VIDEO : ಆಕೆ 24 ವರ್ಷ ನೆಲಮನೆಯಲ್ಲಿ ಬಂಧಿಯಾಗಿದ್ದಳು! ಮತ್ತು ಅಲ್ಲಿಯೇ ಏಳು ಮಕ್ಕಳಿಗೆ ಜನ್ಮ ನೀಡಿದಳು!!

ನಾವಿಲ್ಲಿ ನಾಕ್ ದಿನ ಲಾಕ್ ಡೌನ್ ನಲ್ಲಿ ಹೇಗಪ್ಪಾ ಕಾಲ ಕಳೆಯೋದು ಅಂತ ಯೋಚಸ್ತಿವಿ, ನಮ್ಮನ್ಯಾರೂ ಬಂ’ಧಿ’ಯಾಗಿಟ್ಟಿರಲ್ಲ, ಇಡೀ ಏರಿಯಾ ತಿರುಗಾಡಬಹುದು, ಮೇನ್ ರಸ್ತೆಗೆ ಹೋಗಲ್ಲ ಅಷ್ಟೇ, ಆದರೂ ನಮಗೆ ಲಾಕ್ ಡೌನ್ ನಲ್ಲಿ ಜೈಲಿನಂತೆ ಭಾಸವಾಗುತ್ತದೆ. ಏನಾದರೂ ನೆಪ ಮಾಡಿಕೊಂಡು – ಕೊನೆಗೆ ಐಡಿ ಕಾರ್ಡ್ ಮಾಡಿಕೊಂಡಾದರೂ ತಿರುಗಾಡಿ ಪೊಲೀಸರ ಕಡೆಯಿಂದ ಬಡಿಸಿಕೊಳ್ಳುತ್ತಾರೆ.

ಆದರೆ ನಾವಿಲ್ಲಿ ಹೇಳಹೊರಟಿರುವ ಮಹಿಳೆ ಭರ್ತಿ 24 ವರ್ಷ ಒಂದೇ ಒಂದು ರೂಮ್, ಅದೂ ಕಿಟಕಿ ಕೂಡ ಇರಲಾರದ, ಬಾಗಿಲು ಭದ್ರವಾಗಿ ಮುಚ್ಚಿದ ನೆಮನೆಯಲ್ಲೇ ಜೀವನ ಕಳೆದುಬಿಟ್ಟಿದ್ದಾಳೆ! ನಂಬೋಕಾಗಲ್ಲ ಅಲ್ವಾ? ಆದರೂ ಇದು ಸತ್ಯ. ಇದು ನಡೆದಿದ್ದು ಆಸ್ಟ್ರಿಯಾದ ಆ್ಯಮಸ್ಟರ್ ಡ್ಯಾಂ ನಲ್ಲಿ.

1984 ರಿಂದ 2008 ರವರೆಗೆ ನಿರಂತರವಾಗಿ 24 ವರ್ಷ ಆ ಮಹಿಳೆ ಹೊರಜಗತ್ತನ್ನು ನೋಡಲೇ ಇಲ್ಲ! ಇದು ಯಾವುದೊ ಸಿನೆಮಾ ಕಥೆ ಅಥವಾ ಕಾದಂಬರಿಯ ಸಾರಾಂಶದಂತೆ ಕಾಣಿಸಿದರೂ ಮಹಿಳೆಯೊಬ್ಬಳು ದಶಕಗಟ್ಟಲೆ ಅನುಭವಿಸಿದ ನ’ರ’ಕಯಾ’ತನೆಯ ಅಸಲಿ ಕಥೆ ಇದು. ಅದು ಯಾರೋ ಅ’ಪ’ಹ’ರಿ’ಸಿ ಬಂ’ಧಿಸಿಟ್ಟಿದ್ದಲ್ಲ, ಸ್ವತಃ ಆಕೆಯ ತಂದೆಯೇ ಆಕೆಯನ್ನು ಆ ಬೇಸ್ ಮೆಂಟ್ ನಲ್ಲಿ ಕೂ’ಡಿ’ಹಾ’ಕಿ ನಿರಂತರ 24 ವರ್ಷ ನ’ರ’ಕ ತೋರಿಸಿದ್ದ!

ಪ್ರಪಂಚದ ಅತ್ಯಂತ ಹೇಯ ತಂದೆ ಅಂತ ಇವನನ್ನು ಕರೆಯಬಹುದೇನೋ. ಜೋಸೇಫ್ ಎಂಬ ಹೆಸರಿನ ಇವನು ಸ್ವಂತ ಮಗಳನ್ನೆ ಬಂ’ಧಿಯಾಗಿಟ್ಟು ಅವಳಿಗೆ ಏಳು ಮಕ್ಕಳನ್ನು ಕರುಣಿಸಿದ. ಎಲ್ಲಕ್ಕಿಂತ ವಿಚಿತ್ರ ಸಂಗತಿಯೆಂದರೆ ಆ ಬೇಸ್ಮೆಂಟ್ ಮೇಲಿರುವ ಮನೆಯಲ್ಲೇ ಆತನ ಹೆಂಡತಿ ಅಂದರೆ ಬಂಧಿಯಾಗಿದ್ದ ಹುಡುಗಿಯ ತಾಯಿ ಹಾಗೂ ಆತನ ಐದು ಮಕ್ಕಳು ವಾಸವಿದ್ದರೂ ಅವರಾರಿಗೂ ಕೆಳಗೆ ನೆಲಮನೆಯಲ್ಲಿ ಅವಳು ಬಂಧಿಯಾಗಿರುವುದು ಕೊನೆಯವರೆಗೆ ತಿಳಿದಿರಲೇ ಇಲ್ಲ!

ಅಕ್ಕಪಕ್ಕದ ಮನೆಯವರು ಒತ್ತಟ್ಟಿಗಿರಲಿ, ಸ್ವಂತ ಮನೆಯವರಿಗೂ ಗೊತ್ತಾಗದ ಹಾಗೆ ಅವನು ಅಷ್ಟು ರಹಸ್ಯವಾಗಿ ಅವರನ್ನು ಇಟ್ಟಿದ್ದ. ಮಹಾನ್ ಸಿಡುಕನಾಗಿದ್ದ ಅವನ ಮಾತನ್ನು ಯಾರೂ ಮೀರುತ್ತಿರಲಿಲ್ಲ. ತನಗೆ ಕೆಲಸ ಇದೆ ಅಂತ ಬೇಸ್ಮೇಂಟ್ ಗೆ ಹೋದವನು ಇಡೀ ದಿನ ಅಲ್ಲಿಯೇ ಇದ್ದುಬಿಡುತ್ತಿದ್ದ‌. ಬೇರೆ ಯಾರಿಗೂ ಅಲ್ಲಿಗೆ ಪ್ರವೇಶವಿದ್ದಿಲ್ಲ.

ತಾನೂ ಅಲ್ಲಿದ್ದಾಗ ಊಟ – ತಿಂಡಿ – ಟೀ ಕೂಡ ತರಬಾರದು ಎಂದು ಮನೆಯವರಿಗೆ ಅಪ್ಪಣೆ ಮಾಡಿದ್ದ. ಹೀಗಾಗಿ ರಹಸ್ಯ ಕೋಣೆಯಂತಿದ್ದ ಅಲ್ಲಿನ ಯಾವ ಘಟನೆಯೂ ಹೊರಪ್ರಪಂಚಕ್ಕೆ ಗೊತ್ತೇ ಆಗಲಿಲ್ಲ. ಇನ್ನೂ ವಿಚಿತ್ರವೆಂದರೆ ಆಕೆಯ ಅಷ್ಟೂ ಮಕ್ಕಳು ಅಲ್ಲಿಯೇ ಜನಿಸಿ, ಅಲ್ಲಿಯೇ ಬೆಳೆದು ದೊಡ್ಡವಾಗಿವೆ. ಅವು ಯಾವೂ ಹೊರಪ್ರಪಂಚವನ್ನೇ ನೋಡೇ ಇರಲಿಲ್ಲ.

ಅವು ತೀರ ಚಿಕ್ಕಮಕ್ಕಳೆನಲ್ಲ, ಅವರಲ್ಲಿ ದೊಡ್ಡ ಮಗ 20 ವರ್ಷದ ಹರೆಯದವನಾಗಿದ್ದ. ಅವನಿಗೂ ಹೊರಗೆ ಹೋಗುವ ಅನುಮತಿ ಇರಲಿಲ್ಲ, ಅಥವಾ ಅವರಿಗೆಲ್ಲ ಅದೇ ವಾತಾವರಣ ಒಗ್ಗಿ ಹೋಗಿತ್ತು. ಆಟ – ಪಾಠ – ಬಿಸಿಲು ಏನೂ ಇಲ್ಲದೇ ಅವು ಅಲ್ಲಿಯೇ ಬೆಂದು ಹೋಗಿದ್ದವು. ಅವೇ ಪ್ರತಿರೋಧ ತೋರಲಿಲ್ಲವೋ ಅಥವಾ ಅವುಗಳನ್ನು ಹೆದರಿಸಿಲಾಗಿತ್ತೊ ಗೊತ್ತಿಲ್ಲ.

ಹೀಗಿರುವ ಈ ಅಮಾನವೀಯ ಪ್ರಕರಣ ಬಯಲಿಗೆ ಬಂದಿದ್ದು, ಆಕೆಯ ಮಗನೊಬ್ಬನಿಗೆ ಹುಷಾರಿಲ್ಲದೇ ಇದ್ದಾಗ. ತೀರ ಆತನ ಆರೋಗ್ಯ ಹದಗೆಟ್ಟಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಲೇಬೇಕಿತ್ತು. ಆಗ ಅವರೆಲ್ಲರನ್ನೂ ಹೊರಗೆ ಕರೆದುಕೊಂಡು ಹೋಗಿ ನಂತರ ಮನೆಗೆ ಕರೆತಂದು ಯಾವುದೋ ದೇಶದಲ್ಲಿದ್ದಳು, ಈಗ ಬಂದಳು ಅಂತ ಸಾಬೀತು ಮಾಡುವುದು ಅವನ ಉದ್ದೇಶವಾಗಿತ್ತು.

ಆದರೆ ಮೊದಲು ಆಕೆ ಮನೆಯಿಂದ ನಾಪತ್ತೆಯಾದಾಗ ತನ್ನ ಗೆಳೆಯನೊಂದಿಗೆ ಓಡಿ ಹೋಗಿದ್ದಾಳೆ ಎನ್ನಲಾಗಿತ್ತು, ಮತ್ತು ಪೊಲೀಸರಲ್ಲಿ ದೂರು ಕೂಡ ದಾಖಲಾಗಿತ್ತು. ಹೀಗಾಗಿ ಆಕೆ ಮರಳಿದ ಸುದ್ದಿ ಕೇಳಿ ಆಸ್ಪತ್ರೆಗೆ ಬಂದ ಪೊಲೀಸರು ಆಕೆಯನ್ನು ಪ್ರಶ್ನಿಸತೊಡಗಿದರು. ಆಸ್ಪತ್ರೆಯಲ್ಲಿ ಪೊಲೀಸರ ಮುಂದೆ ಆಕೆ ಸಂಪೂರ್ಣ ವೃತ್ತಾಂತ ಬಿಚ್ಚಿ ಇಟ್ಟಬಿಟ್ಟಳು.

ಅಲ್ಲಿಗೆ ಪ್ರಪಂಚದ ಪಾ’ಪಿ ತಂದೆಯೊಬ್ಬನ ಕ’ರಾಳ ಮುಖ ಬಯಲಾಯಿತು. ಆತನ ಕೃತ್ಯವನ್ನು ಆತನ ಹೆಂಡತಿಗೆ ಅರಗಿಸಿಕೊಳ್ಳಲೂ ಆಗಲಿಲ್ಲ. ತಕ್ಷಣ ಆತನನ್ನು ಬಂಧಿಸಿ ಅವರಿಗೆಲ್ಲ ರಕ್ಷಣೆ ನೀಡಲಾಯಿತು. ಈಗಲೂ ಅವನು ಜೈ’ಲಿನ’ಲ್ಲೇ ಇದ್ದಾನೆ. ಆ ಬಗೆಗಿನ ಮಾಹಿತಿಯುಳ್ಳ ವಿಡಿಯೊ ಮೇಲಿದೆ, ನೋಡಿ…
-Team Infotrend