VIDEO : ಮಾಸ್ಕ್ ಹಾಕದ ಮಹಿಳೆಯನ್ನು ಎಳೆದಾಡಿ ಥ’ಳಿಸಿದ ಪೊಲೀಸರು, ವಿಡಿಯೊ ವೈರಲ್
ಇದು ನಮ್ಮ ರಾಜ್ಯದಲ್ಲಿ ನಡೆದಿದ್ದಲ್ಲ, ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದ ಘಟನೆ. ಅಲ್ಲಿ ಲಾಕ್ ಡೌನ್ ಸಮಯದಲ್ಲಿ ಹೊರಗೆ ತಿರುಗುತ್ತಿದ್ದ ಮಹಿಳೆಗೆ, ಮಾಸ್ಕ್ ಧರಿಸಲು ಹೇಳಿದರು, ಅವಳು ವಾದಿಸಿದ್ದಕ್ಕೆ ಪೊಲೀಸರು ರಸ್ತೆಯಲ್ಲಿ ಎಳೆದಾಡಿ ಥ’ಳಿಸಿದ್ದಾರೆ. ಇದನ್ನು ಸ್ಥಳಿಯರು ರೆಕಾರ್ಡ್ ಮಾಡಿ ವೈರಲ್ ಮಾಡಿದ್ದು ಇದೀಗ ಈ ಪ್ರಕರಣದ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆ’ಕ್ರೋ’ಶ ವ್ಯಕ್ತವಾಗುತ್ತಿದೆ.
ಮಹಿಳೆ ಜೊತೆ ಆಕೆಯ ಮಗಳು ಕೂಡ ಇದ್ದು, ಆಕೆ ಬಿಡಿಸಿಕೊಳ್ಳಲು ಹೋದಷ್ಟೂ ಪೊಲೀಸರು ಹಟಕ್ಕೆ ಬಿದ್ದ ಹಾಗೆ ಆಕೆಗೆ ಥ’ಳಿಸಿದ್ದಾರೆ. ಎದುರು ವಾದಿಸಿದ ಕಾರಣಕ್ಕೆ ಆಕೆಯನ್ನು ಜೀಪಿಗೆ ತುಂಬಲು ನೋಡಿದರು, ಆದರೆ ಆಕೆ ಜೀಪ್ ಹತ್ತಲು ಒಪ್ಪಲಿಲ್ಲ. ನಂತರ ಪೊಲೀಸರ ಒತ್ತಡ ಹೆಚ್ಚಾಯಿತು.
ಈ ನಡುವೆ ಆಕೆಯ ಮಗಳು ಎಷ್ಟು ಸಲ ದೂರ ತಳ್ಳಿದರೂ ಮತ್ತೆ ಬಿಡಿಸಲು ಬರುತ್ತಿದ್ದಳು, ಆಗ ಪುರುಷ ಸಿಬ್ಬಂದಿಯೇ ಆಕೆಯನ್ನು ಜೋರಾಗಿ ಹಿಂದೆ ತಳ್ಳಿದ. ಇತ್ತ ಒಬ್ಬ ಮಹಿಳಾ ಕಾನಸ್ಟೇಬಲ್ ಆ ಮಹಿಳೆಯ ಮೇಲೆ ಜಿದ್ದಿಗೆ ಬಿದ್ದಂತೆ ಎಳೆದಾಡತೊಡಗಿದಳು.
ಮಗಳ ಕಣ್ಣೆದುರಲ್ಲೇ ಆಕೆಗೆ ಕಾಲಿನಿಂದ ಒದ್ದು, ಕೂದಲು ಹಿಡಿದು ಎಳೆದಾಡಿ ಥ’ಳಿಸಲಾಯಿತು. ತಾಯಿ ಮಗಳು ದಿನಸಿ ತರಲು ಮಾರ್ಕೆಟಿಗೆ ಹೋಗುತ್ತಿದ್ದರು. ಆಗ ಮಹಿಳೆ ಮಾಸ್ಕ್ ಧರಿಸಿರಲಿಲ್ಲ. ಲಾಕ್ ಡೌನ್ ಇದ್ದುದರಿಂದ ಎಲ್ಲ ಕಡೆ ಪೊಲೀಸರ ಕಣ್ಗಾವಲು ಇತ್ತು, ಆಗ ಮಾಸ್ಕ್ ಧರಿಸದೇ ಬಂದ ಈಕೆಯನ್ನು ಪೊಲೀಸರು ಪ್ರಶ್ನಿಸಿರುವುದು ಸರಿ ಇದೆ.
ಆದರೆ ಎಳೆದಾಡಿ ಥ’ಳಿಸುವ ಬದಲು ಕಾನೂನು ಪ್ರಕಾರ ಕೇಸ್ ಜಡಿದು ಒಳಗೆ ಕಳಿಸಬೇಕಿತ್ತು, ಹಾಗೂ ಅದಕ್ಕೆ ಪ್ರಚಾರ ಕೊಡಬೇಕಿತ್ತು, ಅಂದರೆ ಉಳಿದವರು ಹೆ’ದರುತ್ತಿದ್ದರು. ಅದು ಬಿಟ್ಟು ಹೀಗೆ ರಸ್ತೆಯಲ್ಲಿ ಥಳಿಸಿದರೆ ಜನರ ಕೆಂ’ಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಮೇಲಾಗಿ ಇಲಾಖೆಯ ಕ್ರಮ ಕೂಡ ಎದುರಿಸಬೇಕು.
ಕಳೆದ ಒಂದು ವರ್ಷದಿಂದ ಪೊಲೀಸರು ಮಾಡುತ್ತಿರುವ ಕೆಲಸದ ಬಗ್ಗೆ ನಮಗೆಲ್ಲ ಹೆಮ್ಮೆ ಇದೆ. ಹಗಲು ರಾತ್ರಿ ಕೊರೊನವನ್ನು ಸಾರ್ವಜನಿಕ ಸ್ಥಳದಲ್ಲಿಯೇ ಇದ್ದುಕೊಂಡು ನಮ್ಮೆಲ್ಲರ ರಕ್ಷಣೆಗೆ ಅವರೂ ಹೋರಾಡುತ್ತಿದ್ದಾರೆ. ಅದಕ್ಕಾಗಿ ಸಾವಿರಾರು ಪೊಲೀಸರು ಸ್ವತಃ ಸೋಂಕಿತರಾದರೂ ಅವರು ದೃತಿಗೆಟ್ಟಿಲ್ಲ.
ಹೀಗಿರುವಾಗ ಯಾರೊ ಕೆಲವರು ಸಾರ್ವಜನಿಕವಾಗಿ ಹೀಗೆ ಇಲಾಖೆಯ ಮರ್ಯಾದೆ ಕಳೆಯುವ ಕೆಲಸ ಮಾಡಬಾರದು. ಭಾರತದ ಮೇಲೆ ಕೊರೊನದ ಎರಡನೇ ಅಲೆ ಅಪ್ಪಳಿಸಿದಾಗಿನಿಂದ ಎಲ್ಲ ಕಡೆ ಆತಂಕದ ವಾತಾವರಣ ಇದೆ. ಅದರಲ್ಲೂ ನ್ಯೂಸ್ ಚಾನೆಲ್ ಗಳು ಭರಾಟೆಯಿಂದಾಗಿ ಜನ ಹೊರಗೆ ಬರಲೂ ಹೆದರುವಂತಾಗಿದೆ.
ಹಾಗಿರುವಾಗ ತಮ್ಮ ಜೀವ ಲೆಕ್ಕಿಸದೇ ಹಗಲಿರುಳು ಶ್ರಮಿಸುವ ಪೊಲೀಸರಿಗೆ ಸಾರ್ವಜನಿಕರು ಕೂಡ ಸಹಕಾರ ಕೊಡಬೇಕು. ಪ್ರತಿದಿನ ಇಷ್ಟೆಲ್ಲ ಸಾವು ನೋಡಿದ ಮೇಲೂ ಮಾಸ್ಕ್ ಹಾಕದೇ ಅಡ್ಡಾಡುತ್ತಿರಾಂದರೆ ಅವರಿನ್ನೆಂಥ ಮನುಷ್ಯಳಿರಬೇಕು. ಥ’ಳಿಸುವ ಬದಲು ಪೊಲೀಸರು ಸಾಂಕ್ರಾಮಿಕ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕಿತ್ತು.
Woman thrashed by madhya pradesh cops pic.twitter.com/iHengfLroY
— Crazy Creator (@CrazyCreator14) May 20, 2021
ದೇಶದೆಲ್ಲೆಡೆ ಕೊರೋನ ರಣಕೇಕೆ ಹಾಕುತ್ತಿದೆ, ನಮ್ಮ ಸಲುವಾಗಿ ಲಾಕ್ ಡೌನ್ ಹೇರಿದರೂ ದಿನನಿತ್ಯದ ವಸ್ತುಗಳನ್ನು ತರುವ ನೆಪದಲ್ಲಿ ನಾವು ಅಡ್ಡಾಡುವುದು, ಅದರಲ್ಲೂ ಮಾಸ್ಕ್ ಇಲ್ಲದೇ ತಿರುಗುವುದು ಖಂಡಿತ ಸರಿ ಅಲ್ಲ. ನಾವೂ ಅರ್ಥ ಮಾಡಿಕೊಂಡು ಗೈಡಲೈನ್ಸ್ ಪಾಲಿಸಬೇಕು, ಇದರಿಂದ ನಮಗೇ ಒಳ್ಳೆಯದಾಗುತ್ತದೆಯೇ ಹೊರತು ಪೊಲೀಸರಿಗಲ್ಲ.
-Team Infotrend