ಮುರಳಿ ವಿಜಯ್ ಅವರ ಡಿನರ್ ಆಸೆಗೆ ಎಲಿಸ್ ಪೆರ್ರಿ ಕೊಟ್ಟ ಉತ್ತರವೇನು..?

ಭಾರತೀಯ ಕ್ರಿಕೆಟರ್ ಮುರುಳಿ ವಿಜಯ್ ಇತ್ತೀಚಿಗೆ ಆಸ್ಟ್ರೇಲಿಯನ್ ಮಹಿಳಾ ಕ್ರಿಕೆಟರ್ ಎಲಿಸ್ ಪೇರಿ ಮತ್ತು ಶಿಖರ್ ಧವನ್ ಜೊತೆ ಡಿನರ್ ಮಾಡುವ ಆಸೆ ವ್ಯಕ್ತಪಡಿಸಿದ್ದರು. ಶಿಖರ ಒಬ್ಬ ತುಂಬಾ ತಮಾಷೆಯ ವ್ಯಕ್ತಿ ಹಾಗೂ ಎಲಿಸಾ ತುಂಬಾ ಸುಂದರ ವ್ಯಕ್ತಿಮತ್ವ ಹೊಂದಿದ ಕ್ರಿಕೆಟರ್ ಎಂದು ಬಣ್ಣಿಸಿದ್ದರು. ಈಗ ಅವರ ಆಸೆಗೆ ಎಲಿಸಾ ತುಂಬಾ ತಮಾಷೆಯಾಗಿ ಉತ್ತರಿಸಿದ್ದಾರೆ. ಅವರ ಪ್ರಕಾರ ‘ ನನ್ನ ಆಸೆಯಂತೆ ಹೋಟೆಲ್ ಬಿಲ್ ಮಾತ್ರ ಮುರಳಿ ವಿಜಯ್ ಅವರಿಗೆ ಕೊಡಬೇಕಾಗುತ್ತದೆ, ಒಂದು ವೇಳೆ ಹೀಗೆ ಆದರೆ ನಾನು ಅವರಿಂದ ತುಂಬಾ ಪ್ರಭಾವಿತಳಾಗುತ್ತೇನೆ.

ಮಹಿಳಾ ಕ್ರಿಕೆಟ್ ನಲ್ಲಿ ಎಲಿಸಾ ಪೇರಿ ಉತ್ತಮ ಆಲ್ ರೌಂಡರ್ ಎನಿಸಿಕೊಂಡಿದ್ದಾರೆ. ICC T-20 ವರ್ಲ್ಡ್ ಕಪ್ ಸ್ಪರ್ಧೆಯಲ್ಲಿ ಕೊನೆಯದಾಗಿ ಕಾಣಿಸಿದ್ದರು. ನಂತರ ಲೀಗ್ ಸ್ಟೇಜ್ ನಲ್ಲಿಯೇ ಹೆಮ್ ಸ್ಟ್ರಿಂಗ್ ಕಾರಣ ಟೂರ್ನಮೆಂಟ್ ನಿಂದ ಹೊರಗೆ ಹೋಗಬೇಕಾಯಿತು. ಕೊನೆಗೆ ಭಾರತದ ಜೊತೆಗಿನ ಫೈನಲ್ ಪಂದ್ಯದಲ್ಲಿಯೂ ಆಡಲು ಸಾಧ್ಯವಾಗಲಿಲ್ಲ, ಭಾರತ ಮಾತ್ರ ಆ ಪಂದ್ಯ 85 ರನ್ ಗಳಿಂದ ಸೋತಿತು.