Articles

ಕಾಂತಾರ್ ಸಿನಿಮಾ ನೋಡುತ್ತಲೇ ಪ್ರೇಕ್ಷಕನ ಮೈಮೇಲೆ ದೈವದ ಆವೇಶ, ಇದು ರೀಲ್ ಅಲ್ಲ ರೀಯಲ್! ವೀಡಿಯೋ ನೋಡಿ!!!

ಸದ್ಯಕ್ಕೆ ಇಡೀ ಜಗತ್ತಿನಾದ್ಯಂತ ಒಂದು ಚಲನಚಿತ್ರ ಕುರಿತು ತುಂಬಾನೇ ಚರ್ಚೆ ನಡೆಯುತ್ತಿದೆ. ಇಂತಹ ಅದ್ಭುತವಾದ ಚಲನಚಿತ್ರ ನಿರ್ಮಾಣವಾಗಿದ್ದು ಕನ್ನಡ ಚಿತ್ರರಂಗದಲ್ಲಿ. ಕಳೆದ ಕೆಲವು ವರ್ಷಗಳಿಂದ ಹಿಡಿದು ಕನ್ನಡ ಚಿತ್ರರಂಗದ ಸಿನಿಮಾಗಳು ಇಡೀ ಜಗತ್ತಿನಾದ್ಯಂತ ತಮ್ಮ ರಾಜ್ಯವನ್ನು ನಡೆಸುತ್ತಿವೆ. ಕೆ ಜಿ ಎಫ್ ನಿಂದಾಗಿ ಇಡೀ ಜಗತ್ತೇ ಕನ್ನಡ ಚಿತ್ರರಂಗದ ಕುರಿತು ಜನರು ತುಂಬಾನೇ ಹಾಡಿ ಹೊಗಳಿದರು. ಹೊಂಬಾಳೆ ಪ್ರೋಡೆಕ್ಷನ್ ಸದ್ಯಕ್ಕೆ ಇದೊಂದು ಬ್ರ್ಯಾಂಡ್ ಆಗಿದೇ. ಹಿಂದಿ ಯಲ್ಲಿ ಹೇಗೆ ಯಶ್ ರಾಜ್ ಫಿಲ್ಮ್, ಧರ್ಮಾ ಪ್ರೋಡೆಕ್ಷನ್ ಇವೆಯೋ ಅದೇ ರೀತಿ ಇಂದು ಹೊಂಬಾಳೆ ಕೂಡಾ ಸೂಪರ್ ಬ್ರ್ಯಾಂಡ್ ಆಗಿದೆ.

ಕೆ ಜಿ ಎಫ್ ಚಿತ್ರದ ಎರಡು ಭಾಗಗಳ ಹಿಟ್ ಆದ ನಂತರ ಇದೀಗ ಮತ್ತೊಂದು ಕನ್ನಡದ ಚಿತ್ರ ಸಿನಿಮಾ ಸೃಷ್ಟಿಯಲ್ಲಿ ರಾಜ್ಯವಾಳುತ್ತಿದೆ. ಆ ಚಿತ್ರ ಯಾವುದೆಂದರೆ ‘ಕಾಂತಾರ್’. ಹೌದು ಈ ಸಿನಿಮಾ ಇಡೀ ಚಿತ್ರರಂಗದಲ್ಲಿ ಒಂದು ಅದ್ಭುತವಾದ ರೆಕಾರ್ಡ್ ಮಾಡುತ್ತಿದೆ. ಋಷಬ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಎಲ್ಲ ಚಿತ್ರಗಳು ತುಂಬಾನೇ ಸೂಪರ್ ಹಿಟ್ ಆಗಿವೆ. ಅದರಲ್ಲಿ ಸೂಪರ್ ಡುಪರ್ ಆಗಿ ಹಿಟ್ ಆದ ಮೂವಿಯಂದರೆ ಕಾಂತಾರ್. ಈ ಚಿತ್ರ ಸುಮಾರು ಐದು ಭಾಷೆಗಳಲ್ಲಿ ರೀಲಿಜ ಆಗಿದ್ದು ಐದು ಭಾಷೆಗಳಲ್ಲಿ ಸಹ ತುಂಬಾನೇ ಮೆಚ್ಚುಗೆ ಪಡೆದಿದೆ. ಈ ಚಿತ್ರ ಮತ್ತೊಮ್ಮೆ ಕನ್ನಡದ ಹಿಟ್ ಮೂವಿ ಅಂತ ತೋರಿಸಿಕೊಟ್ಟಿದೆ.

ಈ ಚಿತ್ರದಲ್ಲಿಯ ಎಲ್ಲ ಸೀನ್ ಗಳು ತುಂಬಾನೇ ಹಿಟ್ ಇವೆ. ಇವು ಹಳ್ಳಿಯ ಸಂಸ್ಕೃತಿಯನ್ನು ಮತ್ತೊಮ್ಮೆ ನೆನಪಿಸಿ ಕೊಡುತ್ತಿವೆ. ಈ ಚಿತ್ರ ನೋಡಿದ ಕೂಡಲೇ ಮೈಯಲ್ಲಿ ಒಂಥರಾ ಸೆಳೆತ ನಿರ್ಮಾಣವಾಗುತ್ತದೆ. ಈ ಸಿನಿಮಾ ನೋಡುತ್ತಲೇ ಮೈಯಲ್ಲಿ ದೇವರು ಸಹ ಆವೇಶ ವಾಗುವದು ಅದಕ್ಕೆ ಈ ಉದಾಹರಣೆಯೇ ಸಾಕ್ಷಿ. ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾಂತಾರ್ ಸಿನಿಮಾ ನೋಡುತ್ತಿರುವಾಗ ಒಬ್ಬ ಪ್ರೇಕ್ಷಕನ ಮೈಯಲ್ಲಿ ದೇವರ ಆವೇಶವಾಗುತ್ತದೆ. ಸಿನಿಮಾದಲ್ಲಿ ದೇವರ ಬಂದ ಸೀನ್ ನಡೆದಿರುತ್ತದೆ. ಅದನ್ನು ಕಂಡು ಪ್ರೇಕ್ಷಕನ ಮೈಯಲ್ಲಿ ದೇವರ ಆವೇಶ ಬಂದು ಆತನು ಸಹ ಕುಂತ ಖುರ್ಚಿಯ ಮೇಲಿಂದ ಎದ್ದು ದೈವ ಬಂದ ಹಾಗೆ ವರ್ತಿಸುತ್ತಾನೆ ಇದನ್ನು ಕಂಡು ಬದಿಗೆ ಕುಳಿತುಕೊಂಡ ಪ್ರೇಕ್ಷಕರು ಸಹ ತುಂಬಾನೇ ಹೆದರುತ್ತಾರೆ.

ನೋಡಿ ವೀಡಿಯೋ

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಈ ವೀಡಿಯೋ ಸುಮಾರು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ.

Leave a Comment

Your email address will not be published. Required fields are marked *