Articles

ನಾಯಿಯ ಕುತ್ತಿಗೆ ಹಿಡಿದು ತೊಂದರೆ ಕೊಡುತ್ತಿದ್ದ ಮನುಷ್ಯನ ಕಂಡು ಆಕಳು ಮಾಡಿದ್ದೇನು? ನೋಡಿ ವೈರಲ್ ವಿಡಿಯೋ!

ನೀವು ಯಾವ ರೀತಿಯಾಗಿ ಕರ್ಮ ಮಾಡುವಿರಿ ಅದಕ್ಕೆ ತಕ್ಕ ಹಾಗೆ ಪ್ರತಿಫಲ ಸಿಗುತ್ತದೆ. ಈ ವಿಡಿಯೋ ನೋಡಿದ ಮೇಲೆ , ನಿಮ್ಮ ಕೆಲಸದ ಪ್ರತಿಫಲ ಆಗಿಂದಾಗ್ಗೆ ಸಿಗುತ್ತದೆ ಎಂಬುದು ಅರಿವಾಗುತ್ತದೆ. ಈ ವಿಷಯದ ಕುರಿತು ಉದಾಹರಣೆ ನೀಡುವ ಒಂದು ವಿಡಿಯೋ IFS ಅಧಿಕಾರಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಈ ಮೂಕಪ್ರಾಣಿಗೆ ಸಹಾಯ ಮಾಡಲು ಯಾರೂ ಬರದಿದ್ದಾಗ ಬೇರೆ ಮೂಕ ಪ್ರಾಣಿ ಬರುತ್ತದೆ. ತೊಂದರೆಗೆ ಸಿಕ್ಕ ನಾಯಿಯ ಸಹಾಯಕ್ಕೆ ಹಸುವೊಂದು ಓಡೋಡಿ ಬರುತ್ತದೆ.

ಪ್ರಸ್ತುತ ವಿಡಿಯೋವನ್ನು IFS ಅಧಿಕಾರಿ ಸುಶಾಂತ್ ನಂದಾ ಅವ್ರು ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕ ಶೇರ್ ಮಾಡಿದ್ದಾರೆ. ವಿಡಿಯೋ ಶೇರ್ ಮಾಡುವಾಗ ‘ಕರ್ಮಾ’ ಅಂತ ಶೀರ್ಷಿಕೆ ನೀಡಿದ್ದಾರೆ. ಪ್ರಸ್ತುತ ವಿಡಿಯೋವನ್ನು ಇದುವರೆಗೆ ಎರಡು ಲಕ್ಷಕ್ಕಿಂತಾ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. 16 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋಗೆ ಲೈಕ್ ಮಾಡಿದ್ದಾರೆ ಅಷ್ಟೇ ಅಲ್ಲ ನೂರಕ್ಕೂ ಹೆಚ್ಚು ನೆಟ್ಟಿಗರು ಈ ವಿಡಿಯೋ ಕುರಿತು ಕಾಮೆಂಟ್ ಮಾಡಿದ್ದಾರೆ.

ಈ ವೈರಲ್ ವಿಡಿಯೋ ದಲ್ಲಿ ನೀವು ನೋಡಬಹುದು. ಒಬ್ಬ ವ್ಯಕ್ತಿ ನಾಯಿಯ ಕಿವಿಯನ್ನು ಹಿಡಿದು ಅದನ್ನು ಮೇಲಕ್ಕೆ ಎತ್ತುವ ಪ್ರಯತ್ನ ಮಾಡುತ್ತಿದ್ದಾನೆ. ಪಾಪ ನಾಯಿ ನೋವಿನಿಂದ ಚಿರಾಡುತ್ತಿರುತ್ತದೆ. ನಮ್ಮ ಕಿವಿಗಳನ್ನು ಯಾರಾದರೂ ಹಿಡಿದರೆ ಸಾಕು ಎಷ್ಟು ಸಂಕಟ ಆಗುವದು ಎಂಬುದು ನಮಗೆಲ್ಲ ತಿಳಿದ ಸಂಗತಿಯಾಗಿದೆ. ಆದರೆ ಮೂಕ ಪ್ರಾಣಿ ತಾನು ಯಾರಿಗೆ ಹೇಳಬೇಕು. ಕಿವಿಯನ್ನು ಹಿಡಿದು ಮೇಲೆಕ್ಕೆ ಎತ್ತುವ ಸಮಯದಲ್ಲಿ ನೋವು ಹೆಚ್ಚಾಗಿ ನಾಯಿ ಇನ್ನಷ್ಟು ಚಿರಲು ಪ್ರಯತ್ನ ಮಾಡುತ್ತದೆ ಆದರೆ ಇದನ್ನು ಅರಿಯದ ಮನುಷ್ಯ ಅದಕ್ಕೆ ಮತ್ತೆ ಮೇಲೆತ್ತುವ ಪ್ರಯತ್ನ ಮಾಡುತ್ತಾನೆ.

ವಿಡಿಯೋ ನೋಡಿ

ಬೇರೆಯವರ ಸಹಾಯ ಪಡೆಯಲು ನಾಯಿ ಕೂಗುತ್ತಿರುತ್ತದೆ. ಆದರೆ ಅಲ್ಲಿದ್ದವರಲ್ಲಿ ಯಾರೂ ಸಹ ಈ ಮೂಕ ಪ್ರಾಣಿಯ ಸಹಾಯಕ್ಕೆ ಬರಲಿಲ್ಲ. ಆದರೆ ಅಲ್ಲಿ ಒಂದು ಚಮತ್ಕಾರ ನಡೆಯುತ್ತದೆ. ಈ ಮೂಕ ಪ್ರಾಣಿಯ ಚೀರಾಟ ಆಲಿಸಿದ ಅಲ್ಲಿದ್ದ ಒಂದು ಹಸು ಇದರ ಸಹಾಯಕ್ಕೆ ಓಡೋಡಿ ಬರುತ್ತದೆ. ಓಡಿ ಬಂದು ನಾಯಿಯನ್ನು ಹಿಡಿದ ವ್ಯಕ್ತಿಗೆ ಜೋರಾಗಿ ಹಾಯುತ್ತದೆ. ಹಸು ಹಾದ ತಕ್ಷಣ ಆತನ ಕೈಯಲ್ಲಿದ್ದ ನಾಯಿ ಕೆಳಗಡೆ ಬಿದ್ದು ಆತನಿಂದ ತಪ್ಪಿಸಿಕೊಂಡು ಹೋಗುತ್ತದೆ. ಆದರೆ ರೊಚ್ಚಿಗೆದ್ದ ಹಸು ಜೋರಾಗಿ ಬಂದು ಆತನಿಗೆ ಹಾಯ್ದು ಕೆಳಗಡೆ ಬಿಳಿಸಿ ಆತನಿಗೆ ಹೊಡೆಯಲು ಪ್ರಾರಂಭ ಮಾಡುತ್ತದೆ.

ಈ ವಿಡಿಯೋದಿಂದ ತಿಳಿದು ಬರುವದೇನೆಂದರೆ ನೀವು ಯಾವ ರೀತಿ ಕರ್ಮ ಮಾಡುವಿರಿ ಅದರಂತೆಯೇ ಪ್ರತಿಫಲವಾಗಿ ನಿಮಗೆ ಸಿಗುವದು, ನೀವು ಒಳ್ಳೆಯದನ್ನು ಮಾಡಿದರೆ ನಿಮಗೆ ಒಳ್ಳೆಯ ಫಲವೇ ಸಿಗುವದು, ಬೇರೆಯವರಿಗೆ ಕೆಟ್ಟದ್ದನ್ನು ಮಾಡಿದರೆ ಅದರ ಪ್ರತಿಫಲ ಕೆಟ್ಟದ್ದೇ ಸಿಗುವದು. ಆದ್ದರಿಂದ ನಾವು ಮಾಡುವಂತ ಕರ್ಮ ಭಗವಂತನಿಗೆ ಮೆಚ್ಚುವಂತಿರುಬೇಕು.

Leave a Comment

Your email address will not be published. Required fields are marked *