ಕುದುರೆ ಮೇಲೆ ಕುಂತ ಹುಡುಗ ಕೆಳಗೆ ಇಳಿಯಲು ಬರದೆ ಇದ್ದಾಗ, ತನ್ನ ಗೆಳೆಯನನ್ನು ಇಳಿಸಲು ಕೇಳಿಕೊಂಡ ಪದ್ದತಿ ನೋಡಿ!!☺️

ಸೋಶಿಯಲ್ ಮಿಡಿಯಾದಲ್ಲಿ ಇಂತಹದೇ ಕಂಟೆಂಟ್ ವೈರಲ್ ಆಗುತ್ತೆ ಅಂತ ಹೇಳಲು ಬಾರದು. ಏಕೆಂದರೆ ಸೋಶಿಯಲ್ ಮಿಡಿಯಾದಲ್ಲಿ ಯಾವಾಗ ಯಾವ ಕಂಟೆಂಟ್ ವೈರಲ್ ಆಗಿ ರಾತ್ರೋರಾತ್ರಿ ಪ್ರಸಿದ್ಧ ಪಡೆದುಕೊಳ್ಳುವದು ಎಂಬುದು ತಿಳಿದಿಲ್ಲ. ಹಾಗಾಗಿ ಇಂದು ಪ್ರತಿಯೊಬ್ಬರೂ ಒಂದಲ್ಲ ಒಂದು ವಿಭಿನ್ನ ರೀತಿಯ ಕಂಟೆಂಟ್ ಆಯ್ಕೆ ಮಾಡಿ ಅದನ್ನು ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಲು ಬಿಡುತ್ತಾರೆ. ನಾವು ಸೋಶಿಯಲ್ ಮಿಡಿಯಾದಲ್ಲಿ ಅನೇಕ ವೈರಲ್ ಆಗಿರುವ ವೀಡಿಯೋಗಳು ನೋಡಿದ್ದೇವೆ. ಸದ್ಯಕ್ಕೆ ಮತ್ತೊಂದು ವೈರಲ್ ವೀಡಿಯೋ ನಿಮಗಾಗಿ ತಂದಿದ್ದೇವೆ.

ಈ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ನೀವು ನೋಡಬಹುದು, ಒಬ್ಬ ಹುಡುಗ ಮೊದಲು ಆತ ಕೂದರೆಯನ್ನು ಕಂಡು ಅದರ ಮೇಲೆ ಕುಳಿತುಕೊಳ್ಳಬೇಕು ಎಂದು ಹಠ ಮಾಡುತ್ತಾನೆ. ಆಗ ಅಲ್ಲಿದ್ದ ಆತನ ಗೆಳೆಯ ಈತನನ್ನು ಕುದುರೆಯ ಮೇಲೆ ಕುಳಿತುಕೊಳ್ಳಲು ಸಹಾಯ ಮಾಡುತ್ತಾನೆ. ಗೆಳೆಯನ ಸಹಾಯದಿಂದ ಕುದ್ರೆಯ ಮೇಲೆ ಕುಳಿತುಕೊಂಡ ಹುಡುಗ ಇನ್ನೇನು ಇಳಿಯಬೇಕೆಂದು ಯೋಚನೆ ಕಾಲನ್ನು ಕೆಳಗಡೆ ಮಾಡುತ್ತಾನೆ.

ಆದರೆ ಕುದುರೆ ಎತ್ತರ ವಾಗಿರುವದರಿಂದ ಆತನ ಕಾಲು ಕೆಳಗಡೆ ವರೆಗೆ ಬರುವದೇ ಇಲ್ಲ. ಆಗ ಗೆಳೆಯನನ್ನು ಇಳಿಸಲು ಕೇಳಿಕೊಳ್ಳುತ್ತಾನೆ. ಗೆಳೆಯ ಸ್ವಲ್ಪ ಚಾಲಾಕಿತನ ತೋರಿ ಈತನಿಗೆ ಇಳಿಯಲು ಸಹಾಯ ಮಾಡುವದೇ ಇಲ್ಲ. ಕುದುರೆ ಮೇಲೆ ಕುಳಿತುಕೊಂಡ ಹುಡುಗ ತುಂಬಾ ಗಾಬರಿಯಾಗಿ ಈತನನ್ನು ಮತ್ತೆ ವಿನಂತಿ ಮಾಡಿಕೊಳ್ಳುತ್ತಾನೆ. ಆತನು ಮಾಡಿರುವ ವಿನಂತಿಯ ಪರಿ ನೋಡಿದರೆ ನೀವು ಸಹ ನಗುವಿರಿ ಅಂತಹ ಭಾಷೆಯನ್ನು ಉಪಯೋಗ ಮಾಡಿದ್ದಾನೆ ಈ ವಿಪರೀತ ಹುಡುಗ.

ವೀಡಿಯೋ ನೋಡಿ.


ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ p_u_t_t_i_c_r_e_a_t_i_o_n ಎಂಬ ಹೆಸರಿನ ಮೂಲಕ ಶೇರ್ ಮಾಡಿದ್ದಾರೆ. ಇದುವರೆಗೆ ಈ ವಿಡಿಯೋವನ್ನು ಸುಮಾರು ಮೂರು ಲಕ್ಷಕ್ಕಿಂತ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಸುಮಾರು ಐವತ್ತೇಳು ಸಾವಿರರಷ್ಟು ಜನರು ಲೈಕ್ ಮಾಡಿದ್ದಾರೆ.