VIDEO : ಅಕ್ರಮ ಮ’ದ್ಯ ಮಾರಾಟ ತಡೆಯಲು ಹೋದ ಪೋಲಿಸರಿಗೇ ತಿರುಗಿಬಿದ್ದ ಕು’ಡು’ಕರು!
ಇದು ನಡೆದಿರುವುದು ಬೀದರಿನ ಪ್ರತಾಪ್ ನಗರದಲ್ಲಿ. ಇದರಿಂದ ಜನರಿಗೆ ಕಾನೂನಿನ ಭಯ ಅದೆಷ್ಟರ ಮಟ್ಟಿಗೆ ಇದೆಯೆಂಬುದು ಅರಿವಾಗುತ್ತದೆ. ವಿಡಿಯೊದಲ್ಲಿದ್ದ ಹಾಗೆ ಮಾರಾಟಗಾರನೊಬ್ಬ ಯಾರಿಗೂ ಸೊಪ್ಪು ಹಾಕದೇ ಸಿಬ್ಬಂದಿಗೆ ಹೊಡೆಯಲು ಹೋಗುವುದನ್ನು ನೋಡಬಹುದು. ಅದಕ್ಕೂ ಮೊದಲೇ ಕೆಲವರು ಅಬಕಾರಿ ಪೊಲೀಸರಿಗೆ ಥ’ಳಿಸಿದ್ದಾರೆ, ಅದು ರೆಕಾರ್ಡಿಂಗ್ ಆಗಿಲ್ಲ.
ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ಪ್ರತಾಪ್ ನಗರಕ್ಕೆ ಹೋಗಿದ್ದರು, ಆಗ ಅಲ್ಲಿ ಗುಂಪು ಸೇರಿದ ಕಿ’ಡಿಗೇ’ಡಿಗಳು ಮಹಿಳಾ ಅಧಿಕಾರಿಯ ಎಚ್ಚರಿಕೆಗೆ ಮಣಿಯದೇ ಪುಂ’ಡಾಟ ಮೆರೆದಿದ್ದಾರೆ. ಎಲ್ಲ ಸಿಬ್ಬಂದಿಯನ್ನು ಅವರ ಡ್ಯೂಟಿ ಮಾಡದಂತೆ ತಡೆದು, ಬಾಯಿಗೆ ಬಂದಂತೆ ನಿಂದಿಸಿ ಕೈಗೆ ಸಿಕ್ಕಿದ್ದರಿಂದ ಥ’ಳಿಸಲಾಯಿತು.
ಕು’ಡಿ’ದಿದ್ದರು ಎನ್ನಲಾದ ಇಬ್ಬರು ಪೊಲೀಸರ ಕೈಯಲ್ಲಿನ ಲಾಟಿ ಕಸಿದುಕೊಂಡು ಅವರಿಗೇ ಹೊ’ಡೆದಿದ್ದಾರೆ. ಜೊತೆಗೆ ಸರ್ಕಾರಿ ಜೀಪ್ ಅನ್ನು ಕೂಡ ಕಲ್ಲಿನಿಂದ ಜಜ್ಜಿ ಜಖಂ ಗೊಳಿಸಿದ್ದಾರೆ. ಕೊನೆಗೆ ಅವರ ಪುಂಡಾಟ ಹೆಚ್ಚಾಯಿತು. ರೋಹಿತ್ ಎನ್ನುವ ಸಿಬ್ಬಂದಿಯನ್ನು ಥ’ಳಿಸಲು ಕೆಲವರು ಮುಂದಾದಾಗ ಮಹಿಳಾ ಅಧಿಕಾರಿ ಮಧ್ಯೆ ಹೋಗಿ ತಡೆದಿದ್ದಾರೆ. ನಂತರ ಅವರ ಜೊತೆಗೂ ಅನುಚಿತ ವರ್ತನೆ ಮಾಡಲಾಯಿತು.
ಬರಬರುತ್ತಾ ಪರಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದು, ಅಲ್ಲಿ ಹೋಗಿದ್ದ ಎಲ್ಲ ಸಿಬ್ಬಂದಿಗೆ ಅ’ಪಾ’ಯ’ದ ಭೀ’ತಿ ಕಾಡತೊಡಗಿತು.ಮಹಿಳಾ ಅಧಿಕಾರಿ ತಮ್ಮ ಹಿರಿಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ ಕೆಲ ಸಮಯದ ನಂತರ ಅಬಕಾರಿ ಡಿವೈಎಸ್ಪಿ ಆನಂದ್ ಹಾಗೂ ಇತರ ಅಧಿಕಾರಿಗಳು ಮತ್ತು ಹೆಚ್ಚಿನ ಸಿಬ್ಬಂಧಿ ಸ್ಥಳಕ್ಕೆ ಹೋದರು.
ಇದರಿಂದ ಅಬಕಾರಿ ಸಿಬ್ಬಂದಿಯ ಬಲ ಹೆಚ್ಚಾಗತೊಡಗಿದಂತೆ ಅಕ್ರಮ ಮಾರಾಟಗಾರರ ಎಗರಾಟ ಕ್ಷೀಣಿಸತೊಡಗಿತು. ಈ ಬಗ್ಗೆ ಇನ್ನೂ ದೂರು ದಾಖಲಾಗಿದ್ದು ಅವರ ಮೇಲೆ ಕಾನೂನು ಕ್ರಮ ನಿಶ್ಚಿತ. ಅಲ್ಲಿನ ಘಟನೆಯ ಬಗ್ಗೆ ಸ್ವಲ್ಪ ಮಾತ್ರ ವಿವರಣೆ ನೀಡುವ ಚಿಕ್ಕ ವಿಡಿಯೊ ಮೇಲಿದೆ ನೋಡಿ.
-Team Infotrend