103 ವರ್ಷದ ಅಜ್ಜ ಹಾಗೂ 27 ರ ಯುವತಿಯ ನಡುವೆ ಮದುವೆ! ಮದುವೆಗೆ ಕಾರಣ ಕೇಳಿದ್ರೆ ನೀವು ಹೈರಾಣಾಗುವುದು ಗ್ಯಾರಂಟಿ…!

ಜಗತ್ತಿನಲ್ಲಿ ಎಂತೆಂತ ಚಿತ್ರ ವಿಚಿತ್ರ ಜನರು ಇರುತ್ತಾರೆಂದರೆ, ಯಾರೂ ಊಹಿಸದಂತ ಕೆಲಸಗಳನ್ನು ಮಾಡಿರುತ್ತಾರೆ. ಅದರಂತೆಯೇ ಇಲ್ಲೊಬ್ಬ ಅಜ್ಜ ವಯಸ್ಸು ಅನ್ನುವುದು ಕೇವಲ ಒಂದು ಸಂಖ್ಯೆಯಷ್ಟೇ, ಅದು ಯಾವುದನ್ನೂ ತಡೆಯುವುದಿಲ್ಲ, ಏನೂ ಬೇಕಾದರೂ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಬನ್ನಿ ಆ ಅಜ್ಜ ಮಾಡಿರೋ ಆ ಸಾಹಸ ಏನೂ ಎಂದು ನೋಡೋಣ…

ಇಂಡೋನೆಷಿಯ ದೇಶದ ಈ ಅಜ್ಜನ ಹೆಸರು ಪುವಾಂಗ್ ಕುಟ್ಟೆ ಎಂದು. ಈತನ ವಯಸ್ಸು ಬರೋಬ್ಬರಿ 103 ವರ್ಷ. ಈತ ತನಗಿಂತ ಬರೋಬ್ಬರಿ 76 ವರ್ಷ ಚಿಕ್ಕ ವಯಸ್ಸಿನ, ಅಂದರೆ ಕೇವಲ 27 ವರ್ಷದ ಯುವತಿಯನ್ನು ಮದುವೆಯಾಗಿದ್ದಾನೆ! ಈ ಮದುವೆ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

ವರದಿಗಳ ಪ್ರಕಾರ ಪಾವುಂಗ್ 1945-49 ರಲ್ಲಿ ನಡೆದ ಯು”ದ್ಧದಲ್ಲಿ ಭಾಗವಹಿಸಿದ ಡಚ್ಚರ ಪಡೆಯ ಕರ್ನಲ್ ಆಗಿದ್ದರಂತೆ, ಯುವತಿಗೆ ಪಾವುಂಗ್ ಅವರ ಸರಿಯಾದ ವಯಸ್ಸು ಗೊತ್ತಿಲ್ಲವಂತೆ, ಆದರೆ ವರನ ವಯಸ್ಸು 100 ಸಮೀಪ ಇದೆ ಅಂತ ಮಾತ್ರ ಪಕ್ಕಾ ಗೊತ್ತಿತ್ತು. ಮದುವೆಯ ನಂತರ ವಧು ವರರ ಸರಿಯಾದ ವಯಸ್ಸು ತಿಳಿದ ಎಲ್ಲರು ಹೈರಾಣಾಗಿದ್ದು ಸುಳ್ಳಲ್ಲ.

ಮದುವೆಗಾಗಿ ವರ ಪಾವುಂಗ್ ಅವರು ವಧುವಿಗೆ ವಧು ದಕ್ಷಿಣೆಯನ್ನು ಕೊಟ್ಟಿದ್ದಾರಂತೆ. 25 ಸಾವಿರ ರೂಪಾಯಿ ಹಾಗೂ ಒಂದು ಬಂಗಾರದ ಉಂಗುರವನ್ನು ಕೊಟ್ಟು ವಿವಾಹವಾಗಿದ್ದಾರಂತೆ. ಲಿಂಟಾಸ್ ಐ ಎಂಬ ಪತ್ರಿಕೆಯ ವರದಿ ಪ್ರಕಾರ ಐ ಇಬ್ಬರ ಮೊದಲ ಭೇಟಿಯಾಗಿದ್ದು ಆ ಯುವತಿ ತನ್ನ ಬಾಯ್ಫ್ರೆಂಡ್ ತನಗೆ ಮೋಸ ಮಾಡುತ್ತಿದ್ದಾನೆಂದು ಅವನೊಂದಿಗೆ ಲವ್ ಬ್ರೇಕಪ್ ಮಾಡಿಕೊಳ್ಳಲು ಹೋದಾಗ.

ಅಂದಿನಿಂದ ಈ ಇಬ್ಬರ ನಡುವೆ ಆಗಾಗ ಭೇಟಿಯಾಗುತ್ತಿತ್ತಂತೆ, ಅಷ್ಟೇ ಅಲ್ಲದೇ ಈ ಇಬ್ಬರ ನಡುವೆ ಶಾರೀರಿಕ ಸಂಬಂಧ ಕೂಡ ಏರ್ಪಟ್ಟಿತ್ತಂತೆ..! ಇದರ ನಂತರ ಆ ಯುವತಿ ಗರ್ಭಿಣಿಯಾದಳಂತೆ ಎಂಬ ಸುದ್ದಿ ಕೇಳಿದರೆ ನಿಮಗೆಲ್ಲ ದಂಗು ಬಡಿಯುವುದಂತೂ ಗ್ಯಾರಂಟಿ! ಹೌದು ಆ ಯುವತಿ ಗರ್ಭವತಿಯಾಗಿದ್ದು ನಿಜ ಅವರ ಮದುವೆಗೆ ಇದುವೇ ಕಾರಣ, ಮದುವೆಯ ಪ್ರಸ್ತಾಪ ಇಟ್ಟ ಯುವತಿ ಕೊನೆಗೂ ಅಜ್ಜನನ್ನು ಮದುವೆಯಾದಳು.

ಅಲ್ಲಿನ ಸ್ಥಳೀಯ ಮೀಡಿಯಾಗಳ ವರದಿ ಪ್ರಕಾರ ಪಾವುಂಗ್ ಅಜ್ಜನ ಈ ಹೊಸ ಹೆಂಡತಿಗೆ ಇದು ಮೊದಲ ಮದುವೆಯಲ್ಲ ಬದಲಾಗಿ ಅವಳಿಗೆ ಈ ಮೊದಲೇ ಮದುವೆಯಾಗಿತ್ತಂತೆ ಆದರೆ ಅವಳ ಪತಿ ಅವಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲವಂತೆ ಹೊಡೆಯುವುದು ಬೈಯುವುದು ಮಾಡುತ್ತಿದ್ದನಂತೆ. ಈ ಕಾರಣದಿಂದ ಅವಳು ಅವನನ್ನ ಬಿಟ್ಟು ಬಂದಿದ್ದಳಂತೆ.

ಸದ್ಯ ಅವಳು ಶತಾಯುಷಿ ಅಜ್ಜ ಪಾವುಂಗ್ ಅವರ ಇಂಡೋನೆಶಿಯಾದ ದಕ್ಷಿಣಿ ಸಲಾವೇಸಿ ಎಂಬ ಪ್ರದೇಶದ ಮನೆಯಲ್ಲಿ ಆರಾಮಾಗಿ ಇದ್ದಾರಂತೆ!
-ಮಂಜುನಾಥ್