VIDEO : ಕೊರೋನ ಬಗ್ಗೆ ಭಯ ಬೇಡ : ಬೇಕಿದ್ದರೆ ಈ ಅಜ್ಜಿಯನ್ನು ನೋಡಿ ಕಲಿಯಿರಿ!
ಕೆಲವರು ಹೇಳ್ತಿರ್ತಾರೆ, ಕೊರೋನ ಬಂದು ಸಾಯುವವರಿಗಿಂತ, ಹೆದರಿಯೇ ತುಂಬಾ ಜನ ಸಾಯುತ್ತಾರೆ ಅಂತ. ಈ ಮಾತಿನಲ್ಲೇ ಎಷ್ಟು ಸತ್ಯವಿದೆಯೋ ಗೊತ್ತಿಲ್ಲ, ಆದರೆ ತೀರ ಆ ಪಾಟಿ ಹೆದರಿದರೆ, ಕೊರೋನ ಮಾತ್ರವಲ್ಲ ಯಾವ ಕಾಯಿಲೆಯಿಂದಾನೂ ಯಾರೂ ಬೇಗ ಚೇತರಿಸಿಕೊಳ್ಳುವುದಿಲ್ಲ. ಅದೇನಾಗುತ್ತೆ ನೋಡೇಬಿಡುವಾ ಎಂದು ಧೈರ್ಯ ತಂದುಕೊಂಡರೆ ಕರೋನ ಗೆಲ್ಲುವುದು ಕಷ್ಟವಲ್ಲ. ಧೈರ್ಯ ಸಾಲದವರು ಈ ಅಜ್ಜಿಯ ವಿಡಿಯೊ ನೋಡಿ.
ಏನೋ ನೆಗಡಿ – ಜ್ವರ ಬಂದವಳ ಹಾಗೆ ಎಷ್ಟು ಧೈರ್ಯವಾಗಿದೆ ನೋಡಿ ಅಜ್ಜಿ. ವಾಸ್ತವದಲ್ಲಿ ಈಕೆಗೆ ತುಂಬಾ ತೊಂದರೆಯಿದೆ, ಉಸಿರಾಡಲು ಕಷ್ಟವಾದ್ದರಿಂದ ಆಕ್ಸಿಜನ್ ಕೊಡಲಾಗುತ್ತಿದೆ. ಆದರೂ ಆಕೆಯ ಕಾನ್ಫಿಡೆನ್ಸ್ ಅದ್ಯಾವ ಲೆವೆಲ್ ಗೆ ಇದೆ ನೋಡಿ.
ಗುಜರಾತ್ ನ ರಾಜಕೋಟ್ ಮೂಲದ ಅಜ್ಜಿಯ ವಿಡಿಯೊ ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗುತ್ತಿದೆ. ಬೆಡ್ ಮೇಲೆ ಕುಳಿತು, ಆಕ್ಸಿಜನ್ ಮಾಸ್ಕ್ ಹಾಕಿಕೊಂಡೇ ಈ ಅಜ್ಜಿ ಹಾಡೊಂದಕ್ಕೆ ಗರ್ಬಾ ಡ್ಯಾನ್ಸ್ ಮಾಡುತ್ತಿದೆ. ಇದು ಅಲ್ಲಿದ್ದವರನ್ನು ಮಾತ್ರವಲ್ಲ ವಿಡಿಯೊ ನೋಡಿದ ಎಲ್ಲರಲ್ಲೂ ಜೀವನೋತ್ಸಾಹ ತುಂಬುತ್ತಿದೆ.
ಅಂದ ಹಾಗೆ ಅಜ್ಜಿಯ ವಯಸ್ಸು 95 ವರ್ಷ! ಇಂಥ ವಯಸ್ಸಿನಲ್ಲೂ ಅವರ ಕಾನ್ಫಿಡೆನ್ಸ್ ನೋಡಿ ಅಲ್ಲಿನ ವೈದ್ಯರಿಗೂ ಉತ್ಸಾಹ ಬರುತ್ತದಂತೆ. ಪಿಪಿಇ ಕಿಟ್ ನಲ್ಲೇ ಅಲ್ಲಿನ ಸಿಬ್ಬಂದಿ ಅಜ್ಜಿ ಜೊತೆ ಡ್ಯಾನ್ಸ್ ಮಾಡಿದ್ದೂ ಉಂಟು. ಅಲ್ಲಿನ ಇತರೆ ಕೊರೋನ ರೋಗಿಗಳಿಗೂ ಅಜ್ಜಿಯ ಪಾಸಿಟಿವಿಟಿ ಕಂಡು ಖುಷಿಯಾಗುತ್ತದೆ, ಅವರೂ ತಮ್ಮ ಆತಂಕ ಮರೆಯುತ್ತಿದ್ದಾರಂತೆ.
ಕೊರೋನ ಬಗ್ಗೆ ಭಯ ಬೇಡ, ಜಾಗೃತೆ ಇರಲಿ. ನಿಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಮುಂಜಾಗೃತಾ ಕ್ರಮ ತಗೆದುಕೊಳ್ಳಿ. ಮಾಸ್ಕ್, ಸಾಮಾಜಿಕ ಅಂತರ, ಸ್ವಚ್ಚತೆ ಇವುಗಳನ್ನು ಯಾವತ್ತೂ ಮರೆಯಬೇಡಿ. ಇದೆಲ್ಲ ಮಾಡಿಯೂ ನಿಮಗೆ ಕೊರೊನ ಬಂದಿತೆಂದುಕೊಳ್ಳಿ, ಆಗ ಭಯ ಬದಿಗೆಟ್ಟು ಅದನ್ನು ಎದುರಿಸಲು ಸಿದ್ಧರಾಗಿ, ಆತ್ಮವಿಶ್ವಾಸದ ಮುಂದೆ ಎಲ್ಲವೂ ಮಣಿಯಲೇಬೇಕು, ಇನ್ನು ಕೊರೋನ ಯಾವ ಲೆಕ್ಕ. ಅಲ್ವರಾ?
-Team Infotrend