VIDEO : ಎರಡು ಹಾವುಗಳ ಮಧ್ಯೆ ಕಾಳಗ, ಅಲ್ಲಿಗೆ ಬಂದ ಯುವಕ ಏನ್ ಮಾಡಿದ ವಿಡಿಯೊ ನೋಡಿ
ಇದು ನಡೆದಿರುವುದು ಮೈಸೂರಿನ ವಾಗ್ದಾವಿ ಬಡಾವಣೆಯಲ್ಲಿ. ಅಲ್ಲಿನ ರವಿಂದ್ರ ಎಂಬುವವರ ಮನೆ ಆವರಣದಲ್ಲಿ ಎರಡು ಕೇರೆ ಹಾವುಗಳು ಜ’ಗಳವಾಡುತ್ತಿದ್ದವು. ಅವುಗಳ ಜ’ಗಳವೆಂದರೆ ಗೊತ್ತಲ್ಲ, ಒಂದಕ್ಕೊಂದು ಸುತ್ತಿಕೊಳ್ಳುವುದು. ಅವೇನು ಸಣ್ಣ ಹಾವಾಗಿರಲಿಲ್ಲ. ಒಂದು ಏಳು ಅಡಿ, ಇನ್ನೊಂದು ಒಂಬತ್ತು ಅಡಿ ಉದ್ದ ಇತ್ತು! ಎರಡೂ ಜ’ಗಳವಾಡುತ್ತಾ ಮನೆ ಮುಂದಿನ ಮೋರಿಯಲ್ಲಿದ್ದಾಗ ಅಲ್ಲಿಗೆ ಬಂದ ಯುವಕ ಅವುಗಳನ್ನು ಹಿಡಿದು ಮೇಲೆ ತಂದ.
ಅವರ ಹೆಸರು ಸೂರ್ಯ ಕೀರ್ತಿ ಅಂತ, ಹಾವು ಹಿಡಿಯುವುದರಲ್ಲಿ ಎಕ್ಸಫರ್ಟ್, ಎರಡೂ ಹಾವನ್ನು ನಿ’ರ್ಭಯವಾಗಿ ಹಿಡಿದು ಮೇಲೆ ತಂದರು. ನಂತರ ಬಕೇಟ್ ನೀರು ಪಡೆದು ಅವೆರಡನ್ನೂ ಅದರಲ್ಲಿ ಸ್ನಾನ ಮಾಡಿಸಿದರು. ನಂತರ ತಮ್ಮ ಜೊತೆ ತಂದಿದ್ದ ಬ್ಯಾಗ್ ನಲ್ಲಿ ಅವನ್ನು ಹಾಕಿಕೊಂಡು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದರು. ಜನವಸತಿಯಲ್ಲೇ ಇಷ್ಟು ಬೃಹತ್ ಗಾತ್ರದ ಹಾವುಗಳನ್ನು ನೋಡಿ ಕೆಲಕಾಲ ಅಲ್ಲಿ ಆತಂಕದ ವಾತಾವರಣ ಇತ್ತು.
ಸೂರ್ಯ ಕೀರ್ತಿ ಪ್ರಕಾರ ಹಾವುಗಳು ಜಗಳವಾಡಲು ಕಾರಣ, ತಮ್ಮ ಕ್ಷೇತ್ರ ಅಥವಾ ಏರಿಯಾಕ್ಕಾಗಿ, ಅದು ಬಿಟ್ಟರೆ ಹೆ’ಣ್ಣಿಗಾಗಿ ಕಾ’ದಾ’ಡು’ತ್ತವಂತೆ. ಇಲ್ಲಿ ಯಾವ ಕಾರಣಕ್ಕೇ ಫೈ’ಟ್ ಮಾಡುತ್ತಿದ್ದವೋ ಅವಕ್ಕೇ ಗೊತ್ತು! ಒಟ್ಟಾರೆ ಕೆಲಕಾಲ ಗದ್ದಲ ಎಬ್ಬಿಸಿದ್ದ ಹಾವುಗಳು ಸುರಕ್ಷಿತ ಜಾಗ ತಲುಪಿದವು.
ಇನ್ನು ಈ ಕೇರೆ ಹಾವುಗಳ ಅ’ಪಾ’ಯ’ಕಾ’ರಿ’ಯಾ ಎಂದು ನೋಡುವುದಾದರೆ…
ಕೇರೆ ಹಾವುಗಳು, ಹಾಲು ಹಾವುಗಳು, ಬಳ್ಳಿ ಹಾವುಗಳು ಮುಂತಾಗಿ ಕರೆಯಲಾಗುವ ಈ ಹಾವುಗಳು ಉತ್ತರ ಗೋಳಾರ್ಧದಲ್ಲಿ ಹೆಚ್ಚು ಕಂಡುಬರುತ್ತವೆ. ಇವುಗಳ ಮುಖ್ಯ ಆಹಾರ ಇಲಿ, ಹೆಗ್ಗಣ ಮತ್ತು ಪಕ್ಷಿಗಳು. ಇವು ಮನುಷ್ಯರಿಗೆ ಕಚ್ಚುವುದು ತೀರ ವಿರಳ. ಅಂದರೆ ಇವುಗಳು ಸಾಮಾನ್ಯವಾಗಿ ಮಾನವರಿಗೆ ಅ’ಪಾ’ಯ’ಕಾ’ರಿಯಲ್ಲ.
ಇತ್ತೀಚಿನ ಅಧ್ಯಯನಗಳು ಕೆಲವು ಹಳೆಯ ಕೇರೆ ಹಾವುಗಳ ಜಾತಿಗಳಲ್ಲಿ ಸಣ್ಣ ಪ್ರಮಾಣದ ವಿ’ಷ ಹೊಂದಿರುವುದಾಗಿ ಸಾಬೀತುಮಾಡಿವೆ. ಆದರೂ ಅವು ಮನುಷ್ಯರಿಗೆ ಕಂಟಕ ತದಿಟ್ಟ ಉದಾಹರಣೆ ಬಹಳ ಕಡಿಮೆ ಎನ್ನಬಹುದು. ವಿದೇಶಗಳಲ್ಲಿ ಕೆಲವರು ಕೇರೆ ಹಾವುಗಳನ್ನು ಸಾಕುಪ್ರಾಣಿಯಾಗಿ ಕೂಡ ಸಾಕುತ್ತಾರೆ!
ಇನ್ನು ಹಾವುಗಳ ಕುರಿತು ಮೂಢನಂಬಿಕೆಗಳ ಬಗ್ಗೆ ಮಾತನಾಡುವುದಾದರೆ…
ಹಾವುಗಳು ಜ’ಗಳವಾಡುವುದನ್ನು ನೋಡಿದರೆ ಅಕ್ಕ ಪಕ್ಕ ಜ’ಗಳಗಳಾಗುತ್ತವೆ, ಒಂದನ್ನೊಂದು ನುಂ’ಗತೊಡಗಿದ್ದರೆ ಆ ವರ್ಷದ ಬೆಳೆ ನಾ’ಶವಾಗುತ್ತದೆ ಇತ್ಯಾದಿ ಮೂಢನಂಬಿಕೆಗಳು ಹಾವಿನ ಕುರಿತಾಗಿ ಇವೆ. ಅಂತೆಯೇ ಮನೆಯೊಳಗೆ ಕೇರೆ ಹಾವು ಬಂದರೆ ಒಳ್ಳೆಯದು ಎಂದು ಕೂಡ ಹೇಳಲಾಗುತ್ತದೆ. ಆದರೆ ಅದು ಈಗಿನ ಕಾಲಕ್ಕೆ ತಕ್ಕ ಹೇಳಿಕೆ ಅಲ್ಲ. ಹಿರಿಯರು ಹೀಗೆ ಹೇಳಲು ಕಾರಣವೇ ಬೇರೆ ಇದೆ.
ಸಾಮಾನ್ಯವಾಗಿ ಮೊದಲೆಲ್ಲಾ ಗುಡಿಸಲು ಮನೆ, ಸೋಗೆ ಮನೆ ಅಥವಾ ಹಳೆಯ ಮನೆಗಳಾದ್ದರಿಂದ ಇಲಿ, ಹೆಗ್ಗಣಗಳು ಮನೆಯಲ್ಲಿ ಸೇರಿಕೊಂಡಿರುತ್ತಿದ್ದವು. ಅವು ಮನೆಯಲ್ಲಿ ಸಂಗ್ರಹಿಸಿ ಇಟ್ಟ ದವಸ ಧಾನ್ಯಗಳನ್ನು ತಿಂದು ಹಾಕುತ್ತಿದ್ದವು. ಹೀಗೆ ಮನೆ ಸೇರಿಕೊಂಡ ಇಲಿಗಳನ್ನು ಹುಡುಕಿಕೊಂಡು ಕೇರೆ ಹಾವು ಮನೆಯೊಳಗೆ ಬರುತ್ತಿದ್ದವು. ಅವುಗಳನ್ನು ಹುಡುಕಿ ಹಿಡಿದು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು.
ಹೀಗಾದಾಗ ಇಲಿಗಳ ಸಂಖ್ಯೆ ಕಡಿಮೆಯಾಗಿ ಕೂಡಿಟ್ಟ ಆಹಾರ ಧಾನ್ಯಗಳು ಉಳಿಯುತ್ತಿದ್ದವು. ಜೊತೆಗೆ ಕೇರೆ ಹಾವು ಮನುಷ್ಯರಿಗೆ ಅಪಾಯ ಮಾಡವ ಹಾವುಗಳಲ್ಲ. ಹೀಗಾಗೇ ಕೇರೆ ಹಾವು ಮನೆಗೆ ಬಂದರೆ ಒಳ್ಳೆಯದು ಎಂದು ಹಿರಿಯರು ಹೇಳುತ್ತಿದ್ದುದು ಸರಿಯಾಗೇ ಇದೆ. ಈಗ ವಿಡಿಯೊ ಮೇಳಿದೆ ನೋಡಿ…
-Team Infotrend