ಮಿಯಾ ಖಲಿಫಾಳ ಟಿಕ್ ಟಾಕ್ ಅಕೌಂಟ್ ಬ್ಯಾನ್ ಮಾಡಿದ ಪಾಕ್ ಸರಕಾರ..! ರೊಚ್ಚಿಗೆದ್ದ ಮಾಜಿ ಪೋ’ರ್ನ್ ಸ್ಟಾರ್ ಅಭಿಮಾನಿಗಳು!

ಪಾಕಿಸ್ತಾನ ಸರ್ಕಾರ ಟಿಕ್ ಟಾಕ್ ಆಪ್ ಮೇಲೆ ಎರಡು ಬಾರಿ ನಿಷೇಧ ಹೇರಿ ಮತ್ತೆ ಹಿಂಪಡೆದಿದೆ. ಆದರೆ ಪಾಕಿಸ್ತಾನ ಟೆಲಿ ಕಮ್ಯುನಿಕೇಷನ್ ಅಥಾರಿಟಿ ಯು ಟಿಕ್ ಟಾಕ್ ಮೇಲೆ ನಿಯಂತ್ರಣ ಸಾಧಿಸಲು ಒಂದು ಹೊಸ ತಂತ್ರಜ್ಞಾನವನ್ನು ಹೊರತಂದಿದ್ದು ಅದರ ಸಹಾಯದಿಂದ ವ್ಯಕ್ತಿಗತ ಟಿಕ್ ಟಾಕ್ ಅಕೌಂಟ್ ಗಳನ್ನು ಬ್ಲಾಕ್ ಮಾಡಬಹುದಾಗಿದೆ. ಇದರ ಸಹಾಯದಿಂದ ಮಾಜಿ ಪೋ’ರ್ನ್ ಸ್ಟಾರ್ ಹಾಗೂ ಹಾಲಿ ಸ್ಪೋರ್ಟ್ಸ್ ಕಮೆಂಟೇಟರ್ ಆಗಿರುವ ಮಿಯಾ ಖಲಿಫಾಳ ಟಿಕ್ ಟಾಕ್ ಖಾತೆಯನ್ನು ನಿಷೇಧಿಸಿದೆ!

ಆದರೆ ಯಾವುದೇ ಅಧಿಕಾರಯುತ ಘೋಷಣೆ ಮಾಡದೇ ಅಥವಾ ಯಾವುದೇ ರೀತಿಯಾದ ಕಾರಣ ಕೊಡದೆ ಖಾತೆಯನ್ನು ತೆಗೆದು ಹಾಕಿದ್ದು ವಿವಾದಕ್ಕೆ ಕಾರಣವಾಗಿದೆ. ಪಾಕಿಸ್ತಾನದಲ್ಲಿರುವ ಮಿಯಾಳ ಅಭಿಮಾನಿಗಳು ಅವಳ ಅಕೌಂಟ್ ಕಂಟೆಂಟ್ ನೋಡಲು ಸಿಗದೇ ಇದ್ದ ಕಾರಣಕ್ಕೆ ಬೇಸತ್ತು ಈ ವಿಷಯದ ವಿರುದ್ಧ ಟ್ವಿಟ್ಟರ್ ನಲ್ಲಿ ಧ್ವನಿ ಎತ್ತಿದ್ದಾರೆ!

ಇನ್ನು ಇದರ ಬಗ್ಗೆ ತಿಳಿದ ಮಿಯಾ ಕೂಡ ಪಾಕಿಸ್ತಾನ ಸರ್ಕಾರದ ಈ ನಿರ್ಧಾರದಿಂದ ಕೋಪಗೊಂಡಿದ್ದಾರೆ. ಆದರೆ ಅದನ್ನು ಬಹಳ ಹಗುರವಾಗಿ ತೆಗೆದುಕೊಂಡು ಮಿಯಾ ಪಾಕಿಸ್ತಾನ ಬ್ಯಾನ್ ಮಾಡಿರುವುದರ ಕಡೆಗೆ ಹೆಚ್ಚಾಗಿ ಗಮನ ಹರಿಸದೆ ಕೇವಲ ಒಂದು ಟ್ವೀಟ್ ಮಾಡುವ ಮೂಲಕ ತನ್ನ ಪಾಕಿಸ್ತಾನಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಇಂದಿನಿಂದ ನಾನು ನನ್ನ ಟಿಕ್ ಟಾಕ್ ವಿಡಿಯೋಗಳನ್ನು ನನ್ನ ಟ್ವಿಟ್ಟರ್ ಖಾತೆಯಲ್ಲಿ ಮತ್ತೊಮ್ಮೆ ಹಾಕುತ್ತಿದ್ದೇನೆ, ಅದು ಕೇವಲ ನನ್ನ ಪಾಕಿಸ್ತಾನಿ ಅಭಿಮಾನಿಗಳಿಗಾಗಿ ಮಾತ್ರ. ಅದರಲ್ಲೂ ಯಾರೆಲ್ಲ ಫ್ಯಾಸಿಸಂ ನಿರ್ಮೂಲನೆ ಮಾಡಲು ಬಯಸುತ್ತಾರೋ ಅವರಿಗಾಗಿ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಈ ಲೇಬೇನಾನ್ ಮೂಲದ ಮಿಯಾ.

ಇನ್ನೂ ಪಾಕಿಸ್ತಾನದಲ್ಲಿನ ಮಿಯಾ ಖಲಿಫಾಳ ಸೋಶಿಯಲ್ ಮೀಡಿಯಾ ಅಭಿಮಾನಿಗಳು ಪಾಕಿಸ್ತಾನ ಟೆಲಿ ಕಮ್ಯುನಿಕೇಷನ್ (PTA) ಮೇಲೆ ಸಿಟ್ಟಾಗಿದ್ದು, ಮಿಯಾ ಖಲಿಫಾಳನ್ನು ಸಮರ್ಥನೆ ಮಾಡಿಕೊಂಡಿದ್ದಾರೆ, ಅಷ್ಟೇ ಅಲ್ಲದೇ ಪಾಕಿಸ್ತಾನ ಟೆಲಿ ಕಮ್ಯುನಿಕೇಷನ್ ಗೆ ಇಂತ ಸಣ್ಣತನ ಬಿಟ್ಟು ತನ್ನ ಕೆಲಸ ಏನೂ ಅದನ್ನು ಮಾಡುವಂತೆ ಒತ್ತಾಯಿಸಿದ್ದಾರೆ.

ಮಿಯಾ ಖಲಿಫಾಳು ಇತ್ತೀಚೆಗೆ ಸಾಮಾಜಿಕ ಹಾಗೂ ಮಾನವ ಹಕ್ಕುಗಳ ಸಮಸ್ಯೆಗಳ ಬಗ್ಗೆ ಬಹಿರಂಗವಾಗಿ ಧ್ವನಿ ಎತ್ತುತ್ತಿದ್ದಾಳೆ. ಇವಳು ಪ್ಯಾ’ಲೇ’ಸ್ತಿ’ನ್ ಮೇಲೆ ಇ’ಸ್ರೇ’ಲ್ ದಾ’ಳಿಯ ಕುರಿತಾಗಿಯೂ ಧ್ವನಿ ಎತ್ತಿದ್ದು ಈ ಘಟನೆಯಲ್ಲಿ ಸಂಯುಕ್ತ ರಾಷ್ಟ್ರಗಳು ಕೈ ಜೋಡಿಸಿವೆ ಎಂದು ನೇರವಾಗಿಯೇ ಆರೋಪ ಮಾಡಿದ್ದಾರೆ.

ಆದರೆ ಮಿಯಾ ಖಲಿಫಾಳ ಪರವಾಗಿ ಪಾಕಿಸ್ತಾನದಲ್ಲಿ ಎದ್ದಿರುವ ಅಲೆ ಹಾಗೂ ಮಿಯಾಳ ನಡೆಯಿಂದ ಪಾಕಿಸ್ತಾನ ಟೆಲಿ ಕಮ್ಯುನಿಕೇಷನ್ ಗೆ ಯಾವುದೇ ವ್ಯತ್ಯಾಸ ಬೀಳುವುದಿಲ್ಲ ಎಂದೆನಿಸಿದೆ. ಏಕೆಂದರೆ ಪಿಟಿಎ ಗೆ ಪಾಕ್ ಸರ್ಕಾರ ಇದೊಂದು ವಿಶೇಷ ಅಧಿಕಾರ ನೀಡಿದೆ. ಆ ಅಧಿಕಾರವನ್ನು ಬಳಸಿಕೊಂಡೆ ಇದೀಗ ವ್ಯಕ್ತಿಗತವಾಗಿ ಸೋಶಿಯಲ್ ಆಪ್ ಅಕೌಂಟ್ ಗಳನ್ನು ಬ್ಯಾನ್ ಮಾಡುತ್ತಿದೆ.

ವಿಶೇಷ ಎಂದರೆ ಮಿಯಾ ಅವರಿಗೆ ತಮ್ಮ ಅಭಿಮಾನಿಗಳ ಸಂಪೂರ್ಣ ಬೆಂಬಲವಿದೆ. ಸೋಶಿಯಲ್ ಮೀಡಿಯಾದಲ್ಲಿ ಪಿಟಿಎ ವಿರುದ್ಧ ಮುಗಿಬೀಳಲು ಕೂಡ ಆಲೋಚಿಸುತ್ತಿದ್ದಾರೆ. ಇನ್ನೂ ಮುಂದುವರೆದು ಅವರು ಪಾಕಿಸ್ತಾನ ಸರ್ಕಾರ ದೇಶದಲ್ಲಿನ ಆಂತರಿಕ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ಮಿಯಾಳ ಹಿಂದೆ ಬಿದ್ದಿದೆ ಎಂದು ಗೇಲಿ ಮಾಡುತ್ತಿದ್ದಾರೆ.

ಆಕೆಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಫಾಲ್ಲೋವರ್ಸ್ ಇದ್ದಾರೆ. ಇದಷ್ಟೇ ಅಲ್ಲದೇ ಕೇವಲ ತಮ್ಮ 21 ವರ್ಷ ವಯಸ್ಸಿನಲ್ಲಿಯೇ ಪೋ’ರ್ನ್ ಇಂಡಸ್ಟ್ರಿಯಲ್ಲಿ ಬಹಳಷ್ಟು ಹೆಸರು ಮಾಡಿದ್ದು ಈಗ ಪೋ’ರ್ನ್ ಇಂಡಸ್ಟ್ರಿಯನ್ನು ಬಿಟ್ಟಿದ್ದಾಳೆ. ಸಧ್ಯ ತನ್ನ ಟಿಕ್ ಟಾಕ್ ಖಾತೆ ಬ್ಯಾನ್ ಮಾಡಿದ ಪಾಕ್ ವಿರುದ್ಧ ಗುಡುಗುತ್ತಿದ್ದಾಳೆ.
-Team Infotrend