VIDEO : ರಜೆಯಲ್ಲಿದ್ದರೂ ಕೆಲಸ ಮರೆಯದ ಅಗ್ನಿಶಾಮಕ ದಳದ ನೌಕರ! ಆತ ಬೆಂಕಿ ಆರಿಸಿದ್ದು ಹೇಗೆ ಗೊತ್ತಾ? ವಿಡಿಯೊ ನೋಡಿ…
ಕೆಲವರ ಕೆಲಸವೇ ಹಾಗಿರುತ್ತದೆ, ಹೋದಲ್ಲೆಲ್ಲ ಅವರ ಸಹಾಯ ಬೇಕಾಗಿರುತ್ತದೆ. ಇನ್ನು ಕೆಲವರು ತಮ್ಮ ಅವಶ್ಯಕತೆ ಎಲ್ಲಿರುತ್ತದೋ ಕರೆಕ್ಟಾಗಿ ಅಲ್ಲಿಯೇ ಆಕಸ್ಮಿಕವಾಗಿ ಹಾಕರಿರುತ್ತಾರೆ.ಇಲ್ಲಿ ಆಗಿರುವುದೂ ಹಾಗೆಯೇ. ಈ ವಿಡಿಯೊ ನೋಡಿದಾಗ ಥೇಟ್ ಸಿನೆಮಾ ದೃಶ್ಯದಂತೆ ಭಾಸವಾಗುತ್ತದಾರೂ, ಇದು ಖಂಡಿತ ರೀಲ್ ಅಲ್ಲ ರಿಯಲ್ ದೃಶ್ಯ.
ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ವೈರಲ್ ಆಗುತ್ತಿರುವ ಈ ವಿಡಿಯೊ ಕೆಳಗಿದೆ. ಈ ವಿಡಿಯೊವನ್ನು ನ್ಯೂಯಾರ್ಕ್ ನ ರೋಚೆಸ್ಟರ್ ಫೈರ್ ಫೈಟರ್ಸ್ ಅಸೋಸಿಯೇಶನ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಘಟನೆ ನಡೆದಿರುವುದು ಅಲ್ಲಿನ ಐರನ್ ಡೆಕ್ಯೂಟ್ ಬೇ ಯಲ್ಲಿ. ಅಲ್ಲಿ ಲಂಗರು ಹಾಕಿ ನಿಲ್ಲಿಸಿದ್ದ ಬೋಟ್ ಗೆ ಬೆಂಕಿ ಹೊತ್ತಿತ್ತು.
ಇದನ್ನು ಅಲ್ಲಿಯೇ ಇದ್ದ ಆಸ್ಕರ್ ಹೆರೆರಾ ಎಂಬುವವರು ನೋಡಿದರು. ಅವರು ಅಲ್ಲಿಯೇ ಜೆಟ್ ಸ್ಕಿ ಯಲ್ಲಿ ರಜಾದಿನದ ಮೋಜು ತಗೆದುಕೊಳ್ಳುತ್ತಿದ್ದರು. ಬೆಂಕಿ ಹತ್ತಿದ್ದು ನೋಡಿದ ತಕ್ಷಣ ಅವರಿಗೆ ಏನು ಮಾಡಬೇಕೊ ಒಂದರೆಕ್ಷಣ ಯೋಚಿಸಿದವರೇ ತಾವು ಕುತಿರುವ ಜೆಟ್ ಸ್ಕಿ ಯಿಂದಲೇ ಬೆಂಕಿ ಆರಿಸುವ ನಿರ್ಧಾರಕ್ಕೆ ಬಂದರು.
ಜೆಟ್ ಸ್ಕೀ ನಲ್ಲಿ ವೇಗವಾಗಿ ಬಂದವರೇ ಬೆಂಕಿ ಹತ್ತಿದ ಬೋಟ್ ಬಳಿ ಟರ್ನ್ ಮಾಡುವುದು, ಮತ್ತೆ ಹಿಂದಕ್ಕೆ ಹೀಗಿ ಮತ್ತೆ ವೇಗವಾಗಿ ಬಂದು ಟರ್ನ್ ಮಾಡುವುದು, ಹೀಗೆ ಮಾಡಿ ಮಾಡಿ ಬೆಂಕಿ ನಂದಿಸಿದರು. ಅಲ್ಲಿದ್ದವರಿಗೆ ಇದೊಂಥರ ರೋಚಕ ದೃಶ್ಯ ಅನಿಸಿತು. ಅಚ್ಚರಿಯ ಸಂಗತಿಯೇನದರೆ, ಬೆಂಕಿ ಆರಿಸಿದ ಆಸ್ಕರ್ ಹೆರೆರಾ ಸ್ವತಃ ಅಲ್ಲಿನ ಫೈರ್ ಫೈಟರ್ ನೌಕರನಾಗಿದ್ದ!
ಪಾಪ ಅವರು ರಜೆಯಲ್ಲಿದ್ದರು ಬೆಂಕಿ ಅವರ ಬೆಂಬಿಡಲಿಲ್ಲ, ಅವರೂ ಕೂಡ ರಜೆಯಲ್ಲಿದ್ದರೂ ಬೆಂಕಿಯನ್ನು ಬೆಳೆಯಲು ಬಿಡದೇ ನಂದಿಸಿದ್ದಾರೆ. Video of off duty firefighter Herrera using his jetski to douse a boat fire In Irondequoit Bay. Sometimes off duty, but always a firefighter ಎಂಬ ಶಿರ್ಷಿಕೆಯೊಂದಿಗೆ ROC Fire Fighters ರವರು ವಿಡಿಯೊ ಶೇರ್ ಮಾಡಿದ್ದಾರೆ.
Video of off duty firefighter Herrera using his jetski to douse a boat fire In Irondequoit Bay. Sometimes off duty, but always a firefighter #Roc #Rochester @IAFFFrontline @NYSPFFA @mcfw pic.twitter.com/xosJubfbhh
— ROC Fire Fighters (@IAFF1071) May 26, 2021
ಎಲ್ಲ ಕಡೆ ವೈರಲ್ ಆಗುತ್ತಿದ್ದು, ಈಗಾಗಲೇ ಸಾವಿರಾರು ವಿವ್ಸ್ ಮತ್ತು ರಿಟ್ವೀಟ್ ಕಂಡಿರುವ ಆ ವಿಡಿಯೊ ಮೇಲಿದೆ ನೋಡಿ. ಬಹುತೇಕ ಎಲ್ಲರೂ ಆತನ ಕ್ರಿಯೆಟಿವಿಟಿಯನ್ನು ಹೊಗಳಿದ್ದಾರೆ.
-Team Infotrend