VIDEO : ಔಷಧಿ ತರಲು ಹೊರಟ ಹುಡುಗನ ಮೇಲೆ ಡಿ.ಸಿ ದಾದಾಗಿರಿ! ವಿಡಿಯೋ ವೈರಲ್ ಆದ ನಂತರ ಕ್ಷಮೆಯಾಚನೆ

ಛತ್ತೀಸ್‌ ಗಡದ ಸುರ್ಗುಜಾ ವಿಭಾಗದ ಸೂರಜ್‌ಪುರ ಜಿಲ್ಲೆಯ ಕಲೆಕ್ಟರ್ ರಣವೀರ್ ಶರ್ಮಾ ಅವರ ಅ’ಮಾ’ನ’ವೀಯ ಮುಖವನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ. ಲಾಕ್‌ಡೌನ್ ಮಧ್ಯೆ, ನಿನ್ನೆ ಶನಿವಾರ ಮಧ್ಯಾಹ್ನ ಯುವಕನೊಬ್ಬ ಔಷಧಿ ತೆಗೆದುಕೊಳ್ಳಲು ಮೆಡಿಕಲ್ ಶಾಪ್ ಗೆ ಹೋಗಲು ಬಂದ. ಏತನ್ಮಧ್ಯೆ ಜಿಲ್ಲಾಧಿಕಾರಿ ಸ್ವತಃ ಲಾಕ್ ಡೌನ್ ಪರಿಶೀಲಿಸತೊಡಗಿದ್ದರು. ಈ ಸಮಯದಲ್ಲಿ ಬೀದಿಗಳಲ್ಲಿ ಜನರ ಚಲನವಲನ ನೋಡಿ ಅವರ ಪಿತ್ತ ನೆತ್ತಿಗೇರಿತು.

ಆಗ ಅವರ ಕಣ್ಣುಗಳು ಆ ಯುವಕನ ಮೇಲೆ ಬಿದ್ದವು. ತನ್ನ ಜೊತೆಯಲ್ಲಿರುವ ಭ’ದ್ರತಾ ಸಿಬ್ಬಂದಿಗೆ ತಿಳಿಸಿದ ನಂತರ, ಅವರು ಯುವಕನನ್ನು ನಿಲ್ಲಿಸಿದರು, ಆಗ ಯುವಕ ಔಷಧಿ ಸ್ಲಿಪ್ ಅನ್ನು ತೋರಿಸಿದನು, ಆದರೆ ಕಲೆಕ್ಟರ್ ಅವನ ಮಾತನ್ನು ಕೇಳದೇ ಗಾಡಿ ಸೀಜ್ ಮಾಡಲು ಹೇಳಿದರು.

ನಂತರ ಕಲೆಕ್ಟರ್ ಅಲ್ಲಿಂದ ಹೊರಟಾಗ ಅವರಿಗೆ ಇನ್ನೊಮ್ಮೆ ವಿನಂತಿಸಲು ಯುವಕ ಅವರ ಬಳಿ ಹೋದ. ಆಗ ಡಿ.ಸಿ ಸಾಹೇಬರು ಯುವಕನ ಮೊಬೈಲ್ ಕಿತ್ತುಕೊಂಡು ರಸ್ತೆಯ ಮೇಲೆ ಹೊ’ಡೆದರು! ನಂತರ ಅವನ ಕ’ಪಾ’ಳಕ್ಕೆ ಭಾರಿಸಿದರು. ನಂತರ ಭ’ದ್ರತಾ ಸಿಬ್ಬಂದಿಗೆ ಅವನನ್ನು ಲಾ’ಠಿಯಿಂದ ಹೊ’ಡೆ’ಯಲು ಆದೇಶಿಸಿದರು.

ಭದ್ರ’ತಾ ಸಿಬ್ಬಂದಿ ಅವರ ಅಧಿಕಾರಿಯ ಆದೇಶವನ್ನು ಅನುಸರಿಸಿ, ಯುವಕನ ಮೇಲೆ ಹ'”ಲ್ಲೆ ನಡೆಸಿದರು. ಈ ಸಮಯದಲ್ಲಿ ಯುವಕನ ಕಾಲಿಗೆ ಗಂಭೀರ ಗಾಯವಾಗಿದೆ. ಹಳೆ ಬಜಾರ್ ಪಾರ ನಿವಾಸಿಯಾದ ಸಾಹಿಲ್ ಗುಪ್ತಾ ಎಂಬ ಈ ಹುಡುಗ ತಮ್ಮ ತಂದೆ ಮತ್ತು ತಾಯಿಗೆ ಔಷಧಿಗಳನ್ನು ತರಲು ಔಷಧಿ ಅಂಗಡಿಗೆ ಹೋರಟಿದ್ದ.

ಈ ಘಟನೆಯ ನಂತರ ಯುವಕನ ತಂದೆಯ ಅಸಹಾಯಕತೆ ಬೆಳಕಿಗೆ ಬಂದಿತು. ಅವರು ಮತ್ತು ಅವರ ಪತ್ನಿ ಕರೋನಾ ಲಸಿಕೆ ಲಸಿಕೆ ಪಡೆದಿದ್ದಾರೆ, ಇದರಿಂದಾಗಿ ಅವರು ಸ್ವತಃ ಹೊರಗೆ ಹೋಗಲಾಗದೇ ಔಷಧಿ ತರಲು ತಮ್ಮ ಮಗನನ್ನು ಕಳುಹಿಸಿದ್ದರು. ಈ ಘಟನೆಯ ನಂತರ ಕಲೆಕ್ಟರ್ ರಣವೀರ್ ಶರ್ಮಾ ವಿರುದ್ಧ ಅ’ಸ’ಮಾ’ಧಾನದ ಬುಗಿಲೆದ್ದಿತು.

ಅಲ್ಲಿ ಮೇ 31 ರವರೆಗೆ ಲಾಕ್‌ ಡೌನ್ ಘೋಷಿಸಲಾಗಿದೆ, ಈ ಲಾಕ್‌ ಡೌನ್ ಹೊರತಾಗಿಯೂ, ಔಷಧಿ ಅಂಗಡಿಗಳು ಸೇರಿದಂತೆ ಇತರ ಅಗತ್ಯ ಸೇವೆಗೆ ಸಂಬಂಧಿಸಿದ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಹಿಂದೆ ಮುಂದೆ ಯೋಚಿಸದೇ ಹೀಗೆ ಮಾಡಿದ್ದು ಕೆಂ’ಗಣ್ಣಿಗೆ ಗುರಿಯಾಗಿದೆ.

ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಈ ಘಟನೆಗೆ ಕಲೆಕ್ಟರ್ ರಣವೀರ್ ಶರ್ಮಾ ಕ್ಷ’ಮೆಯಾಚಿಸಿದ್ದಾರೆ. “ನನ್ನ ನಡವಳಿಕೆಯ ಬಗ್ಗೆ ನಾಚಿಕೆಯಾಗುತ್ತಿದೆ, ನಿಮ್ಮೆಲ್ಲರಿಗೂ ಕ್ಷ’ಮೆಯಾಚಿಸುತ್ತೇನೆ” ಎಂದು ಅವರು ಹೇಳಿದ್ದಾರೆ. ನಾನು ಯಾರಿಗೂ ಕೆ’ಟ್ಟದ್ದು ಮಾಡುವ ಉದ್ದೇಶ ಹೊಂದಿರಲಿಲ್ಲ. ಇಂದು ಸೂರಜ್‌ಪುರ ಜಿಲ್ಲೆ ಸೇರಿದಂತೆ ಇಡೀ ಛತ್ತೀಸ್‌ ಗಡ ಕೋವಿಡ್ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದೆ.

ಈ ಸಾಂಕ್ರಾಮಿಕ ರೋಗದಿಂದ ಎಲ್ಲರನ್ನು ರ’ಕ್ಷಿಸಲು ಸರ್ಕಾರಿ ನೌಕರರೆಲ್ಲರೂ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ನನ್ನ ಪೋಷಕರು ಮತ್ತು ನಾನು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದೆವು. ನಮ್ಮ ತಾಯಿ ಇನ್ನೂ ಹುಷಾರಾಗಿಲ್ಲ. ಹೀಗಿರುವಾಗ ಕಾಯಿಲೆಯ ಗಂ’ಭೀ’ರತೆಯನ್ನು ಎಲ್ಲರೂ ಅರ್ಥ ಮಾಡಿಕೊಂಡು ನಿಯಮ ಪಾಲಿಸಬೇಕು. ನಾನು ನಿಮ್ಮೆಲ್ಲರಿಗೂ ಮತ್ತೊಮ್ಮೆ ಕ್ಷ’ಮೆಯಾಚಿಸುತ್ತೇನೆ ಎಂದು ಅವರು ಹೇಳಿದ್ದಾರೆ.
-Team Infotrend