ಈ ಚಿತ್ರದಲ್ಲಿ ಒಂದು ಪ್ರಾಣಿ ಇದೆ, ಅದು ಯಾವುದು, ಎಲ್ಲಿದೆ ಗುರುತಿಸಿ
ಕಣ್ಣಿಗೆ ಮೋಸ ಮಾಡುವ ಅಥವಾ ಕಣ್ಣಿಗೆ ಕೆಲಸ ಕೊಡುವ ಇಂಥ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಿಗುತ್ತವೆ. ಅವುಗಳಲ್ಲಿ ಈ ಚಿತ್ರವೂ ಒಂದು. ಮೇಲ್ನೋಟಕ್ಕೆ ಒಂಥರಾ, ಗಮನಿಸಿ ನೋಡಿದಾಗ ಇನ್ನೊಂಥರ ಕಾಣುವ ಪೋಟೊ ನೀವು ನೋಡಿರಬಹುದು. ಹಾಗೆಯೇ ಮೇಲ್ನೋಟಕ್ಕೆ ಏನೂ ಇಲ್ಲ ಅನಿಸುವ ಅದೆಷ್ಟೊ ಚಿತ್ರಗಳಲ್ಲಿ ಆಗಾಧ ಅರ್ಥವಿರುತ್ತದೆ.
ಇದೂ ಕೂಡ ಆ ಸಾಲಿನಲ್ಲಿ ಬರುವ ಒಂದು ಚಿತ್ರ. ಈ ಚಿತ್ರದಲ್ಲಿ ಒಂದು ಸುಂದರ ಐಷಾರಾಮಿ ಭಂಗಲೆಯ ಅರೆಬರೆ ಚಿತ್ರ ಇದೆ. ಎದುರುಗಡೆ ಪುಟ್ಟ ಸ್ವಿಮಿಂಗ್ ಪೂಲ್ ಇದೆ. ಆವರಣದ ತುಂಬಾ ಹಸಿರು ನೆಲಹಾಸು ಕಂಗೊಳಿಸುತ್ತಿದೆ. ಸ್ವಚ್ಚ ಆಕಾಶಕ್ಕೆ ಎದುರಾಗಿ ಹಲವು ಖರ್ಜುರ ಹಣ್ಣಿನ ಗಿಡಗಳಿವೆ, ಸ್ವಿಮಿಂಗ್ ಪೂಲ್ ನಲ್ಲಿ ಸೂರ್ಯ ಮಿನುಗುತ್ತಿದ್ದಾನೆ.
ಇವಿಷ್ಟು ಚಿತ್ರದಲ್ಲಿರುವ ದೃಶ್ಯಗಳು. ಇವನ್ನೆಲ್ಲ ಸ್ಪಷ್ಟವಾಗಿ ಗಮನಿಸಿದರೆ ನಿಮಗೆ ಪ್ರಾಣಿ ಚಿತ್ರ ಕಾಣುವುದು. ಇದೇನು ತೀರ ಕಷ್ಟದ ಕೆಲಸವೇನಲ್ಲ, ಮೆದುಳಿಗೆ ಹುಳ ಬಿಡುವ ಚಿತ್ರ ಕೂಡ ಅಲ್ಲ. ಮಾಮೂಲಾಗಿ ನೋಡಿದ ಎಲ್ಲರೂ ಉತ್ತರ ಹೇಳುವ ಸುಲಭದ ಚಿತ್ರ. ನೀವೂ ಗುರುತಿಸಿ ಕಾಮೆಂಟ್ ಮಾಡಬಹುದು.

ಇದು ಮಾಮೂಲಾಗಿ ಕ್ಲಿಕ್ಕಿಸಿದ ಚಿತ್ರ ಅನಿಸುವುದಿಲ್ಲ, ಪ್ರಕೃತಿಯ ವಿಸ್ಮಯ ಅಂತ ಕೂಡ ಅನಿಸುವುದಿಲ್ಲ. ಬೇಕೆಂತಲೇ ಆ ಶೇಪ್ ಕೊಟ್ಟಿರಬಹುದು. ನೋಡಿ, ಗುರುತಿಸಿ, ಕಾಮೆಂಟಿಸಿ.
-Team Infotrend