Articles

OMG! ಮನೆಯ ಒಳಗೆ ಬರಲು ದಾರಿ ಹುಡುಕುತ್ತಿದ್ದ ಮೊಸಳೆ; ಅಂಜದೆ ದಿಟ್ಟತನದಿಂದ ಎದುರಿಸಿದ ಬೆಕ್ಕು!

ಸೋಶಿಯಲ್ ಮೀಡಿಯಾದಲ್ಲಿ ಪ್ರತಿ ದಿನವೂ ಕೂಡಾ ಒಂದಲ್ಲಾ ಒಂದು ವೀಡಿಯೋ, ಪೋಟೋ ಅಥವಾ ಇನ್ನಾವ ಇದು ಸುದ್ದಿ ವೈರಲ್ ಆಗುತ್ತಲೇ ಇರುತ್ತವೆ. ಹೀಗೆ ವೈರಲ್ ಆಗುವ ಘಟನೆಗಳು ಇಡೀ ವಿಶ್ವದ ಗಮನವನ್ನು ಕೂಡಾ ಸೆಳೆಯುವುದು ಸಹಜ. ಈಗ ಇಂತಹುದೇ ಒಂದು ಫೋಟೋ ಸೋಶಿಯಲ್ ಮೀಡಿಯಾದ ಲ್ಲಿ ಸಾಕಷ್ಟು ವೈರಲ್ ಆಗುತ್ತಾ ಒಂದು ಸಂಚಲನವನ್ನು ಸೃಷ್ಟಿ ಮಾಡಿದೆ. ಸಂಚಲನ ಸೃಷ್ಟಿಸಿರುವ ಈ ಫೋಟೋದ ವಿಶೇಷತೆ ಏನೆಂದರೆ ಇದರಲ್ಲಿ ಮನೆಯಲ್ಲಿ ಸಾಕಿದ ಬೆಕ್ಕಿನ ಧೈರ್ಯ ಹಾಗೂ ಸಾಹಸವನ್ನು ನೋಡಿ ನೆಟ್ಟಿಗರು ಆಶ್ಚರ್ಯ ವನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಆ ಬೆಕ್ಕಿನ ಅಪರೂಪದ ಫೋಟೋ ವನ್ನು ಹಂಚಿಕೊಳ್ಳುತ್ತಾ ಸಾಗುತ್ತಿದ್ದಾರೆ. ಹಾಗಾದರೆ ಏನು ಆ ಬೆಕ್ಕಿನ ಫೋಟೋದ ಹಿಂದೆ ಇರುವ ರೋಚಕ ಕಥೆ ಎನ್ನುವುದನ್ನು ತಿಳಿಯೋಣ ಬನ್ನಿ.

ಅಮೆರಿಕಾದ ಫ್ಲೊರಿಡಾ ದಲ್ಲಿ ನಿವಾಸ ಮಾಡುವವರಿಗೆ ಮೊಸಳೆಗಳನ್ನು ಎದುರಿಸುವುದು ಹೊಸ ವಿಷಯವೇನಲ್ಲ. ಇಲ್ಲಿನವರು ಆಗಾಗ ಮೊಸಳೆಗಳನ್ನು ಎದುರಿಸುವ ಪರಿಸ್ಥಿತಿ ಇರುವುದು ಕೂಡಾ ಸಾಮಾನ್ಯ.
ಆದರೆ ಫ್ಲೋರಿಡಾದ ಸಾರಾಸೋಟ ದ ಒಂದು ಕುಟುಂಬಕ್ಕೆ ಮಾತ್ರ ಮೊಸಳೆಯನ್ನು ಕಂಡಾಗ ಭ ಯ ಆಗಿದ್ದು ಸಹಜ, ಏಕೆಂದರೆ ಒಂದು ಭಾರೀ ಗಾತ್ರದ ಮೊಸಳೆ ಅವರ ಮನೆಯ ಮುಚ್ಚಿದ್ದ ಮುಂಬಾಗಲಿನ ಮೇಲೆ ಏರಲು ತೊಡಗಿತ್ತು, ಈ ದೃಶ್ಯವನ್ನು ನೋಡಿದ ಮನೆಯೊಳಗಿದ್ದ ಕುಟುಂಬದವರು ಭ ಯ ಭೀ ತರಾಗಿದ್ದರು. ಬಾಗಿಲ ಮೇಲೆ ಅಳವಡಿಸಲಾಗಿದ್ದ ಗಾಜಿನ ಮೇಲೆ ಮೊಸಳೆ ಪೂರ್ತಿಯಾಗಿ ಮೇಲೇರಿತ್ತು.

ಈ ಅನಿರೀಕ್ಷಿತ ಘಟನೆಯಿಂದ ಇಡೀ ಕುಟುಂಬದ ಸದಸ್ಯರು ಬಹಳ ಭ ಯ ಭೀ ತ ರಾಗಿದ್ದರೆ, ಅವರ ಮನೆಯಲ್ಲಿ ಅವರು ಸಾಕಿದ್ದ ಬೆಕ್ಕಿಗೆ ಮಾತ್ರ ಅದರ ಯಾವುದೇ ಪರಿವೆಯೂ ಇಲ್ಲದೇ ನಿರ್ಭೀತಿಯಿಂದ ಅದು ಮನೆಯೊಳಗೆ ಮುಚ್ಚಿರುವ ಬಾಗಿಲಿನ ಇನ್ನೊಂದು ಬದಿಯಲ್ಲಿ ಕುಳಿತು ಬಹಳ ಶಾಂತ ಚಿತ್ತವಾಗಿ ಬಾಗಿಲ ಮೇಲೆ ಏರುತ್ತಿರುವ ಮೊಸಳೆಯನ್ನು ಗಮನಿಸುತ್ತಿದೆ. ಬೆಕ್ಕು ಬಲು ಧೈರ್ಯದಿಂದ, ನಿರ್ಭಿತವಾಗಿ ಮೊಸಳೆ ಮೇಲೆರುವುದನ್ನು ಕುಳಿತು ನೀಡುತ್ತಿರುವುದನ್ನು ಕಂಡು ಮನೆಯ ಸದಸ್ಯರು ಆಶ್ಚರ್ಯ ಚಕಿತರಾಗಿದ್ದಾರೆ. ಬೆಕ್ಕಿನ ಆ ವರ್ತನೆ ನೋಡಿ ಅವರೆಲ್ಲಾ ಮೊಸಳೆಯ ಭ ಯ ದ ನಡುವೆಯೇ ಬೆಕ್ಕಿನ ಧೈರ್ಯ ನೋಡಿ ಬೆರಗಾಗಿದ್ದಾರೆ.

ಕೂಡಲೇ ಕುಟುಂಬದ ಸದಸ್ಯರು ಆ ಕ್ಷಣವನ್ನು ಹಾಗೆ ಬಿಡಬಾರದು, ಅದೊಂದು ನೆನಪಾಗಿ ಉಳಿಯಬೇಕೆಂದು ಸಮಯವನ್ನು ವ್ಯರ್ಥ ಮಾಡದೇ
ಕ್ಯಾಮೆರಾದಲ್ಲಿ ಆ ದೃಶ್ಯವನ್ನು ಕ್ಲಿಕ್ ಮಾಡಿ ಬಂ ಧಿ ಸಿದ್ದಾರೆ‌. ಬೆಕ್ಕು ಬಾಗಿಲಿನ ಇನ್ನೊಂದು ಬದಿಯಲ್ಲಿ ಕುಳಿತು ಬಹಳ ಆಸಕ್ತಿಯಿಂದ ಮೊಸಳೆಯನ್ನು ನೋಡುತ್ತಿರುವ ಈ ಫೋಟೋವನ್ನು ಅವರು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ. ಹೀಗೆ ಅವರಿಂದ ಫೋಟೋ ಪಡೆದ ಇಲಿನಾಯ್ಸ್ ನ ಎಡ್ ವರ್ಡೆಂಲ್ ಎನ್ನುವವರು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಆಗಿನಿಂದ ಈ ಫೋಟೋ 98 ಸಾವಿರ ಶೇರ್ ಆಗಿದ್ದು, 7600 ಕ್ಕಿಂತ ಅಧಿಕ ರಿಯಾಕ್ಷನ್ ಗಳು ಈ ಫೋಟೋಗೆ ದೊರೆತಿದೆ.

ಅಂದಹಾಗೆ, ಫ್ಲೋರಿಡಾದ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಆಯೋಗದ ಪ್ರಕಾರ, ಫ್ಲೋರಿಡಾದ ಎಲ್ಲಾ 67 ಕೌಂಟಿಗಳನ್ನು ಒಳಗೊಂಡಂತೆ ಅಲ್ಲಿ ಒಟ್ಟು 1.3 ದಶಲಕ್ಷ ಮೊಸಳೆಗಳಿವೆ, ಅವು ಅಲ್ಲಿನ ಜನರೊಂದಿಗೆ ಆಗಾಗ ಸಂಪರ್ಕಕ್ಕೆ ಬರುತ್ತವೆ. ಇವು ಸುಮಾರು 6 ರಿಂದ 12 ಅಡಿ ಉದ್ದದವರೆಗೂ ಬೆಳೆದು 50 ವರ್ಷಗಳ ಕಾಲ ಬದುಕಬಹುದು ಎನ್ನುತ್ತದೆ FWC. ಇವು ಕೊಳಗಳು, ಜೌಗು ಪ್ರದೇಶಗಳು, ನದಿಗಳು, ಶುದ್ಧ ನೀರಿನ ಪ್ರದೇಶಗಳು ಹಾಗೂ ಕೆಲವೊಮ್ಮೆ ಉಪ್ಪು ನೀರಿನಲ್ಲಿ ಯೂ ಸಹಾ ವಾಸಿಸುತ್ತವೆ ಎನ್ನಲಾಗಿದೆ. ಫ್ಲೊರಿಡಾ ದ ಕಾನೂನಿನ ಪ್ರಕಾರ ಮೊಸಳೆಗೆ ಆಹಾರ ನೀಡುವುದು, ಕೊ ಲ್ಲುವುದು, ಹಿಂ ಸೆ ನೀಡುವುದು, ಅವುಗಳನ್ನು ಇಟ್ಟುಕೊಳ್ಳುವುದು ಅ ಪ ರಾ ಧ ವಾಗಿದ್ದು, ಅವುಗಳಿಂದ ತೊಂದರೆಯಾದರೆ ಸಹಾಯವಾಣಿ ಮೂಲಕ ನೆರವನ್ನು ಪಡೆಯಬಹುದಾಗಿದೆ.

Leave a Comment

Your email address will not be published. Required fields are marked *