ಶಾರುಖ್ ಖಾನ್ ಮಗಳೊಂದಿಗೆ ಡೇಟಿಂಗ್ ಹೋಗುವವರಿಗೆ ಶಾರುಖ್ ರವರ 7 ಕಂಡಿಶನ್!
ಬಾಲಿವುಡ್ ಬಾದಶಾ ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಅವರು ಇಂದು ತಮ್ಮ 21 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇವರು ಒಂದಿಲ್ಲೊಂದು ವಿಷಯದಿಂದ ಯಾವಾಗಲೂ ಪ್ರಚಾರದಲ್ಲಿಯೇ ಇರುತ್ತಾರೆ. ಕೆಲವು ಬಾರಿ ತಮ್ಮ ಕುಟುಂಬದ ಹಿನ್ನೆಲೆಯಿಂದ ಇನ್ನೂ ಕೆಲವು ಬಾರಿ ತಮ್ಮ ಗ್ಲಾಮರ್ ಕಾರಣದಿಂದಾಗಿ ಹೀಗೆ ಹಲವು ಕಾರಣಗಳಿಂದ ಸುದ್ದಿಯಲ್ಲಿರುವ ಸುಹಾನ ಅವರ ಜನ್ಮದಿನದಂದು ಅವರ ಬಗ್ಗೆ ಕೆಲವು ವಿಶೇಷ ವಿಷಯಗಳ ಬಗ್ಗೆ ನೋಡೋಣ ಬನ್ನಿ…
ತಮ್ಮ ತಂದೆ ಸೆಲೆಬ್ರಿಟಿ ಎನ್ನುವ ಕಾರಣದಿಂದ ಸುಹಾನಾ ಖಾನ್ ಅವರು ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ, ಕೆಲವೊಮ್ಮೆ ತಂದೆ ಮಗಳು ಒಂದೇ ಫೋಟೋದಲ್ಲಿಯೂ ಸೆರೆ ಸಿಕ್ಕ ಉದಾಹರಣೆಗಳಿವೆ, ಹಾಗೂ ಅವರ ಕರಿಯರ್ ಬಗ್ಗೆ ಈಗಾಗಲೇ ಶಾರುಖ್ ಖಾನ್ ಮಾತನಾಡಿಯು ಆಗಿದೆ.

ಅದೇನೆಂದರೆ ಒಂದು ಇಂಟರ್ವ್ಯೂ ನಲ್ಲಿ ಶಾರುಖ್ ಖಾನ್ ಅವರು ಮಗಳ ಬಾಲಿವುಡ್ ಎಂಟ್ರಿಯ ಬಗ್ಗೆ ಮಾತನಾಡುತ್ತಾ ಸುಹಾನಾ ಅವರಿಗೂ ಕೂಡ ಬಾಲಿವುಡ್ ಚಿತ್ರಗಳಲ್ಲಿ ನಟಿಸುವ ಆಸಕ್ತಿ ಇದ್ದು ಅವರು ಚಿತ್ರರಂಗಕ್ಕೆ ಬರಬೇಕಾದರೆ ಇನ್ನೂ ನಾಲ್ಕೈದು ವರ್ಷ ನಟನೆಯನ್ನು ಕಲಿಯಬೇಕು ಹಾಗೆ ಅವರ ಶಿಕ್ಷಣ ಕೂಡ ಪೂರ್ಣಗೊಳ್ಳಬೇಕು ಎಂದು ಹೇಳಿದ್ದಾರೆ.
ಇದಷ್ಟೇ ಅಲ್ಲದೇ ಸುಹಾನಾ ಅವರ ಡೇಟಿಂಗ್ ವಿಚಾರದ ಬಗ್ಗೆಯೂ ಫೆಮಿನಾ ಮ್ಯಾಗಜಿನ್ ಗೆ ನೀಡಿದ ಇಂಟರ್ವ್ಯೂ ನಲ್ಲಿ ಮಾತನಾಡಿದ ಶಾರುಖ್ ಖಾನ್ ಅವರು, ತಮ್ಮ ಮಗಳೊಂದಿಗೆ ಡೇಟಿಂಗ್ ಮಾಡಲು ಬಯಸುವ ಹುಡುಗನಿಗೆ 7 ರೂಲ್ಸ್ ಮಾಡಿದ್ದಾರೆ ಅವುಗಳೆಂದರೆ…

*ಆ ಹುಡುಗನಿಗೆ ನೌಕರಿ ಇರಲೇಬೇಕು
*ನಾನು ಆ ಹುಡುಗನನ್ನು ಯಾವತ್ತೂ ಇಷ್ಟಪಡುವುದಿಲ್ಲ
*ನಾನು ಎಲ್ಲಾ ಕಡೆ ಇರುತ್ತೇನೆ
*ಒಬ್ಬ ವಕೀಲನನ್ನು ಇಟ್ಟುಕೊಳ್ಳಬೇಕು
*ಅವಳು ನನ್ನ ರಾಜಕುಮಾರಿ, ಆದರೆ ಅವಳು ನನ್ನ ಅಧಿನದಲ್ಲಿಲ್ಲ.
*ಶಾರುಖ್ ಅವರಿಗೆ ಜೈಲಿಗೆ ಹೋಗಲು ಕೂಡ ಯಾವುದೇ ಆಕ್ಷೇಪಣೆ ಇಲ್ಲವಂತೆ
*ಅಕಸ್ಮಾತ್ ಮಗಳೊಂದಿಗೆ ಆ ಹುಡುಗ ಏನಾದ್ರೂ ಕೆಟ್ಟದಾಗಿ ನಡೆದುಕೊಂಡರೆ ಆ ಹುಡುಗನ ಜೊತೆಗೆ ಅದೇ ರೀತಿ ತಾವು ನಡೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಮತ್ತೊಂದು ಇಂಟರ್ವ್ಯೂ ನಲ್ಲಿ ಇದೆ ಶಾರುಖ್ ಅವರು ಆ ಎಲ್ಲಾ ಏಳು ಕಂಡಿಶನ್ ಸುಳ್ಳಾಗಿವೆ ಹಾಗೂ ಅಕಸ್ಮಾತ್ ಇಂತಹ ಪರಿಸ್ಥಿತಿ ಸುಹಾನಾಳ ಬದುಕಿನಲ್ಲಿ ಬಂದರೆ ನಾನು ಏನೂ ಹೇಳಲು ಆಗುವುದಿಲ್ಲ. ಬದಲಾಗಿ ಎಲ್ಲವನ್ನೂ ಸ್ವೀಕಾರ ಮಾಡಬೇಕಾಗುತ್ತದೆ ಎಂದೂ ಕೂಡ ಹೇಳಿದ್ದಾರೆ. ಇವುಗಳನ್ನು ಓದಿದವರೆಲ್ಲರೂ ಸೀರಿಯಸ್ ಎಂದು ತಿಳಿದುಕೊಳ್ಳುತ್ತಾರೆ ಆದರೆ ಅವು ಸೀರಿಯಸ್ ಅಲ್ಲ ಎಂದೂ ಹೇಳಿದ್ದಾರೆ.

ಸ್ವತಃ ಸುಹಾನಾ ಅವರೇ ಹೇಳುವಂತೆ ಶಾರುಖ್ ಅವರು ಪತ್ನಿ ಗೌರಿ, ಮಗಳು ಸುಹಾನಾ ಹಾಗೂ ಇಬ್ಬರು ಗಂಡು ಮಕ್ಕಳು ಅಬ್ರಾಮ್, ಆರ್ಯನ್ ಎಲ್ಲರೊಂದಿಗೂ ಬಹಳ ಕ್ಲೋಸ್ ಆಗೇ ಇರುತ್ತಾರಂತೆ. ಬಾಲಿವುಡ್ ಹಿನ್ನೆಲೆಯ ಕುಟುಂಬದ ಹುಡಿಯಾಗಿರುವ ಸುಹಾನಾ ಅವರಿಗೆ ಅದರದ್ದೇ ಹಿನ್ನೆಲೆ ಇರುವ ಅನನ್ಯ ಪಾಂಡೆ, ನವ್ಯ ನವೇಲಿ ನಂದಾ ಮತ್ತು ಶನಾಯಾ ಕಪೂರ್ ಅವರು ಇವರ ಗೆಳತಿಯಾರಾಗಿದ್ದಾರೆ.
ನವ್ಯ ನವೇಲಿಯವರೊಂದಿಗಿನ ಸುಹಾನಾ ಖಾನ್ ಅವರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಾಲಿವುಡ್ ಅಲ್ಲದೇ ಹೊರಗಿನ ಸ್ನೇಹಿತೆಯರದು ದೊಡ್ಡದೊಂದು ಲಿಸ್ಟ್ ಇದೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಗೆಳತಿಯರೊಂದಿಗೆ ಕಳೆದ ಸುಂದರ ಕ್ಷಣಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ವರ್ಣಬೇಧ ಮಾಡುವವರನ್ನು ವಿರೋಧಿಸುವ ಸುಹಾನಾ ಅವರು ಈ ವಿಷಯ ಇಟ್ಟುಕೊಂಡು ಟ್ರೋಲ್ ಮಾಡುವವರನ್ನು ತರಾಟೆಗೆ ತೆಗೆದುಕೊಂಡು ಬಾಯಿ ಮುಚ್ಚಿಸುತ್ತಾರೆ. ಅಷ್ಟೇ ಅಲ್ಲದೇ ಅವರು ಹೇಳುತ್ತಾರೆ ನಾವು ಚರ್ಮಕ್ಕೆ ಬಣ್ಣ ಕೊಡುವ ವಸ್ತುವಾದ ಮೇಲಾನಿನ್ ನಿಂದ ಎಷ್ಟೇ ದೂರ ಹೋಗಲು ಪ್ರಯತ್ನಿಸಿದರು ಅದು ನಮ್ಮನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ನಮ್ಮವರನ್ನೇ ದ್ವೇಷಿಸುವ ಗುಣ ಹೊಂದಿರುವವರು ತಮ್ಮ ನೋವನ್ನು ತಾವೇ ಅನುಭವಿಸುತ್ತಾರೆ ಎಂದು ಹೇಳಿದ್ದಾರೆ.
-Team Infotrend