VIDEO : ಘೇಂಡಾಮೃಗ ಕೀಬೋರ್ಡ್ ನುಡಿಸುವುದನ್ನು ನೋಡಿದ್ದೀರಾ? ಇಲ್ಲಿ ವಿಡಿಯೊ ಇದೆ ನೋಡಿ… ಹಾಗೆಯೇ ಘೇಂಡಾ ಬಗ್ಗೆ ರೋಚಕ ಮಾಹಿತಿ ಕೂಡ ಇದೆ

ಮನುಷ್ಯನ ಕೈಯಲ್ಲಿ ಸಿಕ್ಕು ಪ್ರಾಣಿಗಳು ಇನ್ನೂ ಏನೆನಾಗುತ್ತವೋ! ನಾಯಿ, ನರಿ, ಬೆಕ್ಕು, ಹುಲಿ, ಸಿಂಹ, ಆನೆ ಹೀಗೆ ಬಹುತೇಕ ಎಲ್ಲ ಪ್ರಾಣಿಗಳನ್ನೂ ಮನುಷ್ಯ ಪಳಗಿಸಿ ತಾನು ಹೇಳಿದ ಹಾಗೆ ಕೇಳುವಂತೆ ಮಾಡ್ಕಂಡಿದಾನೆ. ಈಗ ಹೊಸದಾಗಿ ಘೇಂಡಾ ಕೂಡ ಮನುಷ್ಯ ಹೇಳಿದಂತೆ ಕೇಳತೊಡಗಿದೆ. ಕೆಳಗಿನ ವಿಡಿಯೊದಲ್ಲಿ ನೀವು ಘೇಂಡಾಮೃಗ ಮನುಷ್ಯನ ತರಬೇತಿಯಂತೆ ಕೀಬೋರ್ಡ್ ಮೇಲೆ ಬೆರಳಾಡಿಸುವುದನ್ನು ಅಲ್ಲಲ್ಲ ತುಟಿಯಾಡಿಸುವುದನ್ನು ನೋಡಬಹುದು!

ಈ ವಿಸ್ಮಯಕಾರಿ ವಿಡಿಯೊ ಹೊರಬಂದಿರುವುದು ಅಮೇರಿಕಾದ ಕೊಲರಾಡೋದ ಝೂ ನಿಂದ. ಈ ಘೇಂಡಾಗೆ ಹನ್ನೆರಡು ವರ್ಷ ತುಂಬಿದ ಪ್ರಯುಕ್ತ ಅದರ ಬರ್ಥ್ ಡೇ ದಂದು ಅದು ತನಗೆ ವಿಷ್ ಮಾಡಲು ಬಂದವರಿಗೆ ತನ್ನ‌ ಈ ಕಲೆಯನ್ನು ಪ್ರದರ್ಶಿಸಿತು! ಡೆನ್ವರ್ ಝೂ ನಲ್ಲಿರುವ ಬಂಧು ಎಂಬ ಹೆಸರಿನ ಈ ಘೇಂಡಾ ತನ್ನ ಮೇಲ್ದುಟಿಯಿಂದ  ಕೀ ಬೋರ್ಡ್ ನುಡಿಸುತ್ತದೆ.

ಡೆನ್ವರ್ ಝೂ ನವರು ತಮ್ಮ ಅಧಿಕೃತ ಇನ್ಸ್ಟಾ ಖಾತೆಯಲ್ಲಿ ಆ ವಿಡಿಯೊ ಹಂಚಿಕೊಂಡಿದ್ದು, ಈಗ ಅದು ಭಾರಿ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಆ ವಿಡಿಯೊ ನೋಡಿದವರು ಫನ್ನಿ ಕಾಮೆಂಟ್ ಮಾಡುತ್ತಿದ್ದಾರೆ. ಘೇಂಡಾ ನುಡಿಸಿರುವುದು ತಾನೆ ರಚಿಸಿ ತಾನೆ ಸಂಗೀತ ಸಂಯೋಜಿಸಿರುವ ಹಾಡಿನ ತುಣುಕಾಗಿರಬಹುದು ಎಂದು ಜನ ಕಾಮೆಂಟ್ ಮಾಡಿದ್ದಾರೆ! ವೈರಲ್ ಆಗಿರುವ ವಿಡಿಯೊ ತುಣುಕು ಇಲ್ಲಿದೆ ನೋಡಿ.

ಹಾಗೆಯೇ ಘೇಂಡಾ ಬಗ್ಗೆ 20 ಕುತೂಹಲಕಾರಿ ಸಂಗತಿಗಳು ಇಲ್ಲಿವೆ, ಭೂಮಿಯ ಮೇಲೆ ಕಂಡುಬರುವ ಪ್ರಾಣಿಗಳಲ್ಲಿ, ಘೇಂಡಾ ಆನೆಯ ನಂತರ ಅತಿದೊಡ್ಡ ಸಸ್ತನಿಯಾಗಿದೆ. ಒಟ್ಟು ಐದು ಜಾತಿಯ ಖಡ್ಗಮೃಗಗಳಿವೆ,  ಖಡ್ಗಮೃಗದ ನಿರಂತರ ಬೇಟೆಯಿಂದಾಗಿ, ಈಗ ಖಡ್ಗಮೃಗದ ಪ್ರಭೇದಗಳು ಅಳಿವಿನ ಅಂಚಿಗೆ ತಲುಪಿವೆ. ಇಂದು ನಾವು ಖಡ್ಗಮೃಗಕ್ಕೆ ಸಂಬಂಧಿಸಿದ ಕೆಲವು ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. ಆಸಕ್ತಿ ಇರುವವರು ಓದಿ…

1 ಖಡ್ಗಮೃಗವನ್ನು ಇಂಗ್ಲಿಷ್ನಲ್ಲಿ Rhinoceros ಎಂದು ಕರೆಯಲಾಗುತ್ತದೆ.

2 ಖಡ್ಗಮೃಗವು ಆರು ಅಡಿ ಎತ್ತರ ಮತ್ತು 11 ಅಡಿ ಉದ್ದದವರೆಗೆ ಬೆಳೆಯುತ್ತದೆ!

3 ಖಡ್ಗಮೃಗದ ಸರಾಸರಿ ತೂಕ 2000 ರಿಂದ 2700 ಕೆ.ಜಿ ಗಳವರೆಗೆ ಇರುತ್ತದೆ. ಭಾರತದಲ್ಲಿನ ಒಂದು ಘೇಂಡಾದ ತೂಕ 3800 ಕೆ.ಜಿ ಇತ್ತು!

4 ಖಡ್ಗಮೃಗದಲ್ಲಿ ಐದು ಪ್ರಭೇದಗಳಿವೆ, ಇವುಗಳಲ್ಲಿ ಕಪ್ಪು, ಭಾರತೀಯ, ಜಾವನ್, ಸುಮತಾ ಘೇಂಡಾ ಆಗಿವೆ.

5 ಆಫ್ರಿಕಾದಲ್ಲಿ ಕಂಡುಬರುವ ಬಿಳಿ ಖಡ್ಗಮೃಗವು ಸಂಪೂರ್ಣವಾಗಿ ಬಿಳಿಯಾಗಿರುವುದಿಲ್ಲ, ಅವು ಸ್ವಲ್ಪ ಕಂದು ಬಣ್ಣದಲ್ಲಿರುತ್ತವೆ. ಅವು ಕಪ್ಪು ಘೇಂಢಾಗಿಂತ ಸ್ವಲ್ಪ ದೊಡ್ಡ ಬಾಯಿ ಹೊಂದಿರುತ್ತವೆ.

6 ಭಾರತದಲ್ಲಿ ಖಡ್ಗಮೃಗವು ಅಸ್ಸಾಂ ರಾಜ್ಯದ ಕಾಂಜೀರಂಗಾ ರಾಷ್ಟ್ರೀಯ ಉದ್ಯಾನದಲ್ಲಿ ಕಂಡುಬರುತ್ತದೆ.

7 ಭಾರತದಲ್ಲಿ ಖಡ್ಗಮೃಗವನ್ನು ಪಶ್ಚಿಮ ಬಂಗಾಳ, ಒರಿಸ್ಸಾ, ಉತ್ತರ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಮತ್ತು ಅಸ್ಸಾಂ ಹೊರತುಪಡಿಸಿ ಹಿಮಾಲಯದ ಕೆಳಗಿನ ಬೆಟ್ಟಗಳಲ್ಲಿಯೂ ಕಾಣಬಹುದು.

8 ಏಷ್ಯಾದಲ್ಲಿ ಭಾರತ, ಪಾಕಿಸ್ತಾನ, ಮ್ಯಾನ್ಮಾರ್, ನೇಪಾಳ ಮತ್ತು ಚೀನಾದ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ.

9 ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಕಂಡುಬರುವ ಜಾವನ್ ಖಡ್ಗಮೃಗದ ಪ್ರಭೇದದಲ್ಲಿ 50 ಖಡ್ಗಮೃಗಗಳು ಮಾತ್ರ ಉಳಿದಿವೆ.

10 ಖಡ್ಗಮೃಗದ ಸುಮತಾರನ್ ಪ್ರಭೇದಗಳು ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಮಾತ್ರ ಕಂಡುಬರುತ್ತವೆ.

11 ಖಡ್ಗಮೃಗದ ಚರ್ಮವು ತುಂಬಾ ದಪ್ಪವಾಗಿರುತ್ತದೆ. ಅವರ ಚರ್ಮವು ತೆಳುವಾಗಿದ್ದರೆ, ಸೂರ್ಯನ ಕಿರಣಗಳಿಂದ ಅವು ಹಾನಿಗೊಳಗಾಗಬಹುದು. ತನ್ನ ಚರ್ಮವನ್ನು ರಕ್ಷಿಸಿಕೊಳ್ಳಲು ಅದು ಮಣ್ಣನ್ನು ಮೆತ್ತಿಕೊಳ್ಳುತ್ತದೆ ಹಾಗೂ ಕೆಸರಿನಲ್ಲಿ ವಾಸಿಸಲು ಇಷ್ಟಪಡುತ್ತದೆ.

12 ಖಡ್ಗಮೃಗ ಸಸ್ಯಾಹಾರಿ ಪ್ರಾಣಿಗಳು. ಅವು ಹುಲ್ಲು, ಪೊದೆಗಳು, ಎಲೆಗಳು ಇತ್ಯಾದಿಗಳನ್ನು ತಿನ್ನುತ್ತವೆ.

13 ಘೇಂಡಾದ ಬಾಯಿ ಮೇಲೆ ಕಂಡುಬರುವ ಕೊಂಬು ವಾಸ್ತವವಾಗಿ ಕೊಂಬು ಅಲ್ಲ, ಇದು ಸಾವಿರಾರು ದಪ್ಪ ಮತ್ತು ಬಲವಾದ ಕೂದಲಿನ ಗುಂಪಾಗಿದೆ.

14 ಅದರ ಕೊಂಬು ಅಂದರೆ ಅನೇಕ ಕೂದಲಿನ ಗುಂಪು ಮುರಿದರೆ, ಅದು ಸ್ವಲ್ಪ ಸಮಯದ ನಂತರ ಮತ್ತೆ ಬೆಳೆಯುತ್ತದೆ.

15 ಏಷ್ಯಾದಲ್ಲಿ ಕಂಡುಬರುವ ಖಡ್ಗಮೃಗವು ಒಂದು ಕೊಂಬನ್ನು ಹೊಂದಿದ್ದರೆ, ಆಫ್ರಿಕಾದಲ್ಲಿ ಕಂಡುಬರುವ ಖಡ್ಗಮೃಗವು ಎರಡು ಕೊಂಬುಗಳನ್ನು ಹೊಂದಿರುತ್ತದೆ.

16 ಇಲ್ಲಿಯವರೆಗಿನ ಅತ್ಯಂತ ಉದ್ದದ ಕೊಂಬಿನ ಅಳತೆ 4 ಅಡಿ 9 ಇಂಚು ಅಳತೆ ಮಾಡಲಾಗಿದೆ.

17 ಖಡ್ಗಮೃಗವು ಗಂಟೆಗೆ 50 ರಿಂದ 55 ಕಿಲೋಮೀಟರ್ ವೇಗದಲ್ಲಿ ಚಲಿಸಬಹುದು.

18 ಈ ಪ್ರಾಣಿಗೆ ನೋಡಲು ಹೆಚ್ಚಿನ ದೃಷ್ಟಿಶಕ್ತಿ ಇಲ್ಲ, ಆದರೆ ಇದು ಹೆಚ್ಚಿನ ಶ್ರವಣ ಶಕ್ತಿಯನ್ನು ಹೊಂದಿದೆ.

19 ಖಡ್ಗಮೃಗದ ಹಿಂಡುಗಳನ್ನು ಇಂಗ್ಲಿಷ್ನಲ್ಲಿ ಕ್ರ್ಯಾಶ್ ಎಂದು ಕರೆಯಲಾಗುತ್ತದೆ.

20 50 ಪ್ರತಿಶತ ಗಂಡು ಮತ್ತು 30 ಪ್ರತಿಶತ ಹೆಣ್ಣು ಖಡ್ಗಮೃಗಗಳು ಜಗಳ ಮಾಡಿ ಮಾಡಿ ಸಾಯುತ್ತವೆ!

-Team Infotrend