ಮುಂಬಯಿ ಪಾಲಿಕೆಯ ಭೀಕರ ವಾಸ್ತವತೆ ಬಂತು ಬೆಳಕಿಗೆ; ಹೆಣದ ಬದಿಯಲ್ಲಿಯೇ ರೋಗಿಗಳಿಗೆ ಉಪಚಾರ! ವೀಡಿಯೊ ವೈರಲ್!!

ಮುಂಬಯಿ:- ಸಾಯನ್ ಆಸ್ಪತ್ರೆಯಲ್ಲಿ ಮೃತದೇಹಗಳ ಬದಿಯಲ್ಲೇ ರೋಗಿಗಳ ಉಪಚಾರ ಮಾಡುವ ಅತ್ಯಂತ ಆಶ್ಚರ್ಯಚಕಿತ ವಿಡಿಯೋ ಬೆಳಕಿಗೆ ಬಂದಿದೆ. ಈ ಆಸ್ಪತ್ರೆಯಲ್ಲಿ ಒಂದು ವಿಭಾಗದಲ್ಲಿ ಕೆಲವು ಮೃತಪಟ್ಟ ವ್ಯಕ್ತಿಗಳ ದೇಹವನ್ನು ಇಡಲಾಗಿತ್ತು ಅದಲ್ಲದೆ ಆ ಶವಗಳಿದ್ದ ವಿಭಾಗದಲ್ಲಿಯೇ ಇತರ ರೋಗಿಗಳಿಗೆ ಉಪಚಾರ ಪ್ರಾರಂಭ ಮಾಡಿರುವ ವಿಡಿಯೋ ವೈರಲ್ ಅದುದ್ದರಿಂದ ಕೋಲಾಹಲ ಉಂಟಾಗಿದೆ.

ನಿತೇಶ ರಾಣೆ(MLA) ಅವರು ಟ್ವೀಟ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದೆ. ಈ ವಿಡಿಯೋ ಕೋವಿಡ್-19 ವಾರ್ಡ ದಲ್ಲಿಯ ವಿಡಿಯೋ ಇದೆ ಎಂದು ಊಹಿಸಲಾಗುತ್ತಿದೆ. ಈ ವಿಡಿಯೋ ದಲ್ಲಿ ನಾಲ್ಕು ಮೃತದೇಹಗಳಿದ್ದು ಅದರ ಬದಿಯಲ್ಲಿ ರೋಗಿಗಳಿಗೆ ಉಪಚಾರ ಪ್ರಾರಂಭ ಮಾಡಿದ್ದಾರೆ. ಈ ಮೃತದೇಹಗಳನ್ನು ಕಪ್ಪು ಪ್ಲಾಸ್ಟಿಕ್ ಬ್ಯಾಗನಲ್ಲಿ ಕಟ್ಟಿಟ್ಟಿದ್ದಾರೆ. ಅಲ್ಲದೆ ಕೆಲವು ಮೃತದೇಹಗಳ ಮೇಲೆ ಬಟ್ಟೆಯನ್ನು ಹೊದಿಸಿದ್ದಾರೆ.

ವಿಡಿಯೋದಲ್ಲಿ ಕೆಲವು ಡಾಕ್ಟರಗಳು ಪಿಪಿಇ ಕಿಟ್ ಧರಿಸಿ ಉಪಚಾರ ಮಾಡುವ ದೃಶ್ಯ ಕಂಡು ಬಂದಿದೆ. ಇದಕ್ಕಿಂತ ಆಶ್ಚರ್ಯಕರ ಸಂಗತಿ ಏನೆಂದರೆ ಆಸ್ಪತ್ರೆಯಲ್ಲಿ ಮೃತ ದೇಹಗಳಿದ್ದರು ಸಹ ಡಾಕ್ಟರ್ ಅದನ್ನು ಕೇರ್ ಮಾಡದೆ ಬಿಂದಾಸ್ ಆಗಿ ಟ್ರೀಟ್ಮೆಂಟ್ ಮಾಡುತ್ತಾ ಮೃತ ದೇಹಗಳ ಬದಿಯಲ್ಲಿ ಓಡಾಡುತ್ತಿದ್ದಾರೆ.

ಮುಂಬಯಿ ಸಾಯನ್ ಆಸ್ಪತ್ರೆಯಲ್ಲಿ ಮೃತದೇಹಗಳ ಮಧ್ಯದಲ್ಲಿ ರೋಗಿಗಳಿಗೆ ಉಪಚಾರ ಮಾಡುವ ದೃಶ್ಯದ ವಿಡಿಯೋ ನಿನ್ನೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಅದರ ಕುರಿತು ಕಿರೀಟ ಸೋಮಯ್ಯ ( ಮಾಜಿ ಸಂಸದ) ಇವರು ಭಾರತೀಯ ವೈದಿಕ ಸಂಶೋಧನಾ ಪರಿಷತ್ತು(ICMR) ಕಡೆಗೆ ವರದಿ ಮಾಡಿದ್ದಾರೆ. ಅಲ್ಲಿಯ ಶಾಸಕರಾದ ನಿತೀಶ್ ರಾಣೆ ಅವರು ನಿನ್ನೆ ಬುಧುವಾರ ಈ ವಿಡಿಯೋ ವನ್ನು ಟ್ವೀಟ್ ಮಾಡಿದ್ದಾರೆ.

“ನಿನ್ನೆ ರಾತ್ರಿಯಿಂದಲೂ ಸಾಯನ್ ಆಸ್ಪತ್ರೆಯವರ ಕಡೆಯಿಂದ ಈ ವಿಡಿಯೋ ಕೃತಕ ಎಂದು ಹೇಳಲಾಗಿದೆ. ಆದರೆ ಅದರ ಕುರಿತು ಆಶ್ಚರ್ಯಕರ ಉತ್ತರವನ್ನು ಶಾಸಕರು ನೀಡಿದ್ದಾರೆ ಅದೇನೆಂದರೆ, ಪಾಲಿಕೆಯ ಪ್ರಶಾಸನದ ಮೇಲೆ ಮತ್ತು ಆರೋಗ್ಯ ವಿಭಾಗದ ಮೇಲೆ ಈಗ ವಿಶ್ವಾಸ ಉಳಿದಿಲ್ಲ. ಒಂದು ವೇಳೆ ನಿಮಗೆ ಪರಸ್ಥಿತಿಯನ್ನು ನಿಯಂತ್ರಣ ವಿಡಲು ಸಾಧ್ಯವಾಗದಿದ್ದರೆ ಪಾಲಿಕೆ ಆಯುಕ್ತರು ರಾಜೀನಾಮೆ ಕೊಡಿ” ಎಂದು ರಾಣೆಯವರು ತಮ್ಮ ವರದಿಯಲ್ಲಿ ನಮೂದಿಸಿದ್ದಾರೆ.