ಸೋಶಿಯಲ್ ಮಿಡಿಯಾದಲ್ಲಿ ಫೋಟೋ ಶೇರ್! ಜೋಡಿಗೆ ಬಿತ್ತು ಭಾರಿ ದಂಡ! 16 ವರ್ಷದ ಜೈಲು, 74 ಚಾವಟಿ ಏಟುಗಳು!!

ಇಂದಿನ ಕಾಲದಲ್ಲಿ ಜನರು ತಮ್ಮ ಮನೋರಂಜನೆ ಹಾಗೂ ಟೈಮ್ ಪಾಸ್ ಮಾಡುವ ಸಲುವಾಗಿ ಸಾಮಾಜಿಕ ಜಾಲತಾಣಗಳ ಹಚ್ಚು ಉಪಯೋಗ ಮಾಡುವರು. ಇದರಿಂದ ಅವರ ಮಾಡುವ ಪ್ರತಿಯೊಂದು ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿರುವದು ಇಂದು ಕಂಡು ಬರುತ್ತಿದೆ. ಆದರೆ ಇಂದು ನಾವು ತಿಳಿಸುವ ಘಟನೆ ತುಂಬಾ ವಿಚಿತ್ರವಾಗಿದೆ. ಏಕೆಂದರೆ ಈ ಪ್ರೇಮಿಗಳು ತಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಕ್ಕಾಗಿ ಅವರಿಗೆ ದಂಡದ ರೂಪದಲ್ಲಿ 16 ವರ್ಷ ಜೈಲು ಹಾಗೂ 74 ಚಾವಟಿ ಏಟುಗಳು ಹೊಡೆಯುವಂತೆ ಆದೇಶ ಕೋರ್ಟ್ ನೀಡಿದೆ. ಅಷ್ಟಕ್ಕೂ ನಡೆದದ್ದು ಏನೆಂಬುದು ಬಗ್ಗೆ ತಿಳಿಕೊಳ್ಳೋಣ ಬನ್ನಿ.

ಈ ಘಟನೆ ಇರಾನ್ ನಲ್ಲಿ ನಡೆದಿದೆ. ಇರಾನಿನ ಸಾಮಾಜಿಕ ಮಾಧ್ಯಮವಾದ ಇನ್ಫಲೆನ್ಸರ್ ತಿಳಿಸಿದ ರಿಪೋರ್ಟ ಪ್ರ ಕಾರ, ಅಹಮದ್ ಮೊಯಿನ್ ಶಿರಾಜಿ ಮತ್ತು ಅವರ ಪತ್ನಿ ಶಬನಮ್ ಶಾಹಾರೋಖಿ ಯವರಿಗೆ ಅಲ್ಲಿಯ ಕೋರ್ಟ್ ನೀಡಿದಂತ ನಿರ್ಣಯ ಕೇಳಿದರೆ ತುಂಬಾ ಶಾಕ್ ಆಗುವಿರಿ. ಅಲ್ಲಿಯ್ ಕೋರ್ಟ್ ಇವರಿಬ್ಬರನ್ನು 16 ವರ್ಷ ಜೈಲುವಾಸ ಹಾಗೂ 74 ಚಾವಟಿ ಹೊಡೆತ ಗಳನ್ನು ಹೊಡೆಯುವಂತೆ ಕೋರ್ಟ್ ಶಿಕ್ಷೆನೀಡಿದೆ. ಸದ್ಯಕ್ಕೆ ಇವರಿಬ್ಬರು ತುರ್ಕಿ ಯಲ್ಲಿ ವಾಸವಾಗಿದ್ದಾರೆ.

ಶಿರಾಜಿ ಅವರು ಕೆಲವು ದಿವಸಗಳ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ್ ಶೇರ್ ಮಾಡಿದ್ದರು ಅದರಲ್ಲಿ ಇವರಿಬ್ಬರ ಅಶ್ಲೀಲ ವಾಗಿ ಕಾಣಿಸಿಕೊಂಡಿದ್ದರು . ‘ ಸರಕಾರದ ವಿರುದ್ಧ ಪ್ರಚಾರ, ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಪೋಸ್ಟ್ ಮಾಡುವದು, ಮತ್ತು ನೈತಿಕ ಭ್ರಷ್ಟಾಚಾರ ಹೊರಡಿಸುವ ಆರೋಪ ಇವರ ಮೇಲೆ ಹೊರಸಿದೆ. ಶಿರಾಜಿ ಯವರ ಪ್ರಕಾರ ಇರಾನ್ ಕೋರ್ಟ್ ನಲ್ಲಿ ಯಾವುದೇ ಪ್ರಕಾರವಾಗಿ ನಮ್ಮನ್ನು ದೋಷಿ ಸಾಬೀತು ಪಡೆಸುತ್ತಿತ್ತು ಆದುದರಿಂದ ನಾವು ತುರ್ಕಿಯಲ್ಲಿ ಸ್ಥಳಾಂತರ ರಾಗಿದ್ದೇವೆ ಎಂದು ಹೇಳಿದ್ದಾರೆ.