VIDEO : ಭೂಮಿ ಮೇಲೆ ಲಾಕ್ ಡೌನ್ ಇದೆ, ಇಲ್ಲಿ ಇಲ್ವಲ್ಲ! ವಿವಾಹವಾಗಲು ಇವರು ಏನು ಮಾಡಿದರು ವಿಡಿಯೊ ನೋಡಿ

ಕರೋನಾ ವೈರಸ್‌ ನ ಎರಡನೇ ಅಲೆಯೊಂದಿಗೆ ಇಡೀ ದೇಶ ಹೋರಾಡುತ್ತಿದೆ. ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಸಾಕಷ್ಟು ಜನ ಪ್ರಾ’ಣ ಕಳೆದುಕೊಂಡಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಲಾಕ್‌ ಡೌನ್ ಇದೆ, ಇದರಿಂದಾಗಿ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವ್ಯವಹಾರ, ಕೆಲಸ ಅಥವಾ ವಿವಾಹಗಳೇ ಆಗಿರಲಿ ಜನರ ಎಲ್ಲ ಪ್ರಮುಖ ಕೆಲಸಗಳನ್ನು ತಡೆಹಿಡಿಯಲಾಗಿದೆ.

ಆದರೆ ಇಲ್ಲಿರುವ ಮಹಾನ್ ಬುದ್ದಿವಂತರನ್ನು ನೋಡಿ, ಮದುವೆಯಾಗುವುದೇ ಜೀವನದ ಪ್ರಮುಖ ಕೆಲಸ ಅಂದುಕೊಂಡರೋ ಅಥವಾ ಜನರ ಜೀವಕ್ಕಿಂತ ಮದುವೆಯೇ ಮುಖ್ಯ ಅಂದುಕೊಂಡರೇನೋ, ತಮ್ಮ ವಿವಾಹವನ್ನು ಬದಲಿಗೆ ಕರೋನಾ ನಿರ್ಬಂಧಗಳಿಂದ ಪಾರಾಗಲು ಇವರು ಭೂಮಿಯನ್ನು ತೊರೆದು ಆಕಾಶದಲ್ಲಿ ವಿವಾಹವಾಗಿದ್ದಾರೆ!

ಇದು ತಮಿಳುನಾಡಿನ ಮಧುರೈನಲ್ಲಿ ನಡೆದ ಒಂದು ವಿಶಿಷ್ಟ ವಿವಾಹವಾಗಿದೆ. ದಂಪತಿಗಳು ವಿಮಾನದಲ್ಲಿ ಸಂಬಂಧಿಕರೊಂದಿಗೆ ವಿವಾಹವಾದರು. ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ಹಿನ್ನೆಲೆಯಲ್ಲಿ, ಸಿಎಂ ಸ್ಟಾಲಿನ್ ಮೇ 24 ರಿಂದ 31 ರವರೆಗೆ 7 ದಿನಗಳವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದಾರೆ.

ಆದರೆ ಕರೋನ ರೂಲ್ಸ್ ಭೂಮಿ ಮೇಲೆ ಮಾತ್ರ, ಆಕಾಶದಲ್ಲಿ ಅಲ್ಲವಲ್ಲ ಎಂದುಕೊಂಡ ಮಧುರೈ ಮೂಲದ ರಾಕೇಶ್ ಮತ್ತು ದೀಕ್ಷಾ ಎಂಬ ಜೋಡಿ ಚಾರ್ಟರ್ಡ್ ಏರೋಪ್ಲೇನ್ ಒಳಗೆ ವಿವಾಹವಾದರು. ಅವರು ವಿಮಾನವನ್ನು ಬಾಡಿಗೆಗೆ ಪಡೆದರು ಮತ್ತು 130 ಸಂಬಂಧಿಕರೊಂದಿಗೆ ಆಕಾಶದಲ್ಲಿ ವಿವಾಹವಾದರು.

ಈ ಮದುವೆ ಎರಡು ದಿನಗಳ ಹಿಂದೆ ನಡೆಯಿತು. ರಾಜ್ಯದಲ್ಲಿ ಒಂದು ದಿನದ ವಿನಾಯಿತಿ ಘೋಷಿಸಿದ ಕೂಡಲೇ ಅವರು ತಮ್ಮ ಮದುವೆಯನ್ನು ಪೂರೈಸುವ ಯೋಜನೆಯನ್ನು ಮಾಡಿದರು. ಎಲ್ಲಾ 130 ಪ್ರಯಾಣಿಕರು ತಮ್ಮ ಸಂಬಂಧಿಕರು ಮತ್ತು ಎಲ್ಲರೂ ಆರ್ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಸಲ್ಲಿಸಿದ್ದಾರೆ ಎಂದು ದಂಪತಿಗಳು ಹೇಳಿದ್ದಾರೆ.

ನೆಗೆಟಿವ್ ರಿಪೋರ್ಟ್ ನೋಡಿದ ಮೇಲೆಯೇ ಅವರನ್ನು ವಿಮಾನ ಹತ್ತಲು ಬಿಟ್ಟರಂತೆ. ಟೆಸ್ಟ್ ನಲ್ಲೂ ಕೂಡ ಪತ್ತೆಯಾಗದ ಕೊರೋನದಿಂದ ದಿನನಿತ್ಯ ಸಾವಿರಾರು ಜನ ಪ್ರಾ’ಣ ಕಳೆದುಕೊಳ್ಳುತ್ತಿದ್ದಾರೆ, ಅಂಥದ್ದರಲ್ಲಿ ಸುಶಿಕ್ಷಿತರಂತೆ ಕಂಡು ಬರುವ ಇವರು ಹೀಗೆ ಹೇಳಲು ನಾಚಿಕೆಯಾದರೂ ಬರುವುದಿಲ್ವಾ ಅಂತ.

ವಿಮಾನದಲ್ಲಿ ಜನಜಾತ್ರೆ ಸೇರಿರುವುದನ್ನು ಮೇಲಿನ ವಿಡಿಯೊದಲ್ಲಿ ನೋಡಿ, ಎಲ್ಲಿದಾವೆ ಮಾಸ್ಕ್? ಎಲ್ಲಿದೆ ಸಾಮಾಜಿಕ ಅಂತರ? ವಿಮಾನ ಬಾಡಿಗೆ ಪಡೆದವರೆಂದರೆ ದುಡ್ಡಿದ್ದವರೇ ಆಗಿರಬೇಕು, ಅಲ್ಲಿಗೆ ದುಡ್ಡಿದ್ದವರಿಗೆ ಒಂದು ರೂಲ್ಸ್, ದುಡ್ಡಿಲ್ಲದವರಿಗೆ ಮತ್ತೊಂದು ರೂಲ್ಸಾ? ಈ ನದುವೆಗೆ ಅನುಮತಿ ಕೊಟ್ಟವರಾಧರೂ ಯಾರು?

ದಿನನಿತ್ಯ ದೇಶದಲ್ಲಿ ಕೊರೋನದಿಂದಾದಾಗಿ ನಾಲ್ಕೈದು ಸಾವಿರ ಜನ ಸಾಯುತ್ತಿದ್ದಾರೆ, ಈಗಾಗಲೇ ದೇಶಾದ್ಯಂತ ಮೂರು ಲಕ್ಷಕ್ಕೂ ಅಧಿಕ ಜನ ಈ ಮಾರಕ ಕಾಯಿಲೆಯಿಂದ ಪ್ರಾ’ಣ ಕಳೆದುಕೊಂಡಿದ್ದಾರೆ. ಹೀಗಿದ್ದಾಗೂ ನೂರಾರು ಜನ ಹೀಗೆ ಗುಂಪುಗೂಡಿ ಮದುವೆ ಮಾಡುವ ಅಗತ್ಯ ಇತ್ತಾ? ಜನರ ಜೀವದ ಜೊತೆ ಚೆಲ್ಲಾಟವಾಡಿ ಮದುವೆ ಆಗಲು ಅಂಥ ಅವಸರವೇನಿತ್ತು?

ಒಂದು ಕಡೆ ಬೆಡ್ ಸಮಸ್ಯೆ, ಮತ್ತೊಂದು ಆಕ್ಸಿಜನ್ ಕೊರತೆ ಹೀಗೆ ಜನರು – ರೋಗಿಗಳು -ರಾಜ್ಯ ಸರ್ಕಾರಗಳು – ಕೇಂದ್ರ ಸರ್ಕಾರ ಸಾಧ್ಯವಾದಷ್ಟು ಸೌಲಭ್ಯ ಕಲ್ಪಿಸಲು ಮತ್ತು ಕೊರೋನವನ್ನು ಕಂಟ್ರೋಲ್ ಮಾಡಲು ಹೆಣಗಾಡುತ್ತಿವೆ. ಮದುವೆಗೆ ಕೇವಲ 20 ಜನರಿರುವಂತೆ ರೂಲ್ಸ್ ಮಾಡಲಾಗಿದೆ, ಹಾಗಿದ್ದ ಮೇಲೂ ಈ ಮದುವೆ ಹೇಗೆ ನಡೆಯಿತು?

ರಸ್ತೆಲಿ ಅಡ್ಡಾಡುವ ವ್ಯಕ್ತಿ ಮಾಸ್ಕ್ ಹಾಕಿರದಿದ್ದರೆ ಲಾಟಿ ಬೀಸುವ ಪೊಲೀಸರು ಇವರನ್ನೆಲ್ಲ ವಿಮಾನ ಹತ್ತಲು ಹೇಗೆ ಬಿಟ್ಟರು? ಈ ಮೊದಲು ಕೂಡ ಮದುಎಯಲ್ಲಿ ಭಾಗವಹಿಸಿದ ನೂರಾರು ಜನರಿಗೆ ವೈರಸ್ ತಗುಲಿದ ಉದಾಹರಣೆ ಕಣ್ಣಮುಂದಿವೆ. ವಧು – ವರರು, ಅವರ ತಂದೆ – ತಾಯಿ ಕೂಡ ಸ’ತ್ತ ಘಟನೆಗಳಾಗಿವೆ, ಆದರೂ ಈ ಜನ ಬುದ್ದಿ ಕಲಿಯಲ್ವಲ್ಲ! ವಿಡಿಯೊ ಮೇಲಿದೆ ನೋಡಿ…
-Team Infotrend