ಇದೇ ವೇಗದಲ್ಲಿ ಮುಂದುವರೆದರೆ ಗೌತಮ್ ಅದಾನಿ ಸಧ್ಯದಲ್ಲೇ ಅಂಬಾನಿಯವರನ್ನು ಹಿಂದಿಕ್ಕಲಿದ್ದಾರೆ!

ನಿಮಗೆಲ್ಲ ಗೊತ್ತಿರುವ ಹಾಗೆ ರಿಲಯನ್ಸ್ ಗ್ರೂಪ್ ಆಫ್ ಕಂಪನಿಸ್ ನ ಮಾಲೀಕ ಮುಖೇಶ್ ಅಂಬಾನಿಯವರು ದೇಶದ ಅಷ್ಟೇ ಅಲ್ಲ ಏಷ್ಯ ಖಂಡದ ಬಿಸಿನೆಸ್ ಮ್ಯಾನ್ ಗಳ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಇಷ್ಟು ದಿನ ಚೀನಾದ ಜೋಂಗ್ ಶಾನ್ ಶಾನ್ ಅವರು ಇದ್ದರು.

ಆದರೆ ಕಳೆದ ಜನೆವರಿಯಿಂದ ಇಲ್ಲಿಯವರೆಗೆ ಭಾರತದ ಇನ್ನೊಬ್ಬ ಬಿಸಿನೆಸ್ ಮ್ಯಾನ್ ಅದಾನಿ ಗ್ರೂಪ್ ನ ಮಾಲೀಕರಾದ ಗೌತಮ್ ಅದಾನಿಯವರ ಆಸ್ತಿಯಲ್ಲಿ ಬರೋಬ್ಬರಿ 32.7 ಮಿಲಿಯನ್ ಡಾಲರ್ ನಷ್ಟು ಏರಿಕೆಯಾಗಿದ್ದು, ಏಷ್ಯಾ ಹಾಗೂ ಭಾರತದ ಎರಡನೇ ಅತ್ಯಂತ ದೊಡ್ಡ ಶ್ರೀಮಂತರಾಗಿದ್ದಾರೆ.

ಸದ್ಯ ಬಿಸಿನೆಸ್ ವಲಯದಲ್ಲಿ ಎದ್ದಿರುವ ಪ್ರಶ್ನೆ ಎಂದರೆ, ಇದೆ ವೇಗದಲ್ಲಿ ಮುಂದುವರೆದರೆ ಗೌತಮ್ ಅದಾನಿ ದೇಶ ಹಾಗೂ ಏಷ್ಯ ಖಂಡದ ಅತ್ಯಂತ ಶ್ರೀಮಂತನಾಗುವದರಲ್ಲಿ ಸಂಶಯವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಏಕೆಂದರೆ ಅವರ ಆದಾಯ ಕೇವಲ ಬುಧವಾರ ಕಳೆದು ಗುರುವಾರವಾಗುವಷ್ಟರಲ್ಲಿಯೇ 1.11 ಮಿಲಿಯನ್ ಡಾಲರ್ ಹೆಚ್ಚಾಗಿದ್ದು ಮೇಲೆ ತಿಳಿಸಿದಂತೆ ಈ ನಾಲ್ಕುವರೇ ತಿಂಗಳಲ್ಲಿ ಬರೋಬ್ಬರಿ 32.7 ಮಿಲಿಯನ್ ಡಾಲರ್ ಅಂದರೆ 2.38 ಲಕ್ಷ ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ!

ಬ್ಲೂಮ್ ಬರ್ಗ್ ಬಿಲಿಯನೇರ್ ಇಂಡೆಕ್ಸ್ ನ ಪ್ರಕಾರ ಸದ್ಯ ಏಷ್ಯ ಖಂಡದಲ್ಲಿ ಎರಡನೇ ಸ್ಥಾನದಲ್ಲಿರುವ ಗೌತಮ್ ಅದಾನಿ ತಮ್ಮ ಕಂಪನಿಯ ಶೇರ್ ಗಳಲ್ಲಿ ಆಗುತ್ತಿರುವ ಲಾಭವೇ ಇದಕ್ಕೆ ಕಾರಣವಾಗಿದೆ ಇದೆ ಬಿಸಿನೆಸ್ ಇಂಡೆಕ್ಸ್ ನ ವರದಿ ಪ್ರಕಾರ ಈ ವರ್ಷ ಗಳಿಸಿದ ಒಟ್ಟು 32.7 ಮಿಲಿಯನ್ ಡಾಲರ್ ಆಸ್ತಿಯನ್ನು ಸೇರಿಸಿ ಅದಾನಿಯವರು ಒಟ್ಟು ಆಸ್ತಿ 67.6 ಮಿಲಿಯನ್ ಡಾಲರ್ ಎಂದರೆ ಬರೋಬ್ಬರಿ 4.93 ಲಕ್ಷ ಕೋಟಿ ರೂಪಾಯಿಗಳಾಗಿವೆ.

ಮುಖೇಶ್ ಅಂಬಾನಿಗಿಂತ ಕೇವಲ ಇಷ್ಟೇ ಅಂತರದಲ್ಲಿ ಹಿಂದಿದ್ದಾರೆ :
ರಿಲಯನ್ಸ್ ಗ್ರೂಪ್ ಆಫ್ ಕಂಪನಿಸ್ ನ ಮಾಲೀಕರಾದ ಮುಖೇಶ್ ಅಂಬಾನಿಯವರ ಒಟ್ಟು ಆಸ್ತಿ 76.3 ಮಿಲಿಯನ್ ಡಾಲರ್ ಆಗಿದ್ದು, ನಿನ್ನೆ ಒಂದೇ ದಿನಕ್ಕೆ ಅವರ ಒಟ್ಟು ಆಸ್ತಿಯಲ್ಲಿ 22 ಕೋಟಿ ರೂಪಾಯಿಗಳಷ್ಟು ಕಡಿಮೆಯಾಗಿರುವುದು ವಿಶೇಷ. ಆದರೆ ಅದಾನಿಯವರ ಆಸ್ತಿಯಲ್ಲಿ ಬರೋಬ್ಬರಿ 1.11 ಮಿಲಿಯನ್ ಡಾಲರ್ ಏರಿಕೆಯಾಗಿದೆ.

ಇನ್ನೂ ಕೆಲವೇ ದಿನಗಳಲ್ಲಿ ಅದಾನಿಯವರು ಏಷ್ಯ ಖಂಡದ ಅತ್ಯಂತ ದೊಡ್ಡ ಶ್ರೀಮಂತರಾಗುವುದು ನಿಸ್ಸಂದೇಹ ಎಂದೇನಿಸುತ್ತಿದೆ. ಏಕೆಂದರೆ ಅಂಬಾನಿಗಿಂತ ಕೇವಲ 8.7 ಮಿಲಿಯನ್ ಡಾಲರ್ ಅಂದರೆ 63,530 ಕೋಟಿ ರೂಪಾಯಿ ಮಾತ್ರ ಹಿಂದಿದ್ದಾರೆ ಅದಾನಿಯವರು. ಅದಷ್ಟೇ ಅಲ್ಲದೇ ಲಾಭದ ಪ್ರಮಾಣದಲ್ಲೂ ಭಾರಿ ಏರಿಕೆಯಾಗುತ್ತಿದೆ. ಇನ್ನು ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿಯವರು 13 ನೇ ಸ್ಥಾನದಲ್ಲಿದ್ದರೆ, ಅದಾನಿಯವರು 14 ನೇ ಸ್ಥಾನದಲ್ಲಿದ್ದಾರೆ.

ಷೇರುಗಳು ಮೌಲ್ಯ ಕೂಡ ಹೆಚ್ಚಾಗಿದೆ :
ಅದಾನಿ ಗ್ರೂಪ್ ನ ಷೇರುಗಳ ಮೌಲ್ಯ ಕೂಡ ಕಳೆದ ಕೆಲವು ದಿನಗಳಿಂದ ಏರುತ್ತಲೇ ಇದೆ. ಇದರ ಲಾಭ ನೇರವಾಗಿ ಗೌತಮ್ ಅದಾನಿಯವರಿಗೆ ಆಗುತ್ತಿದೆ. ಅವರ ಇನ್ನಿತರೇ ಕಂಪನಿಗಳಾದ ಅದಾನಿ ಗ್ರೀನ್, ಅದಾನಿ ಎಂಟರ್ಪ್ರೈಸಸ್, ಅದಾನಿ ಗ್ಯಾಸ್, ಅದಾನಿ ಟ್ರಾನ್ಸಮಿಷನ್ ಕಂಪನಿಗಳ ಷೇರು ಮೌಲ್ಯ ಕೂಡ ಹೆಚ್ಚುತ್ತಿರುವುದು ವಿಶೇಷ.

ಕಳೆದ ಒಂದು ವರ್ಷದಲ್ಲಿ ಇವುಗಳಲ್ಲಿ ಅದಾನಿ ಗ್ಯಾಸ್ ನ ಷೇರು ಮೌಲ್ಯ 1145 ಪ್ರತಿಶತದಷ್ಟು ಹೆಚ್ಚಾಗಿದೆ! ಇನ್ನೂ ಅದಾನಿ ಎಂಟರ್ಪ್ರೈಸಸ್ ನ ಷೇರು ಮೌಲ್ಯ 827 ಪ್ರತಿಶತ ಹಾಗೂ ಅದಾನಿ ಟ್ರಾನ್ಸಮಿಷನ್ ನ ಷೇರು ಮೌಲ್ಯ 617 ಪ್ರತಿಶತದಷ್ಟು ಹೆಚ್ಚಾಗಿದೆ. ಈ ಎಲ್ಲಾ ಕಂಪನಿಗಳ ಮಾಲೀಕರಾಗಿರುವ ಅದಾನಿಯವರ ಅಸ್ತಿಯಲ್ಲೂ ಕೂಡ ಏರಿಕೆ ಕಾಣುತ್ತಿದೆ.
-ಮಂಜುನಾಥ್