Articles

CR7 (ಕ್ರಿಸ್ಟಿಯಾನೋ ರೊನಾಲ್ಡೊ) ಅವರು ಫುಟ್ಬಾಲ್ ನಲ್ಲಿ ಮಾಡಿದ ಈ ಗೋಲ್ ನೋಡಲಿಲ್ಲ ಎಂದರೆ ಹೇಗೆ? ????????????

ಭಾರತದಲ್ಲಿ ಕ್ರಿಕೆಟ್ ಹೊರತಾಗಿ ಬೇರೆ ಯಾವ ಆಟಗಳಿಗೂ ಅಷ್ಟೊಂದು ಪಬ್ಲಿಸಿಟಿ ಇಲ್ಲ. ಜಗತ್ತಿನಲ್ಲಿ ಫೇಮಸ್ ಆಗಿರೋ ಆಟವೆಂದರೆ ಫುಟ್ಬಾಲ್. ಸದ್ಯ ಕತಾರ್ ನಲ್ಲಿ ಫುಟ್ಬಾಲ್ ವರ್ಲ್ಡ್ ಕಪ್ ತುಂಬಾ ಜೋಶ್ ನಲ್ಲಿ ಶುರುವಾಗಿದೆ. ಫುಟ್ಬಾಲ್ ಆಡುವ ಪ್ರಮುಖ ದೇಶಗಳು ಈ ಟೂರ್ನಿಯನ್ನು ಗೆದ್ದು ಚಾಂಪಿಯನ್ ಆಗುವ ಕನಸು ನನಸಾಗಿಸಲು ಒಂದೇ ಸವನೆ ಹೆಣಗಾಡುತ್ತಿವೆ.

ಫುಟ್ಬಾಲ್ ಜಗತ್ತಿನಲ್ಲಿ CR7 ಎಂದೇ ಖ್ಯಾತಿಯಾಗಿರುವ ಕ್ರಿಸ್ಟಿಯಾನೋ ರೊನಾಲ್ಡೋ ಅವರ ಸೂಪರ್ ವಿಡಿಯೋ ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ನೋಡಿದ ನಂತರ ನಿಜಕ್ಕೂ ಆಶ್ಚರ್ಯವಾಗುತ್ತದೆ. ಫುಟ್ಬಾಲ್ ಆಟದ ಎಂಥ ಕೌಶಲ್ಯ ಅವರ ದೇಹದಲ್ಲಿ ಇದೆ ಎಂಬುದರ ಅರಿವು ಈ ವಿಡಿಯೋ ನೋಡಿದ ನಂತರ ನೆಟ್ಟಿಗನಿಗೆ ಆಗುತ್ತದೆ. ವಿಡಿಯೋದಲ್ಲಿ ಕ್ರಿಶ್ಚಿಯಾನೋ ರೊನಾಲ್ಡೊ ಅವರು ಅದ್ಭುತವಾದ ಜಿಗಿತದ ಮುಖಾಂತರ ತಲೆಯಿಂದ ಗೋಲ್ ಮಾಡಿದ ಈ ದೃಶ್ಯ ವರ್ಣಿಸಲು ಅಸಾಧ್ಯ. ಅವರ ಟೈಮಿಂಗ್ ಮತ್ತು ಆಟದಲ್ಲಿಯ ಸ್ಪೂರ್ತಿ ಎರಡೂ ವರ್ಣನಾತೀತ.

ನೋಡಿ ಕ್ರಿಸ್ಟಿಯಾನೋ ರೊನಾಲ್ಡೋ ಅವರ ಈ ಸುಂದರವಾದ ವಿಡಿಯೋ.

 

View this post on Instagram

 

A post shared by alexa (@10_motion)

ಪ್ರಸ್ತುತ ವಿಡಿಯೋ instagram ನಲ್ಲಿ 10_motion ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 9 ಲಕ್ಷ 90 ಸಾವಿರ (ಸುಮಾರು 1 ಮಿಲಿಯನ್ ಸಮೀಪ) ವೀಕ್ಷಣೆಯನ್ನು ಪಡೆದಿದೆ. ಜೊತೆಗೆ 65,000ಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.

Leave a Comment

Your email address will not be published. Required fields are marked *