VIDEO : ರಾಧೆ ಸಿನೆಮಾದ ಹಾಡಿಗೆ ವೈದ್ಯರ ಭರ್ಜರಿ ಡ್ಯಾನ್ಸ್! ಪಿಪಿಇ ಕಿಟ್ ನಲ್ಲಿ ಬೆಂದವರು ಎರಡು ನಿಮಿಷ ರಿಲ್ಯಾಕ್ಸ್ ಆದ ವಿಡಿಯೊ ನೋಡಿ
ಕರೋನಾ ವೈರಸ್ ನ ಎರಡನೆ ಅಲೆ ಎಲ್ಲರ ಸಂತೋಷ – ನೆಮ್ಮದಿಯನ್ನು ಕಿತ್ತುಕೊಂಡಿದೆ. ದೇಶಾದ್ಯಂತ ದಿನಕ್ಕೆ ಹಲವಾರು ಚಿತ್ರವಿಚಿತ್ರ ಪ್ರಸಂಗಗಳು ಹೊರಬರುತ್ತಿವೆ. ಕೆಲವು ಆಸ್ಪತ್ರೆಗಳಲ್ಲಿ ಬೆಡ್ ಗಳಿಲ್ಲ ಎಂದು ಗೋಳಾಡಿದ್ದರೆ, ಮತ್ತೆ ಕೆಲವೆಡೆ ಆಕ್ಸಿಜನ್ ಕೊರತೆ, ಇನ್ನೂ ಕೆಲವೆಡೆ ಶವಾಗಾರದ ಹೊರಗೆ ಉದ್ದವಾದ ಸಾಲುಗಳು ಆತಂಕಿತಗೊಳಿಸುತ್ತವೆ. ಈ ನಡುವೆ ಸದಾಕಾಲ ಪಿಪಿಇ ಕಿಟ್ ನಲ್ಲಿ ಬೇಯುತ್ತಿರುವ ವೈದ್ಯರು ಎರಡು ನಿಮಿಷ ಅದರಿಂದ ಹೊರಬಂದು ರಿಲ್ಯಾಕ್ಸ್ ಆದ ವಿಡಿಯೊವಂದು ವೈರಲ್ ಆಗಿದೆ.
ನಮ್ಮ ಆರೋಗ್ಯ ಕಾರ್ಯಕರ್ತರು (ವೈದ್ಯರು-ನರ್ಸ್-ಆ್ಯಬುಲೆನ್ಸ್ ಸ್ಟಾಫ್) ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಚದಿಂದ ಸುರುವಾದ ಕೊರೋನ ಕೇಕೆ ಇನ್ನೂ ನಿಂತಿಲ್ಲ. ನಡುವೆ ಸ್ವಲ್ಪ ಕಡಿಮೆ ಆದಂತಾಗಿ ಮತ್ತೆ ಎರಡನೃ ಅಲೆ ಭೀ’ಕ’ರವಾಗಿ ಅಪ್ಪಳಿಸಿದೆ. ಅವತ್ತಿನಿಂದ ಅವರಿಗೆ ನೆಮ್ಮದಿಯ ಉಸಿರು ತಗೆದುಕೊಳ್ಳಲೂ ಸಾಧ್ಯವಾಗಿಲ್ಲ.
ಆವಾಗಾವಾಗ ವೈದ್ಯರು – ನರ್ಸ್ ಡ್ಯಾನ್ಸ್ ಮಾಡಿದ ಅಥವಾ ರೋಗಿಗಳಿಗೆ ಡ್ಯಾನ್ಸ್ ಮಾಡಿಸಿದ ವಿಡಿಯೊಗಳು ವೈರಲ್ ಆಗುತ್ತಿವೆ. ಈ ದಿನಗಳಲ್ಲಿ ಅಂತಹ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಕೆಲವು ವೈದ್ಯರು ರಾಧೆ ಚಿತ್ರದ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ.
ವೈದ್ಯರ ಈ ಚಿಕ್ಕ ಕ್ಲಿಪ್ ಅನ್ನು ದಿಶಾ ಪಟಾನಿಯ ಅಭಿಮಾನಿಗಳ ಕ್ಲಬ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದೆ. ವೀಡಿಯೊದಲ್ಲಿ ಆಸ್ಪತ್ರೆಯ ಕಾರಿಡಾರ್ನಲ್ಲಿ ‘ಸೀಟಿ ಮಾರ್’ ಹಾಡಿಗೆ ವೈದ್ಯರು ನೃತ್ಯ ಮಾಡಿದ್ದಾರೆ. ಎಲ್ಲಾ ವೈದ್ಯರು ಮಾಸ್ಕ್ ಧರಿಸಿ ಉತ್ಸಾಹದಿಂದ ಹೆಜ್ಜೆ ಹಾಕಿದರು. ದಿಶಾ ಪಟಾನಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
“ವಾಹ್! ನಮ್ಮ ನಿಜವಾದ ಹೀರೊಗಳು ಎಂದು ಅವರು ಬರೆದುಕೊಂಡಿದ್ದಾರೆ. ವೀಡಿಯೊ ವೈರಲ್ ಆಗಿ ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ಸಾಕಷ್ಟು ಪ್ರೀತಿ ತೋರಿಸಿದ್ದಾರೆ. ಆದಷ್ಟು ಬೇಗ ಈ ಕೊರೋನ ಪೀಡೆ ತೊಲಗಲಿ, ಎಲ್ಲರ ನೆಮ್ಮದಿ ಮರಳಲಿ, ಆರೋಗ್ಯ ಕಾರ್ಯಕರ್ತರು ಮುಕ್ತವಾಗಿ ಉಸಿರಾಡುವಂತಾಗಲಿ ಎಂದು ಹಾರೈಸೋಣ. ವಿಡಿಯೊ ಮೇಲಿದೆ ನೋಡಿ…
-Team Infotrend