VIDEO : ತೇರಿ ಮೇರಿ ಕಹಾನಿ ಹಾಡಿಗೆ ನಾಯಿ ದ್ವನಿಗೂಡಿಸಿದ ವಿಡಿಯೊ ಹೇಗಿದೆ ನೋಡಿ
ನೀವೆಲ್ಲ ಹಿಮೇಶ್ ರೇಶಮಿಯಾ ಹಾಡಿದ ತೇರಿ ಮೇರಿ… ತೇರಿ ಮೇರಿ… ತೇರಿ ಮೇರಿ ಕಹಾನಿ ಹಾಡನ್ನು ಕೇಳಿಯೇ ಇರುತ್ತೀರಿ. ಈ ಹಾಡನ್ನು ಹಿಮೇಶ್ ಹಾಡಿದಾಗ ಎಷ್ಟು ಜನಪ್ರಿಯವಾಗಿತ್ತೋ ಅದಕ್ಕಿಂತ ಹೆಚ್ಚು ಕಳೆದ ವರ್ಷ ರಾಣು ಮಂಡಲ್ ಎಂಬ ರೆಲ್ವೆ ಪ್ಲಾಟ್ ಫಾರ್ಮ್ ಗಾಯಕಿ ಹಾಡಿದಾಗ ಜನರಿಗೆ ತಲುಪಿತ್ತು. ನಂತರ ಈ ಹಾಡನ್ನು ಹಾಡದವರೇ ಇಲ್ಲ.
ಹಾಡಲು ಬರದವರು ಗುನುಗಿಯಾದರು ಸಮಾದಾನ ಮಾಡಿಕೊಳ್ಳುತ್ತಿದ್ದರು. ಮನುಷ್ಯರಷ್ಟೇ ಅಲ್ಲ, ನಾಯಿ ಕೂಡ ಈ ಹಾಡಿಗೆ ದ್ವಮಿಗೂಡಿಸಿದ್ದು, ಅದರ ವಿಡಿಯೊ ಇಲ್ಲಿದೆ ನೋಡಿ. ಇದು ಹಳೆಯ ವಿಡಿಯೊವಾದರೂ ಖಾಸಗಿ ಚಾನೆಲ್ ನವರ ದೆಸೆಯಿಂದ ಮತ್ತೆ ವೈರಲ್ ಆಗಿದ್ದು, ತಮ್ಮಲ್ಲಿ ಯಾರಾದರೂ ನೋಡದವರಿದ್ದರೆ ನೋಡಿ.
ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಸಲ ವೈರಲ್ ಆಗುತ್ತಿರುವ ವಿಡಿಯೊವನ್ನು ಮತ್ತೆ ಲಕ್ಷಾಂತರ ಜನ ಮೆಚ್ಚಿಕೊಂಡಿದ್ದು, ನೂರಾರು ಜನ ಶೇರ್ ಮಾಡಿಕೊಂಡಿದ್ದಾರೆ. ವ್ಯಕ್ತಿಯೊಬ್ಬ ಹಾರ್ಮೊನಿಯಂ ನುಡಿಸುತ್ತಾ ತೇರಿ ಮೇರಿ ಹಾಡನ್ನು ಹಾಡತೊಡಗುತ್ತಾರೆ. ತಕ್ಷಣ ಪಕ್ಕದಲ್ಲಿದ್ದ ನಾಯಿ ಕೂಡ ದ್ವನಿ ತಗೆಯುತ್ತದೆ.
ಎಲ್ಲೂ ಅಪಭ್ರಂಸವಾಗದಂತೆ ನಾಯಿ ರಾಗಬದ್ದವಾಗಿ ಒದರುತ್ತದೆ. ವ್ಯಕ್ತಿ ಪಿಚ್ಚ ಚೇಂಜ್ ಮಾಡಿದಾಗ ನಾಯಿಯೂ ಅವನಂತೆ ಹಾಡಲು ಪ್ರಯತ್ನಿಸುತ್ತದೆ. ಮೊದಲು ಟ್ವಿಟರ್ ನಲ್ಲಿ ವೈರಲ್ ಆಗಿದ್ದ ವಿಡಿಯೊ ಸದ್ಯ ಫೇಸ್ಬುಕ್ ನಲ್ಲೂ ಭರ್ಜರಿಯಾಗಿ ಓಡಾಡುತ್ತಿದೆ. ವಿಡಿಯೊ ಕೆಳಗಿದೆ ನೋಡಿ.
-Team Infotrend