Video; ಜೀವನದಲ್ಲಿರಬೇಕು ಈ ಲೆವೆಲ್ ಕಾನ್ಫಿಡೆನ್ಸ್! ಚಿಕ್ಕ ಹುಡುಗನ ಡಾನ್ಸ್ ನಲ್ಲಿ ತೋರಿದ ಕಾನ್ಫಿಡೆನ್ಸ್ ಲೇವಲ್ ನೋಡಿ.

ಸೋಶಿಯಲ್ ಮೀಡಿಯಾದಲ್ಲಿ ಎಲ್ಲರಿಗೂ ಇಷ್ಟವಾಗುವ ಸೈಟ್ ಎಂದರೆ instagram. ಇನ್ಸ್ಟಾಗ್ರಾಮ್ ನಲ್ಲಿ ನೇಟಿಜನ್ ಒಮ್ಮೆ ಸೇರಿಕೊಂಡರೆ ಆಯ್ತು ಹೊತ್ತು ಸರಿದದ್ದೇ ಗೊತ್ತಾಗುವುದಿಲ್ಲ. ಇಲ್ಲಿ ಎಲ್ಲರಿಗೂ ಎಲ್ಲ ತರದ ಕಂಟೆಂಟ್ ಗಳು ಸಿಗುತ್ತವೆ. ಹೀಗಾಗಿ ಒಂದರ ನಂತರ ಒಂದು ವಿಡಿಯೋಗಳನ್ನು ಸ್ಕ್ರೋಲ್ ಮಾಡುತ್ತಾ ಮಾಡುತ್ತಾ ಮಾಡುತ್ತಾ ಟೈಮ್ ಪಾಸ್ ಆದದ್ದೇ ಗೊತ್ತಾಗುವುದಿಲ್ಲ.

ಸದ್ಯ instagram ನಲ್ಲಿ ವೈರಲ್ ಆಗುತ್ತಿರುವ ಒಂದು ವಿಡಿಯೋವನ್ನು ನಿಮಗಾಗಿ ತಂದಿದ್ದೇವೆ. ಪ್ರಸ್ತುತ ಈ ವಿಡಿಯೋವನ್ನು “ಜಿಂದಗಿ ಎಕ್ ಸಫರ್ ಹೈ” ಹೆಸರಿನ ಖಾತೆಯಿಂದ ಶೇರ್ ಮಾಡಲಾಗಿದೆ. ಹುಡುಗನ ಈ ವಿಡಿಯೋ ನೆಟ್ಟಿಗರ ಮೇಲೆ ತುಂಬಾ ಪ್ರಭಾವ ಬೀರಿದೆ. ಅಂತಹ ಯಾವ ವಿಶೇಷ ಸಂಗತಿ ಈ ವಿಡಿಯೋದಲ್ಲಿ ಅಡಗಿದೆ ಎಂಬುದನ್ನು ನೋಡೋಣ ಬನ್ನಿ.

ಈ ವಿಡಿಯೋದಲ್ಲಿ ಕಂಡು ಬರುತ್ತಿರುವ ಹುಡುಗನ ವಯಸ್ಸು ಸುಮಾರು 7 ರಿಂದ 8 ವರ್ಷ ಇರಬಹುದು. ಈ ವಿಡಿಯೋ ಸರಕಾರಿ ಶಾಲೆಯಲ್ಲಿಯದೆಂದು ತಿಳಿದು ಬರುತ್ತದೆ. ಸಹ ವಿದ್ಯಾರ್ಥಿಗಳೆಲ್ಲರೂ ಗೋಡೆಗೆ ಆನಿಸಿ ಸುತ್ತಲೂ ಕುಳಿತಿದ್ದಾರೆ. ಮಧ್ಯದಲ್ಲಿ ಹುಡುಗನೊಬ್ಬ ಡಾನ್ಸ್ ಮಾಡುತ್ತಿದ್ದಾನೆ. ಆತನ ಡಾನ್ಸ ಸ್ಟೈಲ್ ಯಾವ ರೀತಿಯಾಗಿ ವರ್ಣಿಸಬೇಕೆಂಬುದೇ ತಿಳಿಯುತ್ತಿಲ್ಲ. ಹುಡುಗ ತನ್ನ ಡಾನ್ಸ್ ನಲ್ಲಿ ಎಷ್ಟೊಂದು ಮಗ್ನನಾಗಿ ಹಾಗೂ ನಿರ್ಭಯತೆಯಿಂದ ಹೆಜ್ಜೆ ಹಾಕುತ್ತಿದ್ದಾನೆ ನೋಡಿ. ಮಕ್ಕಳಲ್ಲಿ ಈ ರೀತಿಯ ಈ ಲೇವಲ್ ಕಾನ್ಫಿಡೆನ್ಸ್ ಈ ವಯಸ್ಸಿನಲ್ಲಿ ಇರುವುದೆಂದರೆ ಅಥ್ವಾ ಕಂಡು ಬರುವದೆಂದರೆ ತುಂಬಾ ಕಡಿಮೆ. ವಿಶೇಷವೆಂದರೆ ಈ ಹುಡುಗ ಹಳ್ಳಿಯವನಾಗಿದ್ದಾನೆ. ನಗರ ಪಟ್ಟಣಗಳಲ್ಲಿ ವಾಸಿಸುವ ಹುಡುಗರು ಸ್ವಲ್ಪ ಡೇರಿಂಗ್ ಮಾಡಿದರೂ ಮಾಡಬಹುದು. ಆದರೆ ಹಳ್ಳಿಯ ಮಕ್ಕಳು ಈ ರೀತಿ ವರ್ತಿಸುವುದು ಸೋಜಿಗದ ಸಂಗತಿ. ಈತನ ಡಾನ್ಸ್ ನೋಡಿ ನಿಜಕ್ಕೂ ಆಶ್ಚರ್ಯವಾಗುತ್ತದೆ.

ನೋಡಿ ಹುಡುಗನ ಸೂಪರ್ ಡಾನ್ಸ್.

Instagram ನಲ್ಲಿ ವೈರಲ್ ಆಗುತ್ತಿರುವ ಹುಡುಗನ ಈ ವಿಶೇಷ ಡಾನ್ಸ್ ನೋಡಿ ಸಾವಿರಕ್ಕೂ ಹೆಚ್ಚು ಜನರು ತಮ್ಮ ಪ್ರತಿಕ್ರಿಯೆಗಳನ್ನು ಕಮೆಂಟ್ ರೂಪದಲ್ಲಿ ವ್ಯಕ್ತ ಮಾಡಿದ್ದಾರೆ. ಒಬ್ಬ ಯೂಸರ್ ತನ್ನ ಪ್ರತಿಕ್ರಿಯೆಯಲ್ಲಿ ‘ಜಟಕಾ ಥೊಡಾ ಕಮ್ ದೆ ನಹಿ ತೋ ಘುಂಘರು ಟೂಟ್ ಜಾಯೆಗಾ’ ಎಂದಿದ್ದಾನೆ. ಇನ್ನೊಬ್ಬ ನೇಟಿಜನ್ ತನ್ನ ಪ್ರತಿಕ್ರಿಯೆಯಲ್ಲಿ ಏನೇ ಹೇಳಿ ಸರ್ಕಾರಿ ಶಾಲೆಯಲ್ಲಿ ಮಾಡುವ ಮಸ್ತಿ ಸ್ವಲ್ಪ ಬೇರೆಯೇ ಆಗಿರುತ್ತದೆ ಎಂದಿದ್ದಾನೆ.