VIDEO : ತೆಂಗಿನ ಮರದ ಇಳುವರಿ ಹೆಚ್ಚಿಸಲು ಹಾಗೂ ಹಲವು ರೋಗಗಳಿಗೆ ರೈತನ ಉಪಾಯ ಹೇಗಿದೆ ವಿಡಿಯೊ ನೋಡಿ

ನಿಮಗೆಲ್ಲ ಗೊತ್ತಿರುವ ಹಾಗೆ ರೋಗ ಇಲ್ಲದ ತೆಂಗಿನ ತೋಟಗಳು ಸಿಗುವುದೇ ಅಪರೂಪ. ಒಂದಲ್ಲ ಒಂದು ಕಾಯಿಲೆಗಳು ತೆಂಗನ್ನು ಕಾಡುತ್ತಲೇ ಇರುತ್ತವೆ, ಕೊನೆಗೆ ಯಾವ ರೋಗವೂ ಇಲ್ಲವೆಂದರೆ ಕೊನೆಗೆ ಕಾಂಡಕೊರಕ ಹುಳವಾದರೂ ತೊಂದರೆ ಕೊಡುತ್ತಿರುತ್ತದೆ. ಹಾಗೆಯೇ ಇತರ ತೋಟಗಳಿಗಿಂತ ತೆಂಗಿನ ತೋಟ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗಿರುತ್ತದೆ ಎಂಬುದು ಕೂಡ ಸತ್ಯ.

ಹೆಂಗೊ ಬೆಳೆಯುತ್ತೆ ಬಿಡು ಅಂತ ನಾಟಿ ಮಾಡಿ ಮರೆತುಬಿಟ್ಟಿರುತ್ತಾರೆ. ಕೆಲವರಿಗಂತೂ ತಿಂಗಳಿಗೆರಡು ಸಲ ನೀರು ಕೊಡುವುದು ತ್ರಾಸಾಗಿರುತ್ತದೆ. ಅಂಥವರೆಲ್ಲ ತೆಂಗು ತೋಟ ಮಾಡದಿರುವುದೇ ಒಳ್ಳೆಯದು. ಮನುಷ್ಯರಾಗಲಿ, ಮರವಾಗಲಿ ರೋಗ ಬರಲು ಮುಖ್ಯ ಕಾರಣ ಆಹಾರ, ನೀರು, ವಾತಾವರಣ.

ಯಾವಾಗ ಪೋಷಕಾಂಶಗಳು ಕಮ್ಮಿಯಾಗುತ್ತವೋ ಆಗ ಮನುಷ್ಯರಿಗಾಗಲಿ – ಮರಕ್ಕಾಗಲಿ ಕಾಯಿಲೆ ಕಟ್ಟಿಟ್ಟ ಬುತ್ತಿ. ಬೇಗ ಜಾಗೃತರಾದರೆ ಕಮ್ಮಿಯಾದ ಆ ಪೋಷಕಾಂಶಗಳನ್ನು ಕೊಡುವ ಮೂಲಕ ಮತ್ತೆ ಮೊದಲಿನಂತೆ ಮಾಡಬಹುದು. ನಿರ್ಲಕ್ಷ್ಯ ವಹಿಸಿದರೆ ತೊಂದರೆ ಫಿಕ್ಸ್.

ಬಹುತೇಕ ಎಲ್ಲರ ತೆಂಗಿನ ತೋಟಗಳಲ್ಲಿ ಹರಳು ಉದುರುವ ಸಮಸ್ಯೆ ಇದ್ದೇ ಇರುತ್ತದೆ‌. ನುಶಿರೋಗ, ಕಾಯಿಗಳು ಬೆಳೆಯದೇ ಇರುವುದು, ವಿಕಾರವಾಗಿ ಬೆಳೆಯುವುದು ಹೀಗೆ ಏನೇನೋ ಸಮಸ್ಯೆ ಸಾಕಷ್ಟು ತೋಟಗಳಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ. ಹರಳು ಉದುರುವ ಸಮಸ್ಯೆಯಂತೂ ತೋಟ ಅಷ್ಟೇ ಅಲ್ಲ, ಮನೆ ಮುಂದೆ ನೆಟ್ಟಿರೋ ಗಿಡದಲ್ಲೂ ಇರುತ್ತೆ.

ಈ ಸಮಸ್ಯೆಗೆ ಮುಖ್ಯ ಕಾರಣ : ನೀರಿನ ಕೊರತೆ, ಪೋಷಕಾಂಶಗಳ ಕೊರತೆ. ಇವೆರಡನ್ನು ತುಂಬಾ ಜನ ಸೀರಿಯಸ್ ಆಗಿ ತಗೆದುಕೊಳ್ಳುವುದಿಲ್ಲ, ಆದರೆ ಅಂಥವರು ನೆನಪಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ, ಅವರ ಗಿಡದ ಅರ್ದಕ್ಕರ್ದ ಕಾಯಿಗಳು ಹೀಗೆ ಉದುರಿಯೇ ಹಾಳಾಗುವುದರಿಂದ ಅವರ ಆದಾಯಕ್ಕೆ ಅರ್ದ ಕತ್ತರಿ ಇದೊಂದರಿಂದಲೇ ಬೀಳುತ್ತೆ.

ನೀರಿನ ಕೊರತೆಯನ್ನಂತೂ ಹೇಗೆ ನಿವಾರಿಸಬೇಕು ಅಂತ ನಿಮಗೆ ಗೊತ್ತಿದೆ. ಇನ್ನು ಪೋಷಕಾಂಶಗಳ ಕೊರತೆಯನ್ನು ನಿಭಾಯಿಸುವ ಸಲುವಾಗಿ ಹಲವರು ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ‌. ಕೆಲವರು ಸಂಪೂರ್ಣ ಸಾವಯವ ಮಾರ್ಗ ತುಳಿದರೆ, ಮತ್ತೆ ಕೆಲವರು ಸಂಪೂರ್ಣ ರಾಸಾಯನಿಕ ಸುರಿಯುತ್ತಾರೆ.

ಇನ್ನೂ ಕೆಲವರು ಎರಡನ್ನೂ ಸ್ವಲ್ಪ ಸ್ವಲ್ಪ ಪಾಲಿಸುತ್ತಾರೆ. ಮೊದಲಿನಿಂದಲೂ ಸಾವಯವದಲ್ಲಿ ಬೆಳೆದ ತೋಟಕ್ಕೆ ಸಂಪೂರ್ಣ ಸಾವಯವ ಚಿಕಿತ್ಸೆಯೇ ಬೆಸ್ಟ್. ರಾಸಾಯನಿಕ ಉಪಾಯ ಖರ್ಚುದಾಯಕ ಹಾಗೂ ನಿರಂತರ ಮಾಡುತ್ತಿರಬೇಕು. ಇನ್ನು ಎರಡನ್ನೂ ಪಾಲಿಸುವುದು ಸರಿಯಾದ ಮಾರ್ಗವಲ್ಲ.

ಈ ಕೆಳಗಿನ ವಿಡಿಯೊದಲ್ಲಿನ ರೈತರು ತಮ್ಮ ತೋಟದ ಈ ಕಾಯಿಲೆಗಳಿಗೆ ತಮ್ಮದೇ ಆದ ವಿಧಾನವನ್ನು ಅನುಸರಿದಿ ಯಶಸ್ಸು ಕಂಡಿದ್ದಾರೆ. ಹರಳು ಉದುರುವುದು, ಆಕಾರ ಕೆಡುವುದು, ಕಾಯಿಗಳ ಬೆಳವಣಿಗೆ ಕುಂಠಿತವಾಗುವುದು ಈ ಮುಂತಾದ ಸಮಸ್ಯೆಗಳಿಗೆ ಅವರು ಈ ಚಿಕಿತ್ಸೆ ನೀಡಿದ್ದಾರೆ.

ಇದು ಅತ್ಯಂತ ಸುಲಭ ಹಾಗೂ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಈ ಸಮಸ್ಯೆ ಇರುವ ಎಲ್ಲ ರೈತರು ಇದನ್ನು ನಿರಾತಂಕವಾಗಿ ಅನುಸರಿಸಬಹುದು. ಕಾಯಿಲೆ ಇಲ್ಲದ ತೋಟಗಳಿಗೂ ಕೂಡ ಮುನ್ನೆಚ್ಚರಿಕೆ ರೂಪದಲ್ಲಿ ಅಥವಾ ಪೋಷಕಾಂಶ ಪೊರೈಸುವ ಉದ್ದೇಶದಿಂದ ಹೀಗೆ ಮಾಡುವುದು ಒಳ್ಳೆಯದು.

ಉಪ್ಪು, ಕತ್ತಾಳೆ, ಬೇವು, ಹೊಂಗೆ, ಎಕ್ಕ, ಬೇವಿನ ಹಿಂಡಿ, ಸುಣ್ಣ ಇಷ್ಟು ಸಾಮಗ್ರಿ ಬಳಸಿ ಅವರು ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಇವೆಲ್ಲ ನಮ್ಮ ತೋಟದ ಸುತ್ತ ಸಿಗುವ ಸಾಮಗ್ರಿಗಳಾಗಿದ್ದು, ಸುಣ್ಣ – ಬೇವಿನ ಹಿಂಡಿ – ಉಪ್ಪನ್ನು ಮಾತ್ರ ಹೊರಗಿನಿಂದ ಖರೀದಿಸಿ ತರಬೇಕು. ಇದು ಅತ್ಯಂತ ಸುಲಭ ಅಷ್ಟೇ ಅಲ್ಲ ಅತಿ ಕಡಿಮೆ ಖರ್ಚಿನಲ್ಲಿ ಆಗುವ ಒಳ್ಳೆ ಚಿಕಿತ್ಸೆ.

ತೆಂಗಿನ ತೋಟ ಇರುವ ಯಾರು ಬೇಕಾದರೂ ಇದನ್ನು ಅನುಕರಣೆ ಮಾಡಬಹುದು. ಹಾಗೆಯೇ ಸಾಕಷ್ಟು ನೀರು ಪೊರೇಸುವುದನ್ನು ಮರೆಯಬಾರದು. ನಿಮ್ಮಲ್ಲಿ ನೀರು ಕಡಿಮೆಯಿದ್ದರೆ ಹನಿ ನೀರಾವರಿ ಅಳವಡಿಸಿ, ಅದರೆ ತೆಂಗಿನ ತೋಟದ ಕೆಳಗಿನ ನೆಲ ಒಣಗಲು ಬಿಡಬೇಡಿ. ವಿಡಿಯೊ ನೋಡಿ, ಅನಿಸಿಕೆ ತಿಳಿಸಿ.
-Team Infotrend