ಕರೋನಾ ಸ್ವಯಂ ನಾಶವಾಗುವುದೇ? ವೈರಸ್ನಲ್ಲಿ ವಿಶೇಷ ಬದಲಾವಣೆಯನ್ನು ಗಮನಿಸಿದ ವಿಜ್ಞಾನಿಗಳು!

ವಾಷಿಂಗ್ಟನ್:- ಸಂಪೂರ್ಣ ಜಗತ್ತಿಗೆ ನಾಶದ ಹಾದಿಯಲ್ಲಿ ಕರೆದೊಯ್ಯುತ್ತಿರುವ ಕೋರೊನಾ ವೈರಸ್ ಯಾವಾಗ ನಾಶ ವಾಗುವದು ಎಂದು ಇಡೀ ಜಗತ್ತಿನ ಜನರು ಆತುರತೆಯಿಂದ ಕಾಯುತ್ತಿದ್ದಾರೆ. ಕೆಲವು ದಿವಸಗಳ ನಂತರ ಕರೋನಾ ನಾಶವಾಗುವಲ್ಲಿ ಯಾವುದೇ ಸಂದೇಹವೇ ಇಲ್ಲ. ಏಕೆಂದರೆ ಕೋರೊನಾ ವೈರಸ್ ನಲ್ಲಿಯ ಒಂದು ದುರ್ಬಲತೆಯು ಶಾಸ್ತ್ರಜ್ಞರಿಗೆ ಕಂಡು ಬಂದಿದೆ.

ಡೇಲಿ ಮೇಲ್ ದ ರಿಪೋರ್ಟ್ ಅನುಸಾರ, ಕರೋನಾ ವೈರಸ ನಲ್ಲಿ ಬದಲಾವಣೆ ಯಾಗುವುದನ್ನು ಅಮೇರಿಕಾದ ಶಾಸ್ತ್ರಜ್ಞರ ಗಮನಕ್ಕೆ ಬಂದಿದೆ, ಅದರಿಂದ ಜನರಲ್ಲಿ ವೈರಸ ಸಂಕ್ರಮಣ ದುರ್ಬಲ ವಾಗುವದರ ಸಂಕೇತ ಸಿಗುತ್ತಲಿದೆ.

ಯು ಎಸ್ ನಲ್ಲಿಯ ಏರಿಜೆನಾ ಸ್ಟೇಟ್ ಯುನಿವರ್ಸಿಟಿ( Arizona State University) ಶಾಸ್ತ್ರಜ್ಞರು ಕೆಲವು ಕೋರೊನಾ ರೋಗಿಗಳ ಶರೀರದಲ್ಲಿಯ ವೈರಸ್ ಮಾದರಿ ತಗೆದುಕೊಂಡು ಪರೀಕ್ಷಣೆ ಮಾಡಿದರು, ಆಗ ಅವರಿಗೆ ತಿಳಿದು ಬಂದದ್ದೇನೆಂದರೆ ಏರಿಜೋನ್ ನಲ್ಲಿಯ ಒಬ್ಬ ಕೋರೊನಾ ರೋಗಿಯ ಶರೀರದಲ್ಲಿಯ ವೈರಸ್ ನಲ್ಲಿ ಬದಲಾವಣೆ ಆಗಿದೆ ಅಂತೆ. ಈ ವೈರಸ್ ದ ಜೇನೇಟಿಕ್ ಮಟೇರಿಯಲ್ ದ ಒಂದು ಭಾಗ ಕಾಣೆಯಾಗಿದ್ದು ಕಂಡು ಬಂದಿದೆ.

Coronavirus| ಕರೋನಾ ಲಸಿಕೆ ಸಿದ್ಧವಾಗಿದೆ, ಶೀಘ್ರದಲ್ಲೇ ಪೇಟೆಂಟ್ ಪಡೆಯಲಿದೆ; ಇಸ್ರೇಲ್ ರಕ್ಷಣಾ ಸಚಿವರ ಹೇಳಿಕೆ…..!

2003 ನೆ ವರ್ಷದಲ್ಲಿ ಸಹ ಸಾರ್ಸ್ ಉದ್ರೇಕವಾಗಿತ್ತು ಆ ವೈರಸ್ ನಲ್ಲಿಯೂ ಸಹ ಇದೆ ಪ್ರಕಾರದ ಬದಲಾವಣೆ ಕಂಡು ಬಂದಿತ್ತು, ಅದರಲ್ಲಿಯೂ ಸಹ ಜೇನೇಟಿಕ್ ಮಟೇರಿಯಲ್ ದ ಒಂದು ಭಾಗ ಕಾಣೆಯಾಗಿತ್ತು ಆಗ ಸಾರ್ಸ್ ದ ಪ್ರಕರಣ ಕಡಿಮೆಯಾಗುತ್ತ ಮುಂದೆ ಇಲ್ಲದಂತಾಯಿತು. ಹಾಗೆ ಕೋರೊನಾ ವೈರಸ್ ಸಹ ಮುಂದೆ ಕಡಿಮೆ ಕಡಿಮೆ ಯಾಗುತ್ತ ಮುಂದೆ ಯಾವುದೇ ಪ್ರಕರಣ ಇಲ್ಲದಂತಾಗುವದು ಎಂಬುದು ಅಲ್ಲಿಯ ಶಾಸ್ತ್ರಜ್ಞರ ಅಭಿಪ್ರಾಯ ವಾಗಿದೆ.