WTC final : ನೀಲ್ ವ್ಯಾಗ್ನರ್ ಅವರನ್ನು ನಿಭಾಯಿಸಲು ಭಾರತ ತಂಡ ಸೇರಲಿದ್ದಾರೆ ಈ ಸ್ಪೇಶಲ್ ಬೌಲರ್!

ಜೂನ್ 18 ರಂದು ಭಾರತ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ನ ಫೈನಲ್ ಪಂದ್ಯವನ್ನು ಆಡಬೇಕಿದೆ, ಈ ಪಂದ್ಯವು ಸೌತಾಂಪ್ಟನ್‌ನಲ್ಲಿ ನಡೆಯಲಿದೆ. ವಿರಾಟ್-ರೋಹಿತ್ ಅವರಂತಹ ಅನುಭವಿಗಳ ಜೊತೆಗೆ ಟೀಮ್ ಇಂಡಿಯಾ ವಿಶೇಷ ಬೌಲರ್‌ ಗೆ ತಮ್ಮ ತಂಡದಲ್ಲಿ ಸ್ಥಾನ ನೀಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಫೈನಲ್‌ ಗೆ ಈಗ ಕೇವಲ ಒಂದು ತಿಂಗಳು ಉಳಿದಿದೆ ಆ ವಿಶೇಷ ಬೌಲರ್ ಯಾರು ಅಂತ ನೀವು ಗೆಸ್ ಕೂಡ ಮಾಡಲಾರಿರಿ.

ಜೂನ್ 18 ರಂದು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೌತಾಂಪ್ಟನ್ ಮೈದಾನದಲ್ಲಿ ಘರ್ಷಣೆ ನಡೆಸಲಿವೆ ಮತ್ತು ಒಬ್ಬರು ಟೆಸ್ಟ್‌ ಚಾಂಪಿಯನ್ ಆಗುತ್ತಾರೆ. ಕಿವಿಸ್ ಬೌಲರ್‌ ಗಳು ಇಂಗ್ಲೆಂಡ್ ಪಿಚ್‌ಗಳಲ್ಲಿ ಹೆಚ್ಚು ಮಾರಕವೆಂದು ಸಾಬೀತಾಗಿರುವ ಕಾರಣ ನ್ಯೂಜಿಲೆಂಡ್ ವಿರುದ್ಧದ ಪಂದ್ಯವು ಅಷ್ಟು ಸುಲಭವಲ್ಲ.

ವಿಶೇಷವಾಗಿ ಎಡಗೈ ವೇಗದ ಬೌಲರ್ ನೀಲ್ ವ್ಯಾಗ್ನರ್ (Neil Wagner) ವೇಗ ಮತ್ತು ನಿಖರವಾದ ಬೌನ್ಸರ್ಗಳಿಗೆ ಹೆಸರುವಾಸಿಯಾಗಿದ್ದಾರೆ. ಸ್ಟೀವ್ ಸ್ಮಿತ್‌ ರಂತಹ ಅನುಭವಿ ಬ್ಯಾಟ್ಸ್‌ ಮನ್‌ ನನ್ನು ಕಟ್ಟಿಹಾಕುವ ವ್ಯಾಗ್ನರ್ ವಿರಾಟ್-ರೋಹಿತ್ ಅವರ ಚಿಂತೆಯನ್ನು ಹೆಚ್ಚಿಸುವುದರಲ್ಲಿ ಸಂದೇಹವಿಲ್ಲ. ಆದಾಗ್ಯೂ ವ್ಯಾಗ್ನರ್ ಅವರನ್ನು ನಮ್ಮವರು ಎದುರಿಸುವಂತಾಗಲು ಟೀಮ್ ಇಂಡಿಯಾ ಒಬ್ಬ ವಿಶೇಷ ಬೌಲರ್ ಅನ್ನು ಆಯ್ಕೆ ಮಾಡಿದೆ.

ಅವರೇ ಗುಜರಾತ್‌ ನ ಎಡಗೈ ವೇಗದ ಬೌಲರ್ ಅರ್ಜನ್ ನಗ್ವಸ್ವಾಲ್ಲಾ (Arzan Nagwaswalla) ಅರ್ಜನ್ ಅವರನ್ನು ಸ್ಟ್ಯಾಂಡ್‌ಬೈ ಆಟಗಾರನಾಗಿ ಆಯ್ಕೆ ಮಾಡಲಾಗಿದ್ದು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ತಮ್ಮ ಬೌಲಿಂಗ್‌ ನಿಂದ ನೆಟ್‌ ನಲ್ಲಿ ಪೇಚಿಗೆ ಸಿಲುಕಿಸಿದ್ದಾರೆ. ಅವರು ಪಕ್ಕಾ ಕಿವಿಸ್ ಬೌಲರ್‌ ಗಳ ಸವಾಲಿಗೆ ನಮ್ಮ ದಾಂಡಿಗರು ಸಿದ್ದಗೊಳ್ಳಲು ಸಹಾಐ ಮಾಡುತ್ತಾರೆ ಎಂದು ನಂಬಲಾಗಿದೆ.

ನಾಗವಸ್ವಾಲಾ ವಿರಾಟ್-ರೋಹಿತ್ ಅವರನ್ನು ಹೇಗೆ ಸಿದ್ಧಗೊಳಿಸುತ್ತಾರೆ :

ನಾಗವಾಸ್ವಾಲಾ ನೀಲ್ ವ್ಯಾಗ್ನರ್ ಅವರಂತೆ ಎಡಗೈ ವೇಗದ ಬೌಲರ್ ಮತ್ತು ಬೌನ್ಸರ್ ಎಸೆಯುವಲ್ಲಿ ಪರಿಣತರಾಗಿದ್ದಾರೆ. ಅರ್ಜನ್ ನಾಗವಾಸ್ವಾಲಾ ಅವರು ವ್ಯಾಗ್ನರ್ ಅವರ ಹಾಗೆಯೇ ರನ್ ಅಪ್ ನಿಂದ ವಿರಾಟ್-ರೋಹಿತ್ ಸೇರಿದಂತೆ ಇತರ ಭಾರತೀಯ ಬ್ಯಾಟ್ಸ್ ಮನ್ ಗಳಿಗೆ ಬೌಲ್ ಮಾಡಿ ಅವರು ಅಭ್ಯಾಸ ಮಾಡಲು ಸಹಾಯ ಮಾಡುತ್ತಾರೆ.

ಇನ್ಸೈಡ್ ಸ್ಪೋರ್ಟ್‌ನೊಂದಿಗೆ ಮಾತನಾಡುತ್ತಾ, ‘ನಾನು ಬ್ಯಾಟ್ಸ್‌ ಮನ್‌ ಗಳು ಸಿಕ್ಕಿಹಾಕಿಕೊಳ್ಳುವ ಯೋಜನೆಯಡಿ ಬೌಲಿಂಗ್ ಮಾಡಲು ಇಷ್ಟಪಡುತ್ತೇನೆ. ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್‌ಗಳೊಂದಿಗೆ ನಾನು ನೆಟ್‌ ಗಳಲ್ಲಿ ಅದೇ ರೀತಿ ಮಾಡುತ್ತೇನೆ. ನಾನು ಅವರಿಗೆ ಸಮಸ್ಯೆಗಳನ್ನು ಸೃಷ್ಟಿಸುತ್ತೇನೆ ಇದರಿಂದ ಅವರು ಪಂದ್ಯಕ್ಕೆ ಸಿದ್ಧರಾಗುತ್ತಾರೆ ಎನ್ನುತ್ತಾರೆ ಅರ್ಜನ್. ಅರ್ಜನ್ ಬೌನ್ಸರ್ ಜೊತೆಗೆ ಸಾಕಷ್ಟು ಸ್ವಿಂಗ್ ಬೌಲಿಂಗ್ ಕೂಡ ಮಾಡುತ್ತಾರೆ.

ನೀಲ್ ವ್ಯಾಗ್ನರ್ ಮೇಲೆ ಯಾಕಿಷ್ಟು ಗಮನ?

ನೀಲ್ ವ್ಯಾಗ್ನರ್ ಕಳೆದ 2-3 ವರ್ಷಗಳಲ್ಲಿ ತಮ್ಮ ಪ್ರದರ್ಶನವನ್ನು ಸಾಕಷ್ಟು ಸುಧಾರಿಸಿಕೊಂಡಿದ್ದಾರೆ. ಅವರ ಆಕ್ರಮಣಕಾರಿ ಬೌಲಿಂಗ್ ಆಧಾರದ ಮೇಲೆ ಅವರು ಅನೇಕ ಅನುಭವಿ ಬ್ಯಾಟ್ಸ್‌ ಮನ್‌ ಗಳನ್ನು ತೊಂದರೆಗೆ ಕೆಡವಿದ್ದಾರೆ. 35 ವರ್ಷದ ವೇಗದ ಬೌಲರ್ 51 ಟೆಸ್ಟ್ ಪಂದ್ಯಗಳಲ್ಲಿ 219 ವಿಕೆಟ್ ಪಡೆದಿದ್ದಾರೆ. ಪ್ರತಿ ಪ್ರಬಲ ತಂಡದ ವಿರುದ್ಧ ವ್ಯಾಗ್ನರ್ ಅವರ ದಾಖಲೆ ಅದ್ಭುತವಾಗಿದೆ.

ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ 9 ಪಂದ್ಯಗಳಲ್ಲಿ 37 ವಿಕೆಟ್ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 6 ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದಾರೆ. ವ್ಯಾಗ್ನರ್ ಭಾರತ ವಿರುದ್ಧದ 5 ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಫೈನಲ್‌ ನಲ್ಲಿ ಈ ಕಿವಿಸ್ ಬೌಲರ್ ಭಾರತಕ್ಕೆ ದೊಡ್ಡ ತಲೆನೋವು ಎಂಬುದು ಸ್ಪಷ್ಟವಾಗಿದೆ, ಅದಕ್ಕಾಗೇ ಈ ತಯಾರಿ.

-Team Infotrend