ನಾನು ಆರ್ಸಿಬಿ ಫ್ಯಾನ್, ಆದ್ರೆ ಕೊಹ್ಲಿ ಇಷ್ಟ ಇಲ್ಲ! -ರಶ್ಮಿಕಾ ಮಂದಣ್ಣ : ಮತ್ಯಾರು ಇಷ್ಟ ಗೊತ್ತಾ?

ಕನ್ನಡದ ಬೆಡಗಿ, ಬಹುಭಾಷಾ ನಟಿ ರಶ್ಮಿಕಾ ಏನೇ ಹೇಳಿದರೂ ಸುದ್ದಿಯಾಗುತ್ತದೆ. ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ರಕ್ಷಿತ್ ಶೆಟ್ಟಿಯವರಿಂದ ಚಿತ್ರರಂಗಕ್ಕೆ ಪರಿಚಯಿಸಲ್ಪಟ್ಟ ರಶ್ಮಿಕಾ ಆಮೇಲೆ‌ ಬೆಳೆದ ಪರಿ ಎಂಥವರನ್ಮೂ ಅಚ್ಚರಿಗೊಳಿಸುತ್ತದೆ. ರಕ್ಷಿತ್ ರವರಿಂದ ದೂರವಾದ ನಂತರ ತೆಲುಗು ಚಿತ್ರರಂಗದಲ್ಲಿ ಮಿಂಚಿದ ರಶ್ಮಿಕಾ ಬಾಲಿವುಡ್ ಗೂ ಕೂಡ ಹಾರಿದಳು. ಅದೆಷ್ಟೋ ಜನರ ಕನಸಾದ ಅಮಿತಾಬ್ ಬಚ್ಚನ್ ರವರ ಜೊತೆ ಕೂಡ ನಟಿಸುವ ಅವಕಾಶ ಸಿಕ್ಕಿರುವುದು ರಶ್ಮಿಕಾ ಅದೃಷ್ಟ ಎಂಥಹುದು ಎಂಬುದು ಗೊತ್ತಾಗುತ್ತದೆ.

ಈಗ ರಶ್ಮಿಕಾ ಸುದ್ದಿ ತಗೆದಿದ್ದು ಯಾಕೆಂದರೆ, ಅವರು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ಬಹುತೇಕರಂತೆ ರಶ್ಮಿಕಾಗೆ ಕೂಡ ಐಪಿಎಲ್ ತುಂಬಾ ಇಷ್ಟ. ಹಾಗೆಯೇ ಐಪಿಎಲ್ ನಲ್ಲಿ ಆರ್ಸಿಬಿ ತಂಡ ಅಚ್ಚುಮೆಚ್ಚು. ಆದರೆ ಅದರ ನಾಯಕ ವಿರಾಟ್ ಕೊಹ್ಲಿ ಇಷ್ಟವಿಲ್ಲವಂತೆ!

ಈ ಸಲ ಆರ್ಸಿಬಿನೇ ಕಪ್ ಗೆಲ್ಲುತ್ತಿತ್ತು, ಕೊರೊನದಿಂದಾಗಿ ಎಲ್ಲ ಹಾಳಾಯಿತು ಎಂದು ಕೂಡ ರಶ್ಮಿಕಾ ನೊಂದುಕೊಂಡಿದ್ದಾರೆ. ತುಂಬಾ ಸಲ ಅವರು ಆರ್ಸಿಬಿ ತಂಡಕ್ಕೆ ಸಪೋರ್ಟ್ ಮಾಡಿದ್ದಾರಾರೂ ವಿರಾಟ್ ಕೊಹ್ಲಿ ಆಟ ಅವರಿಗೆ ಹಿಡಿಸಿಲ್ಲವಂತೆ. ಐಪಿಎಲ್‌ ಎಂದರೆ ನನಗೆ ಹುಚ್ಚು ಏಂದಿರುವ ರಶ್ಮಿಕಾ, ಆರ್ಸಿಬಿ ನನ್ನ ಅಚ್ಚುಮೆಚ್ಚಿನ ತಂಡ, ಆದರೆ ವಿರಾಟ್ ನನ್ನ ಫೆವ್ರೇಟ್ ಅಲ್ಲ ಎಂದಿದ್ದಾರೆ.

ಹಾಗಿದ್ದರೆ ಮತ್ಯಾರು ಇಷ್ಟಎಂಬ ಪ್ರಶ್ನೆ ಏಳುವುದು ಸಹಜ, ರಶ್ಮಿಕಾಗೆ ಚೆನೂ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಇಷ್ಟವಂತೆ! ಅವರ ನಾಯಕತ್ವ, ಅವರ ಕೀಪಿಂಗ್, ಅವರ ಬ್ಯಾಟಿಂಗ್ ತುಂಬಾ ಇಷ್ಟ ಎಂದು ರಶ್ಮಿಕಾ ಮಹೇಂದ್ರ ಸಿಂಗ್ ಧೋನಿಯ ಗುಣಗಾನ ಮಾಡಿದ್ದಾರೆ.

ಕ್ರಿಕೇಟ್ ಹೊರತುಪಡಿಸಿದರೆ ರಶ್ಮಿಕಾ ಈಗ ಅಲ್ಲು ಅರ್ಜುನ್ ರವರ ಪುಷ್ಪ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ ಎರಡು ಬಾಲಿವುಡ್ ಚಿತ್ರಗಳಿಗೂ ಸಹಿ ಹಾಕಿದ್ದಾರೆ. ಅದರಲ್ಲಿ ಅಮಿತಾಬ್ ಚಿತ್ರ ಕೂಡ ಒಂದು. ಕನ್ನಡದ ಹುಡುಗಿ ಇನ್ನಷ್ಟು ಬೆಳೆಯಲಿ.
-Team Infotrend