Articles

ಗೇಣುದ್ದ ಹೊಟ್ಟೆಗಾಗಿ ಶ್ರಮಿಸುವ ಚೋಟುದ್ದ ಹುಡುಗ ಟ್ಯಾಲೆಂಟ್ ನೋಡಿ; ಆತನ ಸ್ಕಿಲ್ ಏನಾದರೂ ತಿಳಿದರೆ ಸ್ವಲ್ಪ ನಮಗೂ ಹೇಳಿ..!

ಟ್ಯಾಲೆಂಟ್ ಯಾರ ಸ್ವತ್ತೂ ಅಲ್ಲ. ಸದ್ಯದ ಸಮಯದಲ್ಲಿ ಮನುಷ್ಯನ ಹತ್ತಿರ ಏನಾದರೂ ಟ್ಯಾಲೆಂಟ್ ಅಥವಾ ಸ್ಕಿಲ್ ಇದ್ದರೆ ಸೋಶಿಯಲ್ ಮೀಡಿಯಾ ಮುಖಾಂತರ ತಾನಾಗಿಯೇ ಜಗಜ್ಜಾಹೀರಾಗುತ್ತಾನೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ ಪಡೆದಾಗ ಒಂದೇ ರಾತ್ರಿಯಲ್ಲಿ ಎಲ್ಲರಿಗೂ ಪರಿಚಯವಾಗಿ ಬಿಡುತ್ತೀರಿ. ಈಗ ರಸ್ತೆಯ ಬದಿಗೆ ಕುಳಿತ ಈ ಬಾಲಕ ಜಾದೂ ಮಾಡಿ ತೋರಿಸಿದ್ದಾನೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಇದೇ ವಿಡಿಯೋ ಫುಲ್ ಸಂಚಲನ ಮೂಡಿಸಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 7 ಮಿಲಿಯನ್ ಗಟ್ಟಲೆ ವೀಕ್ಷಣೆಯನ್ನು ಪಡೆದಿದೆ.

ಹೊಟ್ಟೆ ಪಾಡಿಗಾಗಿ ರಸ್ತೆ ಮೇಲೆ ಕುಳಿತು ಈ ಪೋರ ಮಾಡಿದ ಜಾದೂವಿನ ಕೆಲವು ಟ್ರಿಕ್ಸ್ ಗಳನ್ನು ನೋಡುವಾಗ ನಿಜಕ್ಕೂ ಬೆರಗಾಗುತ್ತದೆ. ಆತ ಮಾಡುವ ಒಂದೊಂದು ಜಾದೂ ನೋಡುವಾಗ ನೆಟ್ಟಿಗ ಮಂತ್ರಮುಗ್ಧವಾಗುತ್ತಾನೆ. ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಈ ಮಕ್ಕಳು ಅದ್ಹೇಗೆ ಈ ಕಲೆಯನ್ನು ಕಲಿತಿರುತ್ತಾರೆ. ಆತನ ಕೈಚಳಕ ನೋಡಿದಾಗ ಗೊತ್ತಾಗುತ್ತದೆ ಈತ ಇದರಲ್ಲಿ ಎಷ್ಟೊಂದು ಚತುರನಾಗಿದ್ದಾನೆಂದು. ಆತ ಮಾಡುತ್ತಿರುವ ಜಾದೂವಿನ ಕಲೆಯನ್ನು ವರ್ಣಸುವದಕ್ಕಿಂತ ನೋಡುವುದೇ ಒಂದು ಸೊಬಗು.

ನೋಡಿ ಈ ಅದ್ಭುತ ವಿಡಿಯೋ…

ಪುಟ್ಟ ಬಾಲಕ ರಸ್ತೆ ಮೇಲೆ ತುಂಬಾ ಸುಂದರವಾಗಿ ಮಾಡಿದ ಜಾದೂವಿನ ಈ ವಿಡಿಯೋ ಇನ್ಸ್ಟಾಗ್ರಾಮ್ ನ ಅಕೌಂಟ್ ಮುಖಾಂತರ ವಿದಿಶಾ ಅಪ್ನಾ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 7 ಮಿಲಿಯನ್ ಜನರು ವೀಕ್ಷಿಸಿದ್ದು 9 ಲಕ್ಷಕ್ಕೂ ಹೆಚ್ಚು ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ.

Leave a Comment

Your email address will not be published. Required fields are marked *