VIDEO : ಡ್ಯೂಟಿಗೆ ಮರಳುತ್ತಿರುವ ಸಬ್ ಇನ್ಸಪೆಕ್ಟರ್ ತಾಯಿ ಹಿಂದೆ ಓಡುವ ಮಗಳು : ವೈರಲ್ ಆಯ್ತು ಭಾವನಾತ್ಮಕ ವಿಡಿಯೋ
ಅಂತರ್ಜಾಲದಲ್ಲಿ ವೈರಲ್ ಆದ ಈ ವಿಡಿಯೋದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿ ಎಷ್ಟೇ ಕಟ್ಟುನಿಟ್ಟಾಗಿರಲಿ, ಆದರೆ ಮಗ ಅಥವಾ ಮಗಳು ಮುಂದೆ ಇರುವಾಗ ತಾಯಿಯ ವಾತ್ಸಲ್ಯ ಹೊರಬರುತ್ತದೆ ಎಂದು ತೋರಿಸುತ್ತದೆ. ಈ ವಿಡಿಯೋ ಅಂತರ್ಜಾಲದಲ್ಲಿ ಭರ್ಜರಿ ವೈರಲ್ ಆಗಿದೆ. ಮಹಿಳೆ ತನ್ನ ಎಲ್ಲ ಕರ್ತವ್ಯಗಳನ್ನು ನಿರ್ವಹಿಸುತ್ತಾಳೆ ಅದರಲ್ಲೂ ತಾಯಿಯ ಪಾತ್ರದಲ್ಲಿದ್ದಾಗ ಅವಳು ತುಂಬಾ ಮಮತಾಮಯಿ.
ತಾಯಿಯ ದಿನದಂದು ಹೆಚ್ಚಿನ ಜನರು ತಮ್ಮ ತಾಯಿಯನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಅವರೊಂದಿಗೆ ಅಮೂಲ್ಯ ಕ್ಷಣಗಳನ್ನು ಕಳೆಯುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ, ಇದರಲ್ಲಿ ಮಹಿಳಾ ಸಬ್ ಇನ್ಸ್ಪೆಕ್ಟರ್ ಅನಿತಾ ಪೊಲೀಸ್ ಕರ್ತವ್ಯ ನಿರ್ವಹಿಸಿ ಮನೆಗೆ ಬಂದು ಮತ್ತೆ ಮರಳಿ ಡ್ಯೂಟಿಗೆ ಹೋಗುವಾಗ ಮಗಳು ಅವಳ ಹಿಂದೆ ಓಡಲು ಪ್ರಾರಂಭಿಸುತ್ತಾಳೆ.
ಮಹಿಳೆ ತನ್ನ ಮನೆಯಲ್ಲಿ ಕರ್ತವ್ಯಕ್ಕೆ ಹಿಂತಿರುಗಿರುವುದನ್ನು ನೋಡಿದ ನಂತರ, ಮಗಳು ಅವಳ ಹಿಂದೆ ಓಡಲು ಪ್ರಾರಂಭಿಸಿದಳು. ಈ ಭಾವನಾತ್ಮಕ ವೀಡಿಯೊವನ್ನು ನೋಡಿದ ಜಾಲತಾಣಿಗರು ಭಾವುಕರಾಗಿದ್ದಾರೆ. ಈ ಮಹಾರಾಷ್ಟ್ರ ಪೊಲೀಸ್ ಅಧಿಕಾರಿಯ ವಿಡಿಯೋ ಅಂತರ್ಜಾಲದಲ್ಲಿ ಭರ್ಜರಿ ವೀಕ್ಷಣೆ ಕಾಣುತ್ತಿದೆ. ವೀಡಿಯೊವನ್ನು ಲಕ್ಷಾಂತರ ಬಾರಿ ನೋಡಲಾಗಿದೆ. ಮೂರು ಲಕ್ಷದ ಹತ್ತಿರ ಲೈಕ್ಸ್ ಸಿಕ್ಕಿವೆ.
ಕೊರೋನ ಎರಡನೇ ಅಲೆಯು ಭಾರತದಲ್ಲಿ ಭಾರೀ ಜೀವಹಾನಿ ಮಾಡುತ್ತಿದ್ದು, ದೇಶದೆಲ್ಲೆಡೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಒಂದು ಕಡೆ ಜನರಿಗೆ ಕೆಲಸವಿಲ್ಲದೇ ಜೀವನ ನಡೆಸುವುದು ಕಷ್ಟವಾಗಿದ್ದರೆ, ಇನ್ನೊಂದು ಕಡೆ ಕೊರೋನ ಸೋಂಕು ಅವರನ್ನು ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ.
ಇನ್ನು ವೈದ್ಯರು, ನರ್ಸ್, ಆ್ಯಂಬುಲೆನ್ಸ್ ಚಾಲಕರು, ಆಸ್ಪತ್ರೆ ಸ್ಟಾಪ್, ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಇತರ ಎಲ್ಲ ಕೊರೋನ ವಾರಿಯರ್ ಗಳು ಡ್ಯೂಟಿ ಮಾಡುವುದು ತಂತಿಯ ಮೇಲೆ ನಡೆದ ಹಾಗಿದೆ, ಮನೆ ಮಠ ಎಲ್ಲವನ್ನೂ ಬಿಟ್ಟು ಅವರು ಮಾಡುತ್ತಿರುವ ಕೆಲಸಕ್ಕೆ ಎಲ್ಲರೂ ಸಲಾಮ್ ಹೇಳಲೇಬೇಕು.
ಸದಾಕಾಲ ರಸ್ತೆಯಲ್ಲಿಯೇ ಅಥವಾ ಸಾರ್ವಜನಿಕ ಸ್ಥಳದಲ್ಲಿಯೇ ಇರುವ ಪೊಲೀಸರ ಕರ್ತವ್ಯವಂತೂ ಸಾಮಾನ್ಯವಾದುದಲ್ಲ. ವಿಡಿಯೊದಲ್ಲಿರುವ ಮಹಿಳೆ ತಾನು ಮಹಿಳೆ ಅಂತ ಯಾವುದೇ ರಿಯಾಯಿತಿ ಪಡೆಯದೇ ಹಗಲು ರಾತ್ರಿ ಜನರ ಸುರಕ್ಷೆಗಾಗಿ ದುಡಿಯುತ್ತಿದ್ದಾರೆ. ಮಹಿಳಾ ಸಬ್ ಇನ್ಸ್ಪೆಕ್ಟರ್ ಅನಿತಾ ರವರ ಈ ವಿಡಿಯೊ ಸ್ವಲ್ಪ ಹಳೆಯದಾಧರೂ ಈಗ ಭರ್ತಿ ವೈರಲ್ ಆಗುತ್ತಿದೆ. ವಿಡಿಯೊ ಮೇಲಿದೆ ನೋಡಿ…
-Team Infotrend