಮೊಟ್ಟೆ ಕಳ್ಳತನ ಮಾಡುವಷ್ಟರಲ್ಲಿ ಅವರಿಗೆ ಬೆವರು ಕಿತ್ಗೊಂಡಿರುತ್ತೆ, ಏನೋ ದೊಡ್ಡ ಕಳ್ಳತನ ಮಾಡುವವನ ಹಾಗಿದೆ ಅವರ ವರ್ತನೆ. ತುಂಬಾ ಜನ ಅವರನ್ನು ನೋಡಿ ಅಯ್ಯೊ ಪಾಪ ಅಂದಿದ್ದಾರೆ. ನಕ್ಕವರೇ ಜಾಸ್ತಿ. ಸಿಟ್ಟಿಗೆದ್ದವರು – ಬೈದವರು ಕಡಿಮೆ. ವಿಡಿಯೊ ಮೇಲಿದೆ ನೋಡಿ.
-Team Infotrend