ಇಲ್ಲಿ ನಿರಂತರವಾಗಿ ಎಂಜಿನ್ ಶಬ್ಧ ಕೇಳಿಸುತ್ತದೆ, ಅದು ಎಲ್ಲಿಂದ ಬರುತ್ತಿದೆ, ಹೇಗೆ ಬರುತ್ತಿದೆ ಒಂದೂ ಗೊತ್ತಾಗಿಲ್ಲ!
ಈ ಭೂಮಂಡಲವೇ ಒಂದು ದೊಡ್ಡ ರಹಸ್ಯ, ಒಂದು ದೊಡ್ಡ ನಿಗೂಢ, ಅದೇನೇ ತಿಪ್ಪರಲಾಗ ಹಾಕಿದರೂ ನಮ್ಮ ವಿಜ್ಞಾನಿಗಳು ಪೃಥ್ವಿಯ ಬಗ್ಗೆ ತಿಳಿದುಕೊಂಡಿರುವುದು ತುಂಬಾ ಕಡಿಮೆ – ತಿಳಿಯಬೇಕಿರುವುದು ಇನ್ನೂ ಸಾಕಷ್ಟು. ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ಎಲ್ಲ ಮೂಲೆಗಳಲ್ಲೂ ಎಂದಿಗೂ – ಯಾರಿಗೂ ಬೇಧಿಸಲಾಗದ ರಹಸ್ಯಗಳು ಇವೆ. ಅಂಥದೇ ಒಂದು ರಹಸ್ಯದ ಬಗ್ಗೆ ಈ ಬರಹ…
ಈ ನಿಗೂಢ ಸ್ಥಳ ಇರುವುದು ಮೆಕ್ಸಿಕೋದ ಪುಟ್ಟ ನಗರವಾದ ತಾವೋಸ್ ಎಂಬಲ್ಲಿ. ಇದನ್ನು ತಾವೋಸ್ ಎಕೋ ಎಂದು ಕರೆಯಲಾಗುತ್ತದೆ.ಯಾಕೆಂದರೆ ಇಲ್ಲಿ ಯಾವಾಗಲೂ ಡಿಸೆಲ್ ಎಂಜಿನ್ ನಿಂದ ಬರುವಂತ ಶಬ್ಧ ದ ಹಾಗೆಯೇ ಇರುವ ಶಬ್ಧ ಬರುತ್ತಿರುತ್ತದೆ. ಇದು ಇಂದು ನಿನ್ನೆಯ ಕಥೆಯಲ್ಲ, ಅನಾಧಿಕಾಲದಿಂದಲೂ ಬರುತ್ತಿದೆ.
ಆದರೆ ಅದು ಹೇಗೆ ಆ ಶಬ್ಧ ಬರುತ್ತಿದೆ, ಅದರ ಮೂಲ ಯಾವುದು ಎಂಬುದು ಪತ್ತೆಯಾಗಿಲ್ಲ. ಈಗ ತಂತ್ರಜ್ಞಾನ ಇಷ್ಟು ಮುಂದುವರೆದರೂ ಆ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಮಾನವನ ಎಲ್ಲ ಪ್ರಯತ್ನಗಳೂ ಅಲ್ಲಿ ಕೈ ಕೊಟ್ಟಿವೆ. ಹಗಲಲ್ಲಿ ನಿದಾನವಾಗಿರುವ ಧ್ವನಿ ರಾತ್ರಯಾಗುತ್ತಿದ್ದಂತೆ ಹೆಚ್ಚಾಗುತ್ತದೆ.
ಇದರಿಂದ ತೀರ ಬೇಸತ್ತ ತಾವೋಸ್ ಜನರು ಇದಕ್ಕೊಂದು ಪರಿಹಾರ ಒದಗಿಸಲು 1993 ರಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಕಡೆಪಕ್ಷ ಈ ಧ್ವನಿಯ ಮೂಲವನ್ನಾದರೂ ಪತ್ತೆ ಹಚ್ಚಲು ವಿನಂತಿಸಲಾಯಿತು. ಅದರಂತೆ ಸರ್ಕಾರ ಅಲ್ಲಿ ಹಲವಾರು ಸೌಂಡ್ ಡಿಟೆಕ್ವಿವ್ ಮಷಿನ್ ಅಳವಡಿಸಿತು. ಉಹೂಂ ಅವೂ ಕೂಡ ಅಲ್ಲಿ ವಿಫಲವಾದವು.

ಮೆಕ್ಸಿಕೊ ವಿಜ್ಞಾನಿಗಳು ಕೂಡ ಕೈ ಚೆಲ್ಲಿದರು, ಅಲ್ಲಿಗೆ ಅದನ್ನೊಂದು ಬಗೆಹರಿಯಲಾರದ ರಹಸ್ಯ ಎಂದು ಪತಿಗಣಿಸಿ ಸರ್ಕಾರ ಅದನ್ನೊಂಥರ ಪ್ರವಾಸಿ ತಾಣ ಮಾಡಿದೆ. ಈಗ ದೇಶ ವಿದೇಶದ ಹಲವರು ಅಲ್ಲಿ ಡಿಸೆಲ್ ಎಂಜಿನ್ ಶಬ್ಧ ಕೇಳಲು ಬರುತ್ತಾರೆ! ನ್ಯೂ ಮೆಕ್ಸಿಕೊದ ಇದಕ್ಕೆ ಈಗ ತಾವೋಸ್ ಎಕೋ ಎಂದೇ ಹೆಸರಿಸಲಾಗಿದೆ.
ಅನೇಕ ಆಧುನಿಕ ಯಂತ್ರಗಳ ಹೊರತಾಗಿಯೂ ಈ ಧ್ವನಿ ಎಲ್ಲಿಂದ ಬರುತ್ತದೆ ಎಂದು ಗುರುತಿಸಲಾಗದೆ ಮನುಷ್ಯ ಇಲ್ಲಿ ಪ್ರಕೃತಿಯ ಮುಂದೆ ತಲೆಬಾಗಿದ್ದಾನೆ. ಇದಷ್ಟೇ ಅಲ್ಲ, ಇಂಥ ಹತ್ತಾರು ನಿಗೂಢಗಳು ಪ್ರಪಂಚದಲ್ಲಿವೆ, ಅವುಗಳನ್ನು ಒಂದೊಂದಾಗಿ ತಿಳಿಸುವುದು ನಮ್ಮ ಉದ್ದೇಶ, ಲೈಕ್ ಮಾಡಿ, ಶೇರ್ ಮಾಡಿ, ನಿಮ್ಮ ಬೆಂಬಲ ಇರಲಿ.
-Team Infotrend