ಎ.ಬಿ ಡಿವಿಲಿಯರ್ಸ್‌ ಅವರಂತೆ 360° ಶಾಟ್‌ ಹೊಡೆಯಬಲ್ಲ ಇತರ 5 ಬ್ಯಾಟ್ಸ್‌ ಮನ್‌ ಇವರು

ಎ.ಬಿ ಡಿವಿಲಿಯರ್ಸ್‌ : ಇವರನ್ನು ಮಿಸ್ಟರ್ 360° ಎಂದೇ ಕರೆಯಲಾಗುತ್ತದೆ. ಒಂದು ಸಲ ಲಯ ಸಿಕ್ಕುಬಿಟ್ಟರೆ ಎ.ಬಿ.ಡಿ ಯನ್ನು ಔಟ್ ಮಾಡುವುದು ಒತ್ತಟ್ಟಿಗಿರಲಿ, ಕಂಟ್ರೋಲ್ ಮಾಡುವುದು ಕೂಡ ಆಗಲ್ಲ. ಬೌಲರ್ ಅದ್ಯಾರೆ ಇರಲಿ, ಅವರ ಪ್ರತಿ ಎಸೆತಗಳನ್ನು ಮೈದಾನದ ಅಷ್ಟೂ ದಿಕ್ಕಿಗೆ ಅಟ್ಟಬಲ್ಲ ಅಸಾಮಾನ್ಯ ಬ್ಯಾಟ್ಸಮನ್ ಈ ಎ.ಬಿ ಡಿವಿಲಿಯರ್ಸ್‌. ಇವರನ್ನು ಇತರರಿಗೆ ಹೋಲಿಸುವುದು ಸರಿಯಲ್ಲವಾದರೂ, ಅವರಂತೆ 360° ಆಡಬಲ್ಲ ಸಾಮರ್ಥ್ಯ ಈ ಕೆಳಗಿನ ಐವರಿಗಿದೆ.

1) ಭಾರತೀಯ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ :
ಭಾರತೀಯ ಬ್ಯಾಟ್ಸ್‌ಮನ್ ಮತ್ತು ಕಿಂಗ್ಸ್ XI ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ ಮೈದಾನದಲ್ಲಿ ಕ್ಲಾಸಿಕಲ್ ಡ್ರೈವ್, ಸ್ಕೂಪ್ ಶಾಟ್, ರಿವರ್ಸ್ ಸ್ವೀಪ್ ಮತ್ತು ಹುಕ್ ಶಾಟ್‌ ನಂತಹ ವಿವಿಧ ಹೊಡೆತಗಳನ್ನು ಆಡಬಲ್ಲರು. ಓಪನರ್ ಆಗಿ, ಮಧ್ಯಮ ಕ್ರಮಾಂಕದಲ್ಲಿ ಮತ್ತು ಅಂತಿಮ ಓವರ್‌ ಗಳಲ್ಲಿ ಕೂಡ ಚೆಂಡನ್ನು ಮೈದಾನದ ಹೊರಗೆ ಅಟ್ಟುವ ಸಾಮರ್ಥ್ಯ ಅವರಿಗಿದೆ.

ದುಬೈನಲ್ಲಿ ನಡೆದ ಐಪಿಎಲ್ 2020 ಹಾಗೂ ಮೊನ್ನೆ ಅರ್ದಕ್ಕೇ ನಿಂತ ಐಪಿಎಲ್ 2021 ನಲ್ಲಿ ಅವರ ಬಿರುಗಾಳಿಯಂಥ ಇನ್ನಿಂಗ್ಸ್ ನೀವು ನೋಡಿರಬಹುದು. ಎಬಿಡಿಯಂತೆ 360° ಆಡಬಲ್ಲ ನಮ್ಮ ಪಟ್ಟಿಯಲ್ಲಿ ಕೆಎಲ್ ರಾಹುಲ್ ಮೊದಲ ಸ್ಥಾನದಲ್ಲಿದ್ದಾರೆ. ಅವರು ಕನ್ನಡಿಗರು ಕೂಡ ಆಗಿರುವುದು ನಮಗೆಲ್ಲ ಹೆಮ್ಮೆಯ ವಿಷಯ

2) ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ :
ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಐಪಿಎಲ್‌ನಲ್ಲಿ ಓಪನರ್ ಆಗಿ ಮತ್ತು ಸೀಮಿತ ಓವರ್‌ ಗಳ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿ ಆಡುತ್ತಾರೆ. ಜೋಸ್ ಬಟ್ಲರ್ ಅಂತಿಮ ಓವರ್‌ ಗಳಲ್ಲಿ ಸ್ಕೂಪ್ ಶಾಟ್, ರಿವರ್ಸ್ ಸ್ವೀಪ್ ಮತ್ತು ಥಂಡರ್ ಶಾಟ್ ಆಡಬಲ್ಲರು. ಅವರ ಬ್ಯಾಟಿಂಗ್‌ ನಿಂದ ಇಂಗ್ಲೆಂಡ್ ತಂಡವು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ ನಲ್ಲಿ ಹಲವಾರು ಪಂದ್ಯಗಳನ್ನು ಗೆದ್ದಿದೆ. ಜೋಸ್ ಬಟ್ಲರ್ ನಮ್ಮ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

3) ಭಾರತದ ಬ್ಯಾಟ್ಸ್‌ಮನ್ ರಿಷಭ್ ಪಂತ್ :
ಭಾರತದ ಬ್ಯಾಟ್ಸ್‌ ಮನ್ ರಿಷಭ್ ಪಂತ್ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಅನೇಕ ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ ಮತ್ತು ಪ್ರತಿಸ್ಪರ್ಧಿ ತಂಡಗಳಿಂದ ಗೆಲುವನ್ನು ಕಿತ್ತುಕೊಂಡಿದ್ದಾರೆ. ಭಾರತಕ್ಕಾಗಿ ಏಕದಿನ ಕ್ರಿಕೆಟ್‌ ನಲ್ಲಿ ಅವರು ಉತ್ತಮವಾಗಿ ಆಡಲಿಲ್ಲ, ಆದರೆ ಐಪಿಎಲ್ ಮತ್ತು ಟೆಸ್ಟ್ ಕ್ರಿಕೆಟ್‌ ನಲ್ಲಿ ಅವರು ನಿಜವಾಗಿಯೂ ಉತ್ತಮವಾಗಿ ಆಡಿದ್ದಾರೆ. ಅವರು ಪ್ಯಾಡಲ್ ಸ್ವೀಪ್, ಅಪ್ಪರ್ ಕಟ್ ಶಾಟ್ ಮತ್ತು ಯಾರ್ಕರ್ ಚೆಂಡುಗಳನ್ನು ಮೈದಾನದಿಂದ ಆಚೆ ಅಟ್ಟಬಲ್ಲರು. ರಿಷಭ್ ಪಂತ್ ನಮ್ಮ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

4) ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ :
ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ರಿವರ್ಸ್ ಶಾಟ್, ಹುಕ್ ಶಾಟ್ ಮತ್ತು ಚೆಂಡನ್ನು ನೇರವಾಗಿ ಹೊಡೆಯಬಲ್ಲರು. 2014 ರ ಐಪಿಎಲ್ ಆವೃತ್ತಿಯಲ್ಲಿ ಅವರು ತಮ್ಮ ತಂಡಕ್ಕಾಗಿ ವಿವಿಧ ಹೊಡೆತಗಳನ್ನು ಪ್ರದರ್ಶಿಸಿ ಸಾಕಷ್ಟು ಗಮನ ಸೆಳೆದಿದ್ದಲ್ಲದೇ ಆ ಸೀಸನ್ ನಲ್ಲೇ ಅವರು ಕ್ರಿಕೇಟ್ ಜಗತ್ತನ್ನು ತಮ್ಮತ್ತ ಕೇಂದ್ರೀಕರಿಸಿಕೊಂಡಿದ್ದರು. ಅವರು ತಮ್ಮ ರಾಷ್ಟ್ರೀಯ ತಂಡಕ್ಕಾಗಿ ಕ್ರಿಕೆಟ್‌ ನ ಎಲ್ಲಾ ಮೂರು ಸ್ವರೂಪಗಳನ್ನು ಆಡಿದ್ದಾರೆ. ಗ್ಲೆನ್ ಮ್ಯಾಕ್ಸ್ ವೆಲ್ ನಮ್ಮ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

5) ಭಾರತದ ಬ್ಯಾಟ್ಸ್‌ಮನ್ ಸೂರ್ಯ ಕುಮಾರ್ ಯಾದವ್ :
ಭಾರತದ ಬ್ಯಾಟ್ಸ್‌ಮನ್ ಸೂರ್ಯ ಕುಮಾರ್ ಯಾದವ್ ಎಬಿ ಡಿವಿಲಿಯರ್ಸ್‌ ಅವರ ಹಾಗೆ 360 ಡಿಗ್ರಿ ಶಾಟ್‌ ಗಳನ್ನು ಆಡಬಲ್ಲರು. ಕಳೆದ ಐಪಿಎಲ್ ಋತುವಿನಲ್ಲಿ, ಮತ್ತು ಮೊನ್ನೆ ನಡೆದ ಐಪಿಎಲ್ ನಲ್ಲೂ ಸೂರ್ಯಕುಮಾರ್ ಸಾಕಷ್ಟು ಒಳ್ಳೆಯ ಪ್ರದರ್ಶನ ನಿಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಟ್ರೋಫಿಯನ್ನು ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಭವಿಷ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಅವರಿಗೆ ಭಾರತೀಯ ತಂಡ ಪರ ಆಡಲು ಮತ್ತು ಉತ್ತಮ ಬ್ಯಾಟ್ಸ್‌ ಮನ್ ಎಂದು ಸಾಬೀತುಪಡಿಸುವ ಅವಕಾಶ ಸಿಗಲಿದೆ. ಸೂರ್ಯ ಕುಮಾರ್ ಯಾದವ್ ನಮ್ಮ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದ್ದಾರೆ.

ವಾಸ್ತವದಲ್ಲಿ ಎಬಿಡಿಗೆ ಇತರರನ್ನು ಹೋಲಿಸುವುದು ಸರಿಯಲ್ಲವಾದರೂ ಇದೊಂದು ಸಣ್ಣ ಪ್ರಯತ್ನವಷ್ಟೇ. ಈ ಬಗ್ಗೆ ನಿಮ್ಮಲ್ಲಿ ಹಲವರಿಗೆ ತಕರಾರು ಇರಬಹುದು, ಇವರಲ್ಲಿ ಯಾರು ಈ ಟಾಪ್ – 5 ಪಟ್ಟಿಯಲ್ಲಿ ಇರಬಾರದು ಹಾಗೂ ಯಾರು ಇರಬೇಕಿತ್ತು ಎಂದು ಕಾಮೆಂಟ್ ಮಾಡಿ.
-Team Infotrend