Articles

VIDEO : ಈ ಕೊರೋನ ಕಾಯಿಲೆ ಕೇವಲ ಜೀವಗಳನ್ನಲ್ಲ ಸಂಬಂಧಗಳನ್ನು ಕೂಡ ಬ’ಲಿ ಪಡೆಯುತ್ತಿದೆ! ಮನಕಲಕುವ ವಿಡಿಯೊ ನೋಡಿ

ಭಾರತದಲ್ಲಿ ಕೋವಿಡ್-19 ಅಲೆ ಜೋರಾಗಿಯೇ ಬೀಸಿರುವ ವಿಚಾರ ನಿಮಗೆಲ್ಲ ಗೊತ್ತೇ ಇದೆ, ಇದರಿಂದಾಗುತ್ತಿರುವ ಸಾ’ವುಗಳ ಸಂಖ್ಯೆ ಏನೂ ಕಡಿಮೆ ಇಲ್ಲ. ಆದರೆ ಆ ಸಾ’ವುಗಳಿಗಿಂತಲೂ ಹಾಗೂ ಈ ಮ’ಹಾಮಾ’ರಿಗಿಂತಲೂ ಈ ಕ್ರೂರಿ ಮನುಷ್ಯನ ವಿ’ಕೃತ ಮುಖವಾಡ ಕೂಡ ಅನಾವರಣಗೊಳ್ಳುತ್ತಿದೆ. ಇಂತವುಗಳಿಗೆ ಪುಷ್ಠಿ ಕೊಡುವಂತಹ ಹೃ’ದ’ಯವಿ’ದ್ರಾ’ವಕ ಘಟನೆಗಳನ್ನು ವಿವರಿಸುತ್ತೇವೆ ನೋಡಿ…

ಈ ಕರೋನ ಎಂಬ ಹೆಮ್ಮಾರಿ ಬಂದು ಈ ಜಗತ್ತಿನಲ್ಲಿ ಏನೂ ಇಲ್ಲ, ನಾನು ನನ್ನದು ಎಂಬುದು ಇಲ್ಲ, ನನ್ನವರು ತನ್ನವರು ಎಂಬುವರು ಇಲ್ಲ, ಇಲ್ಲಿ ಕೇವಲ ದುಡ್ಡು ಆಸ್ತಿ ಪಾಸ್ತಿ ಇರುವವರೆಗೂ ಮಾತ್ರ ಬೆಲೆ, ಜೀ’ವ ಇರುವವರೆಗೂ – ಅದರಲ್ಲೂ ಹಣ ಆಸ್ತಿ ನಿಮ್ಮ ಬಳಿ ಇರುವವರೆಗೂ ಮಾತ್ರ ಅದಕ್ಕೆ ಬೆಲೆ ಎಂಬುದು ಸತ್ಯ ಎಂಬುದು ಸಾಬೀತಾಗುತ್ತಿದೆ.

ಇಲ್ಲೊಂದು ಘಟನೆಯಲ್ಲಿ ಮೈಸೂರಿನಲ್ಲಿ ಆದರ್ಶ್ ಎಂಬ ಒಬ್ಬ ತೀರಿಕೊಂಡಿದ್ದರು. ಇವರ ಅಂ’ತ್ಯಕ್ರಿಯೆಯ ಜವಾಬ್ದಾರಿ ಹೊತ್ತಿದ್ದ ಅಲ್ಲಿನ ಲೋಕಲ್ ಕಾರ್ಪೊರೇಟರ್ ಶ್ರೀಧರ್ ಎಂಬುವರು ಮಾನವೀಯತೆಯ ದೃಷ್ಟಿಯಿಂದ ಕೊನೆಯ ಬಾರಿ ತಂದೆಯ ಮುಖ ನೋಡಲಿ ಎಂದು ಆ ವ್ಯಕ್ತಿಯ ಪುತ್ರನಿಗೆ ಕರೆ ಮಾಡಿದರು.

ನಿಮ್ಮ ತಂದೆಯ ಅಂ’ತ್ಯ ಸಂಸ್ಕಾರ ಮಾಡಲು ಹೊರಟಿದ್ದೇವೆ ಬಂದು ನಿಮ್ಮ ತಂದೆಯ ಮುಖ ನೋಡಿ ಹೋಗಪ್ಪ ಎಂದು ಕರೆದರೆ ಅನಾಥ ಶವ ಎಂದು ನೀವೇ ಅಂತ್ಯಸಂಸ್ಕಾರ ಮಾಡಿಬಿಡಿ ಎಂದು ಹೇಳಿ ಕರೆ ಕಟ್ ಮಾಡಿದನು!

ನಂತರ ಮತ್ತೊಮ್ಮೆ ಕರೆ ಮಾಡಿ ನಿಮ್ಮ ತಂದೆಯ ಬಳಿ ದುಡ್ಡು, ಎಟಿಎಂ ಹಾಗೂ ಮತ್ತೆ ಕೆಲವು ದಾಖಲೆಗಳಿವೆ ಅವುಗಳನ್ನ ಏನು ಮಾಡಬೇಕು ಎಂದು ಕಾರ್ಪೊರೇಟರ್ ಕೇಳಿದ ಪ್ರಶ್ನೆಗೆ ಐದು ನಿಮಿಷ ಬಿಟ್ಟು ಕರೆ ಮಾಡುತ್ತೇನೆ ಎಂದು ಹೇಳಿ ಮತ್ತೆ ಕರೆ ಮಾಡಿದಾಗ ಅವರ ಬಳಿ ಇರುವ ದುಡ್ಡು ಎಟಿಎಂ ಹಾಗೂ ದಾಖಲೆಗಳನ್ನು ನನಗೆ ಕುವೆಂಪು ನಗರಕ್ಕೆ ತಂದು ತಲುಪಿಸಿ ಅನ್ನುತ್ತಾನೆ.

ಆದರೆ ಶ’ವವನ್ನು ಮಾತ್ರ ನೀವೇ ಅಂ’ತ್ಯಸಂಸ್ಕಾರ ಮಾಡಿ ಬಿಡಿ ಎಂದು ಹೇಳುತ್ತಾನೆಂದರೆ ಎಷ್ಟರ ಮಟ್ಟಿಗೆ ಈ ಮಾನವ ಸ್ವಾರ್ಥಿ ಎಂದು ಇದರಲ್ಲೇ ಗೊತ್ತಾಗುತ್ತದೆ. ತಂದೆಯ ಹಣ ಆಸ್ತಿ ಬೇಕು ಆದರೆ ತಂದೆಯ ಮುಖ ನೋಡಲು ಈ ಮನುಷ್ಯ ಬರಲಿಲ್ಲ ಎಂದರೆ ಈ ಮಾನವನ ಮನಸ್ಥಿತಿ ಎಷ್ಟೊಂದು ಕೊಳಕಾಗಿದೆ ಅಲ್ವಾ?

ಆ ಮೃ’ತ ವ್ಯಕ್ತಿಗೆ ಕೇವಲ ಮಗನಷ್ಟೇ ಅಲ್ಲ ಆತನಿಗೆ ಹೆಂಡತಿ, ಅಕ್ಕ ಹಾಗೂ ಅಕ್ಕನ ಮಕ್ಕಳೂ ಕೂಡ ಇದ್ದು ಅನಾಥ ಶವದಂತೆ ಮಣ್ಣಾಗಬೇಕಾದ ಪರಿಸ್ಥಿತಿ ಬಂದಿದೆ. ಇನ್ನು ಇನ್ನೊಂದು ಘಟನೆಯಲ್ಲಿ ಅದೇ ಶ್ರೀಧರ್ ಅವರು ವಿವರಿಸುತ್ತಾರೆ, ಒಬ್ಬ ಅಜ್ಜಿ ತೀರಿ ಹೋದಾಗ ಅವಳಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು ಕೂಡ ಅವರು ಮೊದಲು ಅಂ’ತ್ಯ ಸಂಸ್ಕಾರಕ್ಕೆ ಬರುತ್ತೇವೆ ಎಂದು ಹೇಳಿದವರು ನಂತರ ಬರಲೇ ಇಲ್ಲವಂತೆ ಆ ಅಜ್ಜಿಯು ಕೂಡ ಅನಾಥ ಶ’ವದಂತೆ ಮಣ್ಣಾಗಿ ಹೋದಳು.

ಹೆಗಲ ಮೇಲೆ ಹೊತ್ತು ಮೆರೆಸಿ ಕೈ ತುತ್ತು ತಿನ್ನಿಸಿ ತಮ್ಮ ಕಷ್ಟಗಳೆಲ್ಲವನ್ನು ನುಂಗಿಕೊಂಡು ಕೊನೆಗಾಲದಲ್ಲಿ ನನ್ನನ್ನು ಸಾಕುತ್ತಾನೆ ಎಂಬ ಆಶಾ ಭಾವನೆಯಿಂದ ಮಕ್ಕಳನ್ನು ಬೆಳೆಸಿ ಕೊನೆಗೆ ಅಟ್ಲಿಸ್ಟ್ ಅವರ ಪಾ’ರ್ಥಿವ ಶರೀರದ ದರ್ಶನ ಪಡೆಯಲು ಬಾರದ ಮಕ್ಕಳು ಇದ್ದರೇಷ್ಟು ಇಲ್ಲದಿದ್ದರೆಷ್ಟು. ಕೊರೋನ ಭಯ ಇದೆ ಅನ್ನುವುದಾದರೆ ಅವರನ್ನೇನು ಅಂತ್ಯಸಂಸ್ಕಾರಕ್ಕೆ ಕರೆಯುತ್ತಿಲ್ಲ, ಕೇವಲ ಮುಖ ನೋಡ್ಕೊಂಡು ಹೋಗ್ರೆಪ್ಪಾ ಅಂದರೂ ಜನ ಬರ್ತಿಲ್ಲ.

ಇಲ್ಲಿ ಕೋವಿಡ್-19 ಮಹಾಮಾರಿಗಿಂತ ಈ ದರಿದ್ರ ಜನರ ಮನಸ್ಥಿತಿ ಎಷ್ಟೊಂದು ಕ’ರಾಳವಾಗಿದೆ ಎಂಬುದರ ಅರಿವು ಆಗದೆ ಇರದು. ಇಂಥವರನ್ನೆಲ್ಲ ನೋಡುತ್ತಿದ್ದರೇ ಈ ಮಹಾಮಾರಿಯೇ ಎಷ್ಟೋ ವಾಸಿ ಎಂದೆನಿಸುತ್ತದೆ. ಅಷ್ಟೇ ಅಲ್ಲದೇ ಕ್ರೂರ ಮೃಗಗಳಿಗೂ ಕೂಡ ತನ್ನ ಕರುಳ ಸಂಬಂಧದ ಅರಿವು ಇರುತ್ತದೆ ಆದರೆ ಈ ಮಾನವನಿಗೆ ಇಲ್ಲ.

ಕೊನೆಯದಾಗಿ ಒಂದೆರಡು ಮಾತು, ಈ ಕರೋನ ಏನೂ ನಿಮ್ಮ ಹೆತ್ತ ತಂದೆ ತಾಯಿ ಬಂಧು ಬಳಗವನ್ನು ದೂರ ಇಡುವಷ್ಟು ಮಹಾಮಾರಿಯಲ್ಲ. ದಯವಿಟ್ಟು ನಿಮ್ಮನ್ನ ಹೆತ್ತವರಿಗೆ, ಸಂಬಂಧಿಗಳಿಗೆ ಹಾಗೂ ಅಕ್ಕಪಕ್ಕದವರು ಈ ಮಹಾಮಾರಿಯಿಂದ ಬಳಲುತ್ತಿರುವಾಗ ಅವರಿಗೆ ಸೋಶಿಯಲ್ ಡಿಸ್ಟನ್ಸ್, ಮಾಸ್ಕ್ ಇನ್ನಿತರೇ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಸ್ವಲ್ಪ ಸಾಂತ್ವನ ಹೇಳಿ, ಸಹಾಯ ಮಾಡಿ.

ನಿಮ್ಮ ಹಣ ಆಸ್ತಿ ಕೊಡುವುದೇನು ಬೇಕಾಗಿಲ್ಲ, ಕೇವಲ ಆತ್ಮಸ್ಥೈರ್ಯ ತುಂಬಿ, ಅವರಿಗೆ ಧೈರ್ಯ ಸಾಂತ್ವನ ಹೇಳಿ, ಕೇವಲ ಕರೋನ ಮಾತ್ರವಲ್ಲ ಯಾವುದೇ ರೋಗವಾಗಲಿ ಮನುಷ್ಯ ಸಂಘ ಜೀವಿ ಆತನಿಗೆ ಯಾವುದೇ ಔಷದೋಪಚಾರಕ್ಕಿಂತಲೂ ಹೆಚ್ಚಾಗಿ ತನ್ನ ಸಂಬಂಧಿಗಳು ಹಾಗೂ ಬಂಧು ಬಳಗದವರು ಅಕ್ಕಪಕ್ಕದವರ ನಾಲ್ಕು ಸಾಂತ್ವನದ ಮಾತುಗಳು ಎಷ್ಟೋ ಜೀ’ವಗಳನ್ನು ಬದುಕಿಸುತ್ತವೆ ಎಂಬುದನ್ನು ಮರೆಯದಿರಿ.

ಇದರೊಟ್ಟಿಗೆ ರೋಗಿಗಳಿಗೂ ಒಂದೆರಡು ಮಾತು, ಏನೂ ಆಗುವುದಿಲ್ಲ ಧೈರ್ಯದಿಂದಿರಿ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂಧಿಸಿ. ಧೈರ್ಯಮ್ ಸರ್ವತ್ರ ಸಾಧನಂ ನೀವು ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಂಡರೆ ಕೇವಲ ಒಂದು ರೂಪಾಯಿಯ ಮಾತ್ರೆ ಕೂಡ ನಿಮ್ಮ ಪ್ರಾಣ ಉಳಿಸಬಲ್ಲದು.

ಅಕಸ್ಮಾತ್ ನೀವು ಧೈರ್ಯ ಕಳೆದುಕೊಂಡರೇ ನಿಮಗೆ ಒಂದು ಕೋಟಿ ರೂಪಾಯಿ ಖರ್ಚು ಮಾಡಿದರು ಬದುಕುವುದು ಕಷ್ಟವಾಗುತ್ತದೆ, ಹೀಗಾಗಿ ಧೈರ್ಯದಿಂದಿರಿ. ಇಂಥವರು ನಿಮ್ಮ ಬಳಿ ಬರಲಿ ಬರದೇ ಇರಲಿ ಯಾವುದನ್ನೂ ಲೆಕ್ಕಿಸದೇ ಧೈರ್ಯವನ್ನೊಂದೆ ನಿಮ್ಮ ಅಸ್ತ್ರ ಮಾಡಿಕೊಳ್ಳಿ ಆದಷ್ಟು ಮನಸ್ಸನ್ನೂ ಶಾಂತವಾಗಿರಿಸಿಕೊಳ್ಳಿ. ಮೇಲೆ ವಿಡಿಯೊ ಇದೆ ನೋಡಿ…
-ಮಂಜುನಾಥ್

Leave a Comment

Your email address will not be published. Required fields are marked *