VIDEO : ಇಲ್ಲಿ ಕೊರೋನ ಬಗ್ಗೆ ಭಯ ಬೇಡ : ಕೈಯಿಂದ ಮುಟ್ಟದೇ ಮಷಿನ್ ಮೂಲಕವೇ ಎಳನೀರು ತಗೆದುಕೊಡುವ ಹೈಟೆಕ್ ವೆಹಿಕಲ್!
ಕೊರೋನ ಬಂದಾಗಿನಿಂದ, ಅದರಲ್ಲೂ ಎರಡನೇ ಅಲೆ ಅಪ್ಪಳಿಸಿದಾಗಿನಿಂದ ಜನರು ಬೀದಿಬದಿಯ ಯಾವುದನ್ನೂ ಮುಟ್ಟುವುದಕ್ಕೂ ಕೂಡ ಹೆದರುತ್ತಿದ್ದಾರೆ. ಸಣ್ಣ ಪುಟ್ಟ ಹೊಟೆಲ್ ಗಳು, ಪಾನಿ ಪುರಿ, ಕಬಾಬ್ ಸ್ಟಾಲ್ ಗಳು, ಕಬ್ಬಿ ಹಾಲು ತಗೆದು ಕೊಡುವವರು, ಎಳನೀರು ಮಾರುವವರು ಇವರೆಲ್ಲರ ಬಾಳು ಬಲು ಕಷ್ಟವಾಗಿದೆ. ಇಂಥವರ ಬಳಿ ವ್ಯಾಪಾರ ಮಾಡಲು ಜನ ಹೆದರುತ್ತಿರುವುದು ಸುಳ್ಳಲ್ಲ. ಅದಕ್ಕೆ ಪ್ರಮುಖ ಕಾರಣ ಸ್ವಚ್ಚತೆ ಇಲ್ಲದಿರುವುದು.
ಅದಕ್ಕಾಗಿ ಎಳನೀರು ವ್ಯಾಪಾರಸ್ಥರ ಸಂಕಟ ನಿವಾರಣೆಗೆ ಬಂದಿದೆ ಈ ಹೈಟೆಕ್ ವೆಹಿಕಲ್. ಈ ಗಾಡಿಯಲ್ಲಿ ಮನುಷ್ಯರು ಕೈಯಿಂದ ಕತ್ತರಿಸಿ ಕೊಡುವ ಅಗತ್ಯವೇ ಇಲ್ಲ, ಮಾನವರು ಟಚ್ ಕೂಡ ಮಾಡದೇ ಎಳನೀರು ಸಂಗ್ರಹವಾಗಿ ಅತ್ಯಂತ ಶುದ್ದ ರೀತಿಯಲ್ಲಿ ಗ್ರಹರಿಗೆ ದೊರಕುತ್ತದೆ. ಇದಕ್ಕಾಗಿಯೇ ಇದು ಭರ್ಜರಿ ವೈರಲ್ ಆಗುತ್ತಿರುವ ವಿಡಿಯೊ ಮತ್ತು ಅದು ಭರ್ಜರಿ ಸೇಲಾಗುತ್ತಿರುವ ಕೈಗಾಡಿ.
ಬರಬರುತ್ತಾ ಈ ನೈಸರ್ಗಿಕ ಪೇಯದ ಬಗ್ಗೆ ಜನರಲ್ಲಿ ಅರಿವು ಮೂಡುತ್ತಿದ್ದು ಸಾಕಷ್ಟು ಸೇಲಾಗುತ್ತಿವೆ. ಆದರೆ ಕೊರೋನ ಬಂದಾಗಿನಿಂದ ಅವರ ವ್ಯಾಪಾರಕ್ಕೂ ಹೊಡೆತ ಬಿದ್ದಿದೆ. ಒಬ್ಬರು ಸ್ಟ್ರ ಹಾಕಿ ಅಥವಾ ಹಾಗೇ ಬಾಯಿ ಹಚ್ಚಿ ಕುಡಿದಿದ್ದನ್ನು ಮತ್ತೆ ಮಚ್ಚಿನಿಂದ ಕಡಿದು ಅವರಿಗೆ ಅದರೊಳಗಿನ ಮಲಾಯ್ ತಿನ್ನಲು ಕೊಡುತ್ತಿದ್ದರು, ಮತ್ತೆ ಅದೆ ಮಚ್ಚಿನಿಂದ ಇನ್ನೊಬ್ಬರಿಗೆ ಎಳನೀರು ಕೆತ್ತಿ ಕೊಡಲಾಗುತ್ತಿತ್ತು, ಇದು ಹಲವರಲ್ಲಿ ಆತಂಕ ತರಿಸಿತ್ತು.
ಇವರಲ್ಲಿ ಒಬ್ಬರಿಗಾರಿಗಾದರೂ ಸೋಂಕು ಇದ್ದರೆ ಅದು ಇತರರಿಗೂ ಹರಡುವ ಭೀತಿ ಇತ್ತು. ಈ ಬಗ್ಗೆ ಕೆಲದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಕೂಡ ಆಗಿತ್ತು. ಅದಕ್ಕೆಲ್ಲ ಉತ್ತರವೆಂಬಂತೆ ಈ ಮಷಿನ್ ಬಂದಿದೆ. ಹೀಗಾಗಿಯೇ ಈ ಕೊರೋನ ಕಾಲದಲ್ಲಿ ಇದಕ್ಕೆ ಹೆಚ್ಚು ಡಿಮ್ಯಾಂಡ್ ಬಂದಿದೆ. ಕೊರೋನ ಹೋದ ಮೇಲು ಕೂಡ ಸ್ವಚ್ಚತೆಗೆ ಆದ್ಯತೆ ಕೊಡುವವರು ಇಂತಲ್ಲಿಯೇ ಎಳನೀರು ಕುಡಿಯುತ್ತಾರೆ.
ಈ ಯಂತ್ರದ ಸಹಾಯದಿಂದ ಮನುಷ್ಯನ ಹೆಚ್ಚು ಸಂಪರ್ಕ ಇಲ್ಲದೆ ಅತ್ಯಂತ ಶುದ್ದವಾದ ಎಳನೀರು ಪಡೆಯಬಹುದು, ಜೊತೆಗೆ ಇಕ್ಕದಲ್ಲೇ ಇರುವ ಟೂಲ್ ನಿಂದ ಕಾಯಿ ಕಟ್ ಮಾಡಿ ಕೊಬ್ಬರಿ ತಿನ್ನಬಹುದು. ಕಡಿಯುವ ಬದಲು ಹೋಲ್ ಹಾಕುವ ಇದರಿಂದ ಎಳನೀರಿನಲ್ಲಿ ಹೆಚ್ಚು ಕಸರು ಬೀಳುವುದಿಲ್ಲ, ಅಲ್ಲಿಂದ ಸೀದಾ ಸೋಸಿ, ನಲ್ಲಿ ಮೂಲಕ ಗ್ಲಾಸಿಗೆ ತುಂಬಿ ಮೇಲೊಂದು ಮುಚ್ಚಳ ಹಾಕುವುದರಿಂದ ಇದು ಎಲ್ಲ ರೀತಿಯಿಂದಲೂ ಅತ್ಯಂತ ಸೇಫ್ ಆಗಿದೆ ಎನ್ನಬಹುದು.
Foodie_incarnate ಎಂಬುವವರು ಫೇಸ್ಬುಕ್ ಖಾತೆಯಲ್ಲಿ India’s Most Hygienic Coconut Water Cart ಎಂಬ ಶಿರ್ಷಿಕೆಯೊಂದಿಗೆ ಈ ಯಂತ್ರದ ವಿಡಿಯೊ ಅಪ್ ಲೋಡ್ ಮಾಡಿದ್ದು, ಅದು ಇಲ್ಲಿಯವರೆಗೆ ಐದು ಲಕ್ಷಕ್ಕೂ ಹೆಚ್ಚು ವಿವ್ಸ್ ಕಂಡಿದೆ. ಸುಮಾರು 9 ಸಾವಿರ ಜನ ಕಾಮೆಂಟ್ ಮಾಡಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂತರ ಆ ವಿಡಿಯೊ ರಿಮೂವ್ ಆಗಿದ್ದು ನಿವಿಲ್ಲಿ ಯೂಟ್ಯೂಬ್ ವಿಡಿಯೊ ನೋಡಬಹುದು.
ಇದರ ಬೆಲೆ ಬಗ್ಗೆ Foodie incarnate ನವರು ಏನೂ ಮಾಹಿತಿ ನೀಡಿಲ್ಲವಾದರೂ, ಅಂತರ್ಜಾಲದಲ್ಲಿ ಸರ್ಚ್ ಮಾಡಿದಾಗ, ಇದು ಹಲವು ಮಾಡೆಲ್ ಗಳಲ್ಲಿ ದೊರೆಯುತ್ತಿದ್ದು, ಬೆಲೆ ಸುಮಾರು 42 ಸಾವಿರದಿಂದ ಸುರುವಾಗುತ್ತದೆ. ಸಣ್ಣ ವ್ಯಾಪಾರಸ್ಥರಿಗೆ ಸ್ವಲ್ಪ ತೊಂದರೆಯಾಗುವುದಾದರೂ ಇದು ಒನ್ ಟೈಂ ಇನ್ವೆಸ್ಟ್ ಮೆಂಟ್. ಜೊತೆಗೆ ಇದು ಗ್ರಾಹಕರನ್ನು ಆಕರ್ಷಿಸಿಸುವುದರಿಂದ ಹಾಕಿದ ಬಂಡವಾಳ ಬೇಗ ಮರಳಿ ಬರುವುದು.
-Team Infotrend