ಉಳಿತಾಯ ಯೋಜನೆಯಲ್ಲಿ ನಿಮ್ಮ ಹಣ ಡಬಲ್ ಆಗಬೇಕೆಂದರೆ ಇಲ್ಲಿ ಹಣವನ್ನು ಹೂಡಿಕೆ ಮಾಡಿ, ಮುಕ್ತಾಯದ ನಂತರ ನಿಮಗೆ 4 ಲಕ್ಷಕ್ಕೆ 8 ಲಕ್ಷ ರೂ. ಸಿಗುತ್ತದೆ!

ನೀವು ಉಳಿತಾಯ ಯೋಜನೆಯಿಂದ ಡಬಲ್ ರಿಟರ್ನ್ಸ್ ಗಳಿಸಲು ಬಯಸಿದರೆ, ನೀವು ಹಣವನ್ನು ಉಳಿತಾಯ ಯೋಜನೆಯಲ್ಲಿ ಇರಿಸಲು ಯೋಚಿಸುತ್ತಿದ್ದರೆ ಅಥವಾ ನೀವು ಹಣ ಉಳಿತಾಯ ಮಾಡಲು ಬಯಸಿದ್ದರೆ, ಅಂಚೆ ಕಚೇರಿಯ ವಿಶೇಷ ಉಳಿತಾಯ ಯೋಜನೆ ನಿಮಗೆ ಪ್ರಯೋಜನಕಾರಿಯಾಗಿದೆ. ಈ ಯೋಜನೆಯ ಮೂಲಕ ಪ್ರತಿ ತಿಂಗಳು ಉತ್ತಮ ಆದಾಯವೂ ಇದೆ. ಈ ಯೋಜನೆಗಳ ಬಗ್ಗೆ ನಾವು ನಿಮಗೆ ಎಲ್ಲವನ್ನೂ ಹೇಳೋಣ:

ಕಿಸಾನ್ ವಿಕಾಸ್ ಪತ್ರ (ಕೆವಿಪಿ) :
ಕಿಸಾನ್ ವಿಕಾಸ್ ಪತ್ರವು ಭಾರತ ಸರ್ಕಾರದ ಒನ್ ಟೈಮ್ ಹೂಡಿಕೆ ಯೋಜನೆಯಾಗಿದ್ದು, ಒಂದು ನಿರ್ದಿಷ್ಟ ಅವಧಿಯಲ್ಲಿ ನಿಮ್ಮ ಹಣ ದ್ವಿಗುಣಗೊಳ್ಳುತ್ತದೆ. ಕಿಸಾನ್ ವಿಕಾಸ್ ಪತ್ರ ದೇಶದ ಎಲ್ಲಾ ಅಂಚೆ ಕಚೇರಿಗಳು ಮತ್ತು ದೊಡ್ಡ ಬ್ಯಾಂಕುಗಳಲ್ಲಿ ಸಿಗುತ್ತವೆ. ಇದರ ಮುಕ್ತಾಯ ಅವಧಿ 124 ತಿಂಗಳುಗಳು. ಇದರಲ್ಲಿ ಕನಿಷ್ಠ ಹೂಡಿಕೆ 1000 ರೂಪಾಯಿ ಮಾಡಬೇಕಿದ್ದು, ಗರಿಷ್ಠ ಹೂಡಿಕೆಗೆ ಮಿತಿಯಿಲ್ಲ.

ಕೆವಿಪಿಗೆ ಬಡ್ಡಿದರವನ್ನು 2021 ರ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 6.9 ಕ್ಕೆ ನಿಗದಿಪಡಿಸಲಾಗಿದೆ. ಅಂದಾಜಾಗಿ ಹೇಳುವುದಾದರೆ ನಿಮ್ಮ ಹೂಡಿಕೆ 124 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ. ಅಂದರೆ ನೀವು 1 ಲಕ್ಷ ರೂಪಾಯಿಗಳನ್ನು ಸಂಪೂರ್ಣವಾಗಿ ಹೂಡಿಕೆ ಮಾಡಿದರೆ, ಮುಕ್ತಾಯದ ನಂತರ ನಿಮಗೆ 2 ಲಕ್ಷ ರೂಪಾಯಿ ಸಿಗುತ್ತದೆ.

ಪೋಸ್ಟ್ ಆಫೀಸ್ ಟೈಮ್ ಡಿಪಾಜಿಟ್ (ಪಿಒಟಿಡಿ) :
ಎಫ್‌ಡಿ ಯಲ್ಲಿ ಇದಕ್ಕಿಂತ ಹೆಚ್ಚಿನದನ್ನು ನೀವು ಬಯಸಿದರೆ, ಪೋಸ್ಟ್ ಆಫೀಸ್ ಟೈಮ್ ಡಿಪಾಜಿಟ್ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವುದು ಸರಿಯಾಗಿದೆ. ನೀವು 1 ವರ್ಷ, 2 ವರ್ಷ, 3 ವರ್ಷ ಮತ್ತು 5 ವರ್ಷಗಳವರೆಗೆ ಈ ಖಾತೆಯನ್ನು ತೆರೆಯಬಹುದು. ಅಂಚೆ ಕಚೇರಿಯಲ್ಲಿ 1 ವರ್ಷದಿಂದ 3 ವರ್ಷಗಳ ಹೂಡಿಕೆಗೆ ಟೈಮ್ ಡಿಪಾಜಿಟ್ ಮೇಲೆ ಶೇಕಡಾ 5.5 ರಷ್ಟು ಆದಾಯವನ್ನು ಪಡೆಯಬಹುದು.

ನೀವು ಅದನ್ನು ಐದು ವರ್ಷಗಳವರೆಗೆ ಮಾಡಿದರೆ, ನಿಮಗೆ ಶೇಕಡಾ 6.7 ರಷ್ಟು ಲಾಭ ಸಿಗುತ್ತದೆ. ಮುಕ್ತಾಯದ ಮೊದಲು ನೀವು ಹೂಡಿಕೆ ಮಾಡಿದ ಮೊತ್ತವನ್ನು ಹಿಂತೆಗೆದುಕೊಂಡರೆ, ನೀವು ಪೋಸ್ಟ್ ಆಫೀಸ್ ಉಳಿತಾಯ ಖಾತೆಯಂತಹ ಬಡ್ಡಿಯನ್ನು ಮಾತ್ರ ಪಡೆಯುತ್ತೀರಿ. ಐದು ವರ್ಷಗಳ ಟೈಮ್ ಡಿಪಾಜಿಟ್ ನಲ್ಲಿ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯುವ ಪ್ರಯೋಜನವಿದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (ಎನ್‌ಎಸ್‌ಸಿ) :
ಪೋಸ್ಟ್ ಆಫೀಸ್‌ ನ ಈ ಯೋಜನೆ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು, ಅಂದರೆ ಎನ್‌ಎಸ್‌ಸಿ. ಹೂಡಿಕೆದಾರರು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಅಡಿಯಲ್ಲಿ ಉತ್ತಮ ಆದಾಯವನ್ನು ಪಡೆಯುತ್ತಾರೆ. ಇದಲ್ಲದೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಸಹ ಪಡೆಯಬಹುದು.

1.5 ಲಕ್ಷ ರೂ.ಗಳ ಗರಿಷ್ಠ ತೆರಿಗೆ ಪ್ರಯೋಜನವನ್ನು ಪಡೆಯಬಹುದು. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಯೋಜನೆಗೆ ವಾರ್ಷಿಕವಾಗಿ ಶೇ 6.8 ರಷ್ಟು ಬಡ್ಡಿ ಸಿಗುತ್ತದೆ. ಇದನ್ನು ವಾರ್ಷಿಕ ಆಧಾರದ ಮೇಲೆ ಸಂಯೋಜಿಸಲಾಗುತ್ತದೆ. ಹಾಗೆಯೇ ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ಸ್ಥಿರ ಠೇವಣಿಗಳ ಮೇಲೆ ಗರಿಷ್ಠ 5.40% ಬಡ್ಡಿಯನ್ನು ಕೊಡುತ್ತಿದೆ.

ಹೂಡಿಕೆ ಮಾಡುವುದರಿಂದ ನೀವು ಎಲ್ಲಿ ಹೆಚ್ಚಿನ ಲಾಭ ಪಡೆಯುತ್ತೀರಿ ಎಂದು ಲೆಕ್ಕ ಹಾಕಿ ಹೂಡಿಕೆ ಮಾಡಿ. ಹಣ ಡಬಲ್ ಮಾಡುತ್ತೇವೆ ಎನ್ನುವ ಚಿಟ್ ಫಂಡ್, ಚೀಟಿ ಹಾಕುವುದು ಇತ್ಯಾದಿಗಳಿಂದ ದೂರ ಇರಿ.
-Team Infotrend