ಭಾವಿ ಪತ್ನಿ ಧನಾಶ್ರೀ ಯೊಂದಿಗೆ ರೋಮ್ಯಾಂಟಿಕ್ ಫೋಟೋ ಹಂಚಿಕೊಂಡ ಚಹಲ್; ನೆಟ್ಟಿಗರ ಮನಸು ಗೆದ್ದ ‘CAPTION’

ಟೀಂ ಇಂಡಿಯಾದ ಸ್ಟಾರ್ ಬೌಲರ್ ಆಗಿರುವ ಯಜ್ವೇಂದ್ರ ಚಹಲ್ ಹಾಗೂ ಅವರ ಭಾವೀ ಪತ್ನಿ ಡಾನ್ಸರ್, ಡಾಕ್ಟರ್ , ಯೂಟ್ಯೂಬರ್ ಮತ್ತು ಕೊರಿಯೋಗ್ರಫರ್ ಕೂಡಾ ಆಗಿ ಸೋಶಿಯಲ್ ಮೀಡಿಯಾ ದಲ್ಲಿ ಸಂಚಲವನ್ನು ಸೃಷ್ಟಿಸಿರುವ ಧನಾಶ್ರೀ ವರ್ಮಾ ಒಂದಲ್ಲಾ ಒಂದು ವಿಷಯದಿಂದ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಧನಾಶ್ರೀ ವರ್ಮಾ ಅವರಂತೂ ಆಗಾಗ ತಮ್ಮ ಹೊಸ ಹೊಸ ಡಾನ್ಸ್ ವೀಡಿಯೋಗಳನ್ನು ಶೇರ್ ಮಾಡುತ್ತಾ, ಅಭಿಮಾನಿಗಳಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಿರುತ್ತಾರೆ. ಒಂದು ಕಡೆ ಕ್ರಿಕೆಟ್ ನಲ್ಲಿ ಯಜ್ವೇಂದ್ರ ಚಹಲ್ ಅಭಿಮಾನಿಗಳ ಬಳಗ ಹೊಂದಿದ್ದರೆ, ಇನ್ನೊಂದೆಡೆ ಧನಾಶ್ರೀ ವರ್ಮಾ ಡಾನ್ಸ್ ಮೂಲಕ ಅಭಿಮಾನಿಗಳ ಬಳಗ ಬೆಳೆಯುತ್ತಿದೆ.

ಯಜ್ವೇಂದ್ರ ಚಹಲ್ ಹಾಗೂ ಧನಾಶ್ರೀ ವರ್ಮಾ ಪ್ರಸ್ತುತ ಒಂದು ರೀತಿಯಲ್ಲಿ ಸ್ಟಾರ್ ಕಪಲ್ ಗಳಾಗಿದ್ದು, ಈ ಜೋಡಿಗೆ ಜನರು ಕೂಡಾ ಅಪಾರ ಅಭಿಮಾನ ಮತ್ತು ಪ್ರೀತಿಯನ್ನು ನೀಡುತ್ತಿದ್ದಾರೆ. ಐಪಿಎಲ್ ವೇಳೆಯಲ್ಲಿ ಅವರು ಯಜ್ವೇಂದ್ರ ಚಹಲ್ ಮತ್ತು ಆರ್.ಸಿ.ಬಿ.ಯನ್ನು ಹುರಿದುಂಬಿಸಲು ಧನಾಶ್ರೀ ಯುಎಇ ಗೆ ಹೋಗಿದ್ದರು. ಅವರು ಟೀಂ ಅನ್ನು ಹುರಿದುಂಬಿಸಿದ್ದು ಅವರ ಅಭಿಮಾನಿಗಳಿಗೆ ಕೂಡಾ ಸಾಕಷ್ಟು ಖುಷಿಯನ್ನು ನೀಡಿತ್ತು. ಧನಾಶ್ರೀ ಹಾಗೂ ಯಜ್ವೇಂದ್ರ ಅವರು ತಮ್ಮ ಫೋಟೋಗಳನ್ನು ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಅಭಿಮಾನಿಗಳ ಹೃದಯವನ್ನು ಗೆಲ್ಲುವುದು ಉಂಟು.

ಇತ್ತೀಚಿಗೆ ಯಜ್ವೇಂದ್ರ ಚಹಲ್ ಮತ್ತು ಧನಾಶ್ರೀ ಇಬ್ಬರೂ ಕೂಡಾ ಸಮುದ್ರ ತೀರವೊಂದರಲ್ಲಿ ಬಹಳ ಸುಂದರವಾದ ಸಂತಸದ ಕ್ಷಣಗಳನ್ನು ಕಳೆದಿದ್ದರು. ಆ ಸಂತಸದ ಕ್ಷಣಗಳ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ಹಂಚಿಕೊಂಡಿದ್ದ ಯಜ್ವೇಂದ್ರ ಅವರು ಫೋಟೋ ದ ಶೀರ್ಷಿಕೆಯಲ್ಲಿ, “ನನ್ನ ಮನೆ ಮತ್ತು ನನ್ನ ಸಾಹಸ ಎರಡೂ ಒಂದೇ ಕಡೆಯಲ್ಲಿ” ಎಂದು ಬರೆದುಕೊಂಡಿದ್ದಾರೆ. ‌ಇದೇ ಫೋಟೋ ವನ್ನು ಧನಾಶ್ರೀ ಕೂಡ ಹಂಚಿಕೊಂಡು ಅದರಲ್ಲಿ ಅವರು “ಜೀವನ ಪೂರ್ತಿಯ ರೋಮಾಂಚನ ” ಎಂದು ಬರೆದುಕೊಂಡಿದ್ದಾರೆ.

ಧನಾಶ್ರೀ ಹಾಗೂ ಚಹಲ್ ಶೇರ್ ಮಾಡಿಕೊಂಡಿರುವ ಈ ಫೋಟೋಗಳಿಗೆ ಅವರ ಅಭಿಮಾನಿಗಳು ಕೂಡಾ ಭಾರೀ ಮೆಚ್ಚುಗೆ ಯನ್ನು ಸೂಚಿಸುತ್ತಿದ್ದು ಫೋಟೋಗಳು ಸೋಷಿಯಲ್ ಮೀಡಿಯಾದ ಲ್ಲಿ ವೈರಲ್ ಆಗುತ್ತಿವೆ. ಚಹಲ್ ಮತ್ತು ಧನಾಶ್ರೀ ಕಳೆದ ಆಗಸ್ಟ್ 9 ರಂದು ತೀರಾ ಖಾಸಗಿ ಎನ್ನುವ ಕಾರ್ಯಕ್ರಮವೊಂದರಲ್ಲಿ ತಮ್ಮ ನಿಶ್ಚಿತಾರ್ಥ ವನ್ನು ಮಾಡಿಕೊಂಡಿದ್ದರು. ಆದರೆ ಈ ಜೋಡಿ ಇನ್ನೂ ಕೂಡಾ ತಮ್ಮ ವಿವಾಹದ ದಿನಾಂಕವನ್ನು ಮಾತ್ರ ಇದುವರೆವಿಗೂ ಕೂಡಾ ಅಧಿಕೃತವಾಗಿ ಘೋಷಣೆಯನ್ನು ಮಾಡಿಲ್ಲ.

ಇನ್ನು ಪ್ರಸ್ತುತ ಯಜ್ವೇಂದ್ರ ಚಹಲ್ ಅವರು ಟೋಂ ಇಂಡಿಯಾ ಜೊತೆಗೆ ಎರಡು ತಿಂಗಳ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದು, ಸಿಡ್ನಿ ನಗರಕ್ಕೆ ಆಗಮಿಸಿದ್ದಾರೆ. ಇನ್ನು ಸಿಡ್ನಿ ನಗರದಲ್ಲಿ ಕ್ರಿಕೆಟ್ ತಂಡ ಕೊರೊನಾ ಹಿನ್ನೆಲೆಯಲ್ಲಿ ಹದಿನಾಲ್ಕು ದಿನಗಳ ಕ್ವಾರಂಟೈನ್ ನಲ್ಲಿ ಇದ್ದು, ನಿನ್ನೆ ಅಂದರೆ ನವೆಂಬರ್ 13 ಕ್ಕೆ ಕ್ವಾರಂಟೈನ್ ಮುಗಿದಿದ್ದು, ಇಂದಿನಿಂದ ಟೀಂ ಇಂಡಿಯಾ ತಮ್ಮ ಅಭ್ಯಾಸವನ್ನು ಆರಂಭಿಸಿದ್ದು, ಟೀಂ ಇಂಡಿಯಾ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋ ಒಂದನ್ನು ಕೂಡಾ ಯಜ್ವೇಂದ್ರ ಇಂದು ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.