VIDEO : ತಾಯಿಯೊಂದಿಗೆ ಪುಟ್ಟ ಮಗು ಹಾಡುತ್ತಿರುವ ಕ್ಯೂಟ್ ವಿಡಿಯೊ : ಈ ಶೋಕದ ವಾತಾವರಣದಲ್ಲಿ ಖುಷಿ ಕೊಟ್ಟ ವಿಡಿಯೊ ಇದು

ಕರೋನಾ ಸಾಂಕ್ರಾಮಿಕದ ಕಷ್ಟದ ಸಮಯದಲ್ಲಿ, ದುಃಖದ ಸುದ್ದಿಗಳ ನಡುವೆ ಕೆಲವು ಹೃದಯವನ್ನು ಅರಳಿಸುವ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಕಾಣಬಹುದು. ಈ ವೈರಲ್ ವಿಡಿಯೋವೊಂದರಲ್ಲಿ, ಪುಟ್ಟ ಹುಡುಗಿ ತನ್ನ ತಾಯಿ ಜೊತೆ “ಅಗರ್ ತುಮ್ ಸಾಥ್ ಹೋ…” ಹಾಡನ್ನು ಹಾಡುತ್ತಿದ್ದಾಳೆ. ಜನರು ಈ ವೀಡಿಯೊವನ್ನು ಫೇಸ್‌ ಬುಕ್ ಮತ್ತು ಟ್ವಿಟರ್‌ ನಲ್ಲಿ ತುಂಬಾ ಇಷ್ಟಪಟ್ಟಿದ್ದು ಭರ್ಜರಿ ವೈರಲ್ ಆಗುತ್ತಿದೆ.

ತಮಾಶಾ ಚಿತ್ರ ಬಂದಿದ್ದು 2015 ರಲ್ಲಿ, ಈ ಚಿತ್ರದ “ಅಗರ್ ತುಮ್ ಸಾಥ್ ಹೋ…” ಹಾಡು ಸಾಕಷ್ಟು ಹಿಟ್ ಆಗಿತ್ತು. ಈ ವಿಡಿಯೋವನ್ನು ಮೊದಲು ಅಂಜನಾ ಮದತಿಲ್ ಅವರು ಫೇಸ್‌ ಬುಕ್‌ ನಲ್ಲಿ ಹಂಚಿಕೊಂಡಿದ್ದಾರೆ. ಇದು ಇಲ್ಲಿಯವರೆಗೆ ಲಕ್ಷಾಂತರ ವಿವ್ಸ್ ಕಂಡಿದ್ದು, ನೂರಾರು ಕಾಮೆಂಟ್ ಗಳು ಬಂದಿವೆ. ನಂತರ ಇದೇ ವಿಡಿಯೊ ಟ್ವಿಟರ್ ನಲ್ಲೂ ವೈರಲ್ ಆಯಿತು. Dhanraj Nathwani ಎಂಬುವವರು ಟ್ವಿಟರ್ ನಲ್ಲಿ ಶೇರ್ ಮಾಡಿದ್ದರು.

ವೈರಲ್ ವೀಡಿಯೊದಲ್ಲಿ ತಾಯಿ ಗಿಟಾರ್ ನುಡಿಸುತ್ತ ಹಾಡುತ್ತಿದ್ದಾರೆ. ಅದೇ ಸಮಯದಲ್ಲಿ ಪುಟ್ಟ ಮಗಳು ತನ್ನ ಕೈಗಳಿಂದ ಸನ್ನೆ ಮಾಡುತ್ತಾ ತಾನೂ ಹಾಡನ್ನು ಗುನುಗುತ್ತಿದ್ದಾಳೆ. ಈ ವೀಡಿಯೊವನ್ನು ಮೂಲತಃ ಫೇಸ್‌ ಬುಕ್‌ ನಲ್ಲಿ ಹಂಚಿಕೊಳ್ಳಲಾಗಿದ್ದರೂ ಟ್ವಿಟರ್‌ನಲ್ಲಿ ಕಾಣಿಸಿಕೊಂಡ ನಂತರ ವ್ಯಾಪಕ ಗಮನ ಸೆಳೆದಿದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಮೆಚ್ಚುಗೆ ಗಳಿಸಿದೆ.

ಕರೋನ ಎರಡನೇ ಅಲೆಯಿಂದ ದೇಶ ತತ್ತರಿಸಿದ್ದು ಎಲ್ಲ ಕಡೆ ದುಖದ ವಾತಾವರಣವೇ ಇದೆ, ದಿನಬೆಳಗಾದರೆ ಪರಿಚಯಸ್ಥರ ಸಾವಿನ ಸುದ್ದಿ ಕೇಳಬೇಕಾಗಿದೆ. ಸರ್ಕಾರ – ವೈದ್ಯಕೀಯ ವ್ಯವಸ್ಥೆ ತನ್ನ ಶಕ್ತಿ ಮೀರಿ ಜನರ ಪ್ರಾಣ ಉಳಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಅಗಾಧ ಜನಸಂಖ್ಯೆಯುಳ್ಳ ನಮ್ಮಲ್ಲಿ ಈ ಪರಸ್ಥಿತಿ ತಹಬದಿಗೆ ಬರುವುದು ಸುಲಭದ ಮಾತಲ್ಲ. ಈ ಶೋಕದ ವಾತಾವರಣದಲ್ಲಿ ಈ ಕ್ಯೂಟ್ ವಿಡಿಯೊ ಖುಷಿ ಕೊಟ್ಟಿದ್ದು ಸುಳ್ಳಲ್ಲ.

ಈ ತಾಯಿ ಮತ್ತು ಮಗಳ ಮೇಲೆ ನೆಟಿಜನ್‌ ಗಳು ಸಾಕಷ್ಟು ಪ್ರೀತಿಯನ್ನು ತೋರಿಸುತ್ತಿದ್ದಾರೆ. ಪೋಸ್ಟ್ ಬಗ್ಗೆ ಕಾಮೆಂಟ್ ಮಾಡಿದ ಅನೇಕ ಜನರು ವೀಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಇದು ಹೆಚ್ಚು ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಈ ಕ್ಯೂಟ್ ವಿಡಿಯೊ ಮೇಲೆ ಇದೆ. ನೋಡಿ ಮತ್ತು ಕಾಮೆಂಟ್ ಮಾಡಿ.
-Team Infotrend