Articles

ಕುದುರೆಯ ಆಲಸ್ಯತನ ನೋಡಿ ಬಿದ್ದು ಬಿದ್ದು ನಗುವಿರಿ; ಇಂಥ ಕುದುರೆ ಇಲ್ಲಿಯೇ ನೋಡಿ ಬೇರೆಲ್ಲೂ ಸಿಗದು!

ಕುದುರೆ ಎಂದರೆ ಶಕ್ತಿ, ಕುದುರೆ ಎಂದರೆ ಚೈತನ್ಯ, ಕುದುರೆ ಎಂದರೆ ವೇಗ ಎಂದೆಲ್ಲ ಅಭಿಮಾನದಿಂದ ಹೋಲಿಸಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಕುದುರೆ ಮನುಷ್ಯನ ಜೀವನದೊಡನೆ ಹಾಸುಹೊಕ್ಕಾಗಿ ಬೆಸೆದು ಹೋಗಿದೆ. ಇತಿಹಾಸವೇ ಆಗಲಿ ನಾಗರಿಕತೆಯ ವಿಕಾಸದ ವಿಶ್ಲೇಷಣೆಯೇ ಆಗಲಿ ಕುದುರೆಯ ಪ್ರಸ್ತಾಪವಿಲ್ಲದಿದ್ದರೆ ಅದು ಅಪೂರ್ಣವಾಗಿಬಿಡುತ್ತೆ. ಅನಾಗರಿಕತೆಯಿಂದ ನಾಗರಿಕತೆಯೆಡೆಗಿನ ಮಾನವನ ನಡೆಯಲ್ಲಿ ಆತನ ಹೆಜ್ಜೆಯ ಗುರುತುಗಳೊಡನೆ ಕುದುರೆ ಗೊರಸಿನ ಗುರುತುಗಳೂ ಜೊತೆಯಾಗಿಯೇ ಬಂದಿವೆ. ಇದು ಭಾರ ಹೊರಲು, ಸವಾರಿ ಮಾಡಲು, ವ್ಯವಸಾಯದಲ್ಲಿ ನಾನಾ ಬಗೆಯ ಕೆಲಸಗಳನ್ನು ನಿರ್ವಹಿಸಲು ಮೊದಲಿನಿಂದಲೂ ತುಂಬಾ ಉಪಯುಕ್ತ ಹಾಗೂ ಸರ್ವಶಕ್ತ ಪ್ರಾಣಿ ತಿಳಿಯಲಾಗಿದೆ. ನಮಗೆ ತಿಳಿದಿರುವ ಹಾಗೆ ಕುದುರೆ ತನ್ನ ಜೀವಿತಾವಧಿಯಲ್ಲಿ ಎಂದಿಗೂ ಕುಳಿತುಕೊಳ್ಳುವುದಿಲ್ಲ, ಮತ್ತು ಅಡ್ಡಲಾಗಿ ಮಲಗುವುದಿಲ್ಲ. ಆದರೆ ಇಲ್ಲಿ ನೋಡುವ ಕುದುರೆ ನಿಮಗೆ ದಿಗ್ಭ್ರಮೆ ಮಾಡುವದರಲ್ಲಿ ಸಂಶಯವಿಲ್ಲ. ಕಾರಣ ಇಂಥ ಆಲಸ್ಯದಿಂದ ಕೂಡಿದ ಕುದುರೆ ಕೇವಲ ನೀವಿಲ್ಲಿಯೇ ನೋಡಲಿದ್ದೀರಿ ಬೇರೆಲ್ಲೂ ಇಲ್ಲ.

ಪ್ರಸ್ತುತ ವಿಡಿಯೋದಲ್ಲಿ ಕುದುರೆಯೊಂದು ತುಂಬಾ ವಿಚಿತ್ರವಾದ ದೃಶ್ಯದಲ್ಲಿ ಕಂಡು ಬರುತ್ತಿದೆ. ಕಾರಣ ಕುದುರೆಯ ಈ ರೂಪ ನೀವೆಲ್ಲಿಯೂ ನೋಡಲು ಸಾಧ್ಯವಿಲ್ಲ. ಕುದುರೆ ತನ್ನ ಹುಟ್ಟಿನಿಂದ ಸಾವಿನವರೆಗೆ ಎಂದಿಗೂ ಕುಳಿತುಕೊಳ್ಳುವುದಿಲ್ಲ. ಅಪರೂಪಕ್ಕೆ ಅದು ಗಾಯಗೊಂಡಾಗ ಮತ್ತು ಹುಷಾರಿಲ್ಲದ ಸಂದರ್ಭದಲ್ಲಿ ಮಾತ್ರ ನೆಲಕ್ಕೆ ಬಿದ್ದಿರುವುದು ಕಂಡು ಬರುತ್ತದೆ. ಕುಳಿತುಕೊಳ್ಳುವ ಕುದುರೆ ಅದು ಕುದುರೆಯೇ ಅಲ್ಲವೆಂದು ಹೇಳಲಾಗುತ್ತದೆ. ಮತ್ತು ಮಾರಾಟದಲ್ಲಿ ಅದಕ್ಕೆ ಮೂರು ಕಾಸಿನ ಬೆಲೆಗೂ ಯಾರು ಕೇಳುವುದಿಲ್ಲ. ಅಂಥದ್ದರಲ್ಲಿ ಟ್ವಿಟರ್ನಲ್ಲಿ ವೈರಲ್ ಆದ ಈ ವಿಡಿಯೋ ನೋಡಿದಾಗ ನಿಮಗೆ ಆಶ್ಚರ್ಯ ವೆನಿಸಬಹುದು. ಕಾರಣ ಈ ಕುದುರೆಯ ಆರೋಗ್ಯ ಎಲ್ಲವೂ ಚೆನ್ನಾಗಿದ್ದರೂ ಮಲಗಿಕೊಂಡೇ ಹುಲ್ಲು ಮೆಯುತ್ತಿದೆ. ಇದು ನೋಡಲು ತುಂಬಾ ವಿಚಿತ್ರವಾಗಿದೆ.

ನೋಡಿ ಈ ವಿಡಿಯೋ…

https://twitter.com/buitengebieden/status/1575222013190639616?t=Vz_ZJ15Fd2Wg4dMbEdXtRQ&s=08

ಪ್ರಸ್ತುತ ನಂಬಲಿಕ್ಕೇ ದೂರವಾದ ಈ ವೀಡಿಯೋವನ್ನು ಟ್ವಿಟರ್ ನಲ್ಲಿ buitengebieden ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಶೇರ್ ಮಾಡಿದ 6 ರಿಂದ 7 ಗಂಟೆಗಳಲ್ಲಿ 6 ಲಕ್ಷ ಜನರು ಈ ವೀಡಿಯೋವನ್ನು ನೋಡಿದ್ದಾರೆ. ಹಾಗೂ ಸುಮಾರು 40 ಸಾವಿರ ಮೆಚ್ಚುಗೆಗಳನ್ನು ನೀಡಿದ್ದಾರೆ.

Leave a Comment

Your email address will not be published. Required fields are marked *